ಆ್ಯಪ್ನಗರ

ವಾಲ್ಮೀಕಿ ಜಯಂತಿ ಅನುದಾನ ಸಂತ್ರಸ್ತರಿಗೆ ಸಲ್ಲಿಕೆ

ಗದಗ: ಜಿಲ್ಲೆಯಲ್ಲಿಸಂಭವಿಸಿದ ನೆರೆಯಿಂದ ಅನೇಕ ಜನ ಸಂಕಷ್ಟಕ್ಕೆ ಸಿಲುಕಿದ್ದು, ಸರಕಾರ ವಾಲ್ಮೀಕಿ ಜಯಂತಿ ಆಚರಣೆಗೆ ಬಿಡುಗಡೆ ಮಾಡಿದ ಅನುದಾನ ಹಾಗೂ ವಾಲ್ಮೀಕಿ ಸಮಾಜದವರು ಸಂಗ್ರಹಿಸಿದ ವಂತಿಗೆ ಸೇರಿದಂತೆ ಒಟ್ಟು 1.25 ಲಕ್ಷ ರೂ. ಚೆಕ್‌ನ್ನು ಮುಖ್ಯಮಂತ್ರಿಗಳ ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ಅರ್ಪಿಸಿ ವಾಲ್ಮೀಕಿ ಸಮಾಜದವರು ಮಾನವೀಯತೆ ಮೆರೆದರು.

Vijaya Karnataka 14 Oct 2019, 5:00 am
ಗದಗ: ಜಿಲ್ಲೆಯಲ್ಲಿಸಂಭವಿಸಿದ ನೆರೆಯಿಂದ ಅನೇಕ ಜನ ಸಂಕಷ್ಟಕ್ಕೆ ಸಿಲುಕಿದ್ದು, ಸರಕಾರ ವಾಲ್ಮೀಕಿ ಜಯಂತಿ ಆಚರಣೆಗೆ ಬಿಡುಗಡೆ ಮಾಡಿದ ಅನುದಾನ ಹಾಗೂ ವಾಲ್ಮೀಕಿ ಸಮಾಜದವರು ಸಂಗ್ರಹಿಸಿದ ವಂತಿಗೆ ಸೇರಿದಂತೆ ಒಟ್ಟು 1.25 ಲಕ್ಷ ರೂ. ಚೆಕ್‌ನ್ನು ಮುಖ್ಯಮಂತ್ರಿಗಳ ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ಅರ್ಪಿಸಿ ವಾಲ್ಮೀಕಿ ಸಮಾಜದವರು ಮಾನವೀಯತೆ ಮೆರೆದರು.
Vijaya Karnataka Web submission of valmiki jayanti grant victims
ವಾಲ್ಮೀಕಿ ಜಯಂತಿ ಅನುದಾನ ಸಂತ್ರಸ್ತರಿಗೆ ಸಲ್ಲಿಕೆ


ಭಾನುವಾರ ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಸರಕಾರ ವಾಲ್ಮೀಕಿ ಜಯಂತಿಗೆ ಕೊಟ್ಟಿರುವ ಹಣವನ್ನು ನೆರೆ ಸಂತ್ರಸ್ತರಿಗೆ ನೀಡಿದ್ದಕ್ಕಾಗಿ ಸಮಾಜದದವರಿಗೆ ಧನ್ಯವಾದ ಅರ್ಪಿಸಿದರು.

ಗಣಿ, ಭೂವಿಜ್ಞಾನ ಹಾಗೂ ಅರಣ್ಯ ಸಚಿವ ಸಿ.ಸಿ. ಪಾಟೀಲ ಮತ್ತು ಶಾಸಕ ಎಚ್‌.ಕೆ. ಪಾಟೀಲ ಅವರು ಕಳುಹಿಸಿದ ಸಂದೇಶ ವಾಚನ ಮಾಡಿದ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಖಾಜಾಹುಸೇನ ಮುಧೋಳ ಅವರು, ಮಹರ್ಷಿ ವಾಲ್ಮೀಕಿಯವರ ವಿಚಾರಧಾರೆ, ತತ್ವಾದರ್ಶಗಳು ಸಾರ್ವಕಾಲಿಕ. ಮನುಕುಲಕ್ಕೆ ಅವರು ನೀಡಿದ ಆದರ್ಶಯುತ ಮೌಲ್ಯಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿಅಳವಡಿಸಿಕೊಳ್ಳಬೇಕು ಎಂದರು.

ಜಿಪಂ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ, ಜಿಪಂ ಮುಖ್ಯ ಕಾರ‍್ಯನಿರ್ವಹಣಾಧಿಕಾರಿ ಡಾ. ಆನಂದ್‌ ಕೆ., ನಗರಸಭೆ ಪೌರಾಯುಕ್ತ ಮನ್ಸೂರ ಅಲಿ, ಗದಗ ಜಿಲ್ಲಾವಾಲ್ಮೀಕಿ ಸಂಘದ ಅಧ್ಯಕ್ಷ ಬಸವರಾಜ ಬೆಳಧಡಿ ಪ್ರಧಾನ ಕಾರ್ಯದರ್ಶಿ ವೈ.ಬಿ. ಹೆಬ್ಬಾಳ , ಕೋಶಾಧ್ಯಕ್ಷ ಎಚ್‌.ಎನ್‌. ಚಿಗರಿ, ನಗರಸಭೆ ಮಾಜಿ ಸದಸ್ಯೆ ಜ್ಯೋತಿ ಇರಾಳ , ವಸಂತ ಸಿದ್ದಮ್ಮನಹಳ್ಳಿ, ವೈ.ಡಿ. ತಳವಾರ, ಜಿ.ಎಚ್‌. ಪೂಜಾರ, ಹನುಮಂತಪ್ಪ ಕಕ್ಕೇರಿ, ಪ್ರಶಾಂತ ನಾಯ್ಕರ, ಆರ್‌.ಎಸ್‌. ಪೂಜಾರ , ಅನಿಲ ಸಿದ್ಧಮ್ಮನಹಳ್ಳಿ, ಮಹಾಂತೇಶ ಬೆಳಧಡಿ, ಐ.ಡಿ. ತಳವಾರ, ಶಿವಾನಂದ ಮಾದಣ್ಣವರ, ಪ್ರೊ. ಕೆ.ಎಚ್‌. ಬೇಲೂರ , ಎಸ್‌.ಎನ್‌. ಬಳ್ಳಾರಿ, ನಾಗರಾಜ ಅಸುಂಡಿ, ಗೋವಿಂದ ಪನ್ನೂರ , ಆನಂದ ದಿಡ್ಡಿ, ಮಂಜು ತಳವಾರ , ರಾಜು ಕಣಕಿಕೊಪ್ಪ, ಪಿ.ಬಿ. ಸಜ್ಜನರ, ಬಸವರಾಜ ಕುರಗೋಡ , ಶ್ರೀಕಾಂತ ನಾಗಾವಿ, ಶ್ರೀಕಾಂತ ಪೂಜಾರ, ಶಂಕರಪ್ಪ ಯರಗುಡಿ, ನಾಗರಾಜ ಯರಗುಡಿ, ಈಶ್ವರ ರವತೂರ, ರಮೇಶ ಹೊಟ್ಟಿ, ರಮೇಶ ಬರಮ್ಮಣ್ಣವರ, ರಾಮ ನಾಯಕ್‌ , ಅಯ್ಯಪ್ಪ ನಾಯ್ಕರ್‌ , ಡಿ.ಎಸ್‌. ತಳವಾರ , ಬಿ.ಎನ್‌. ಸಂದಿಗವಾಡ , ಡಾ. ಚಿಕ್ಕನರಗುಂದ , ಎಸ್‌.ಆರ್‌. ದರಗಾದ, ಸುಮಂಗಲಾ ತಳವಾರ ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ