ಆ್ಯಪ್ನಗರ

ಮತ ಚಲಾಯಿಸಿದ ವಿದ್ಯಾರ್ಥಿಗಳು

ಗದಗ : ನಗರದ ಜಗದ್ಗುರು ತೋಂಟದಾರ್ಯ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಪ್ರಸಕ್ತ ಸಾಲಿಗೆ ಶಾಲಾ ಸಂಸತ್‌ ಚುನಾವಣೆ ನಡೆಯಿತು.

Vijaya Karnataka 10 Jul 2019, 5:00 am
ಗದಗ : ನಗರದ ಜಗದ್ಗುರು ತೋಂಟದಾರ್ಯ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಪ್ರಸಕ್ತ ಸಾಲಿಗೆ ಶಾಲಾ ಸಂಸತ್‌ ಚುನಾವಣೆ ನಡೆಯಿತು.
Vijaya Karnataka Web students who voted
ಮತ ಚಲಾಯಿಸಿದ ವಿದ್ಯಾರ್ಥಿಗಳು


ಚುನಾವಣೆಗೆ 11ವರ್ಷದಿಂದ 15ವರ್ಷದವರೆಗಿನ ವಿದ್ಯಾರ್ಥಿಗಳಿಗೆ ಸ್ಪರ್ಧಿಸಲು ಅವಕಾಶ ನೀಡಲಾಗಿತ್ತು. ಪ್ರತಿಯೊಬ್ಬ ಸ್ಪರ್ಧಾಳುವಿಗೆ ಶಾಲೆಯ ಚುನಾವಣೆ ಅಧಿಕಾರಿಗಳು ಗುರುತಿನ ಚಿಹ್ನೆ ನೀಡಿದ್ದರು. ಶಾಲೆಯ ವಿದ್ಯಾರ್ಥಿಗಳೆ ಬೂತ ಮಟ್ಟದ ಚುನಾವಣೆ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು. ಕೃಷ್ಣಾ ಗೌಡರ ಮುಖ್ಯಚುನಾವಣೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಗುರುತಿನ ಚಿಹ್ನೆಯ ಬ್ಯಾಲೆಟ್‌ ಪೇಪರ ಸಿದ್ಧಪಡಿಸಲಾಗಿತು. ವಿದ್ಯಾರ್ಥಿಗಳು ಮತದಾನಕ್ಕೆ ಆಧಾರ ಕಾರ್ಡ್‌ ತೋರಿಸಿ ಮತದಾನ ಮಾಡುವ ಅವಕಾಶ ನೀಡಲಾಗಿತು. ಎರಡು ಬೂತ್‌ಗಳನ್ನು ಪ್ರಾಥಮಿಕ ಹಾಗೂ ಪ್ರೌಢ ಶಾಲೆಗೆ ನಿರ್ಮಿಸಲಾಗಿತ್ತು. ವಿದ್ಯಾರ್ಥಿಗಳು ಸರದಿ ಸಾಲಿನಲ್ಲಿ ನಿಂತು ತಮ್ಮ ಅಭ್ಯರ್ಥಿಗೆ ಮತ ಚಲಾಯಿಸಿದರು.

900ವಿದ್ಯಾರ್ಥಿಗಳಲ್ಲಿ 880ವಿದ್ಯಾರ್ಥಿಗಳು ಮತದಾನ ಮಾಡಿದರು. ಶಾಲಾ ವಿದ್ಯಾರ್ಥಿ ಪ್ರತಿನಿಧಿ ಸ್ಥಾನಕ್ಕೆ 16 ವಿದ್ಯಾರ್ಥಿಗಳು ಸ್ಪರ್ಧಿಸಿದ್ದರು. ಚಂದನಾ ಹೂಗಾರ 179ಮತ ಪಡೆದಿದ್ದಾರೆ. ಆಫ್ರಿನಾ ಕುಮನೂರ 151 ಮತ ಪಡೆದಳು. ಚುನಾವಣೆಯಲ್ಲಿ ಮುಖ್ಯೋಪಾಧ್ಯಾಯ ಕೊಟ್ರೇಶ ಮೆಣಸಿನಕಾಯಿ, ನಾಗರಾಜ ಗಾಳಿ, ಜಯಶ್ರೀ ವೀರಣ್ಣವರ, ಮಲ್ಲಮ್ಮ ಹೂಗಾರ, ಸುಜಾತಾ ದಂಡಗಿದಾಸರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ