ಆ್ಯಪ್ನಗರ

ಬಿಸಿಲಿನ ತಾಪ :ಕುರಿ,ಮೇಕೆಗೆ ಸಿಗ್ತಿಲ್ಲ ನೀರು

ಅಡವಿಸೋಮಾಪೂರ : ದಿನೇ ದಿನೇ ಏರುತ್ತಿರುವ ತಾಪಮಾನದಿಂದ ಕುರಿ ಮೇಕೆಗಳನ್ನು ಸಾಕಿ ಜೀವನ ಸಾಗಿಸುತ್ತಿರುವ ಕುರಿಗಾಹಿಗಳ ಬದುಕು ಕಷ್ಟಕರವಾಗಿದೆ. ಕುಡಿವ ನೀರಿನ ಅಭಾವ ಹಾಗೂ ಹುಲ್ಲು ಸಿಗದೆ ಬೀರು ಬೀರು ಬಿಸಿಲಿನ ಹೊಡೆತಕ್ಕೆ ಕುರಿ, ಮೇಕೆ ಮೇಯಿಸುಲು ಆತಂಕ ಪಡುವಂತಾಗಿದೆ.

Vijaya Karnataka 28 Apr 2019, 5:00 am
ಅಡವಿಸೋಮಾಪೂರ : ದಿನೇ ದಿನೇ ಏರುತ್ತಿರುವ ತಾಪಮಾನದಿಂದ ಕುರಿ ಮೇಕೆಗಳನ್ನು ಸಾಕಿ ಜೀವನ ಸಾಗಿಸುತ್ತಿರುವ ಕುರಿಗಾಹಿಗಳ ಬದುಕು ಕಷ್ಟಕರವಾಗಿದೆ. ಕುಡಿವ ನೀರಿನ ಅಭಾವ ಹಾಗೂ ಹುಲ್ಲು ಸಿಗದೆ ಬೀರು ಬೀರು ಬಿಸಿಲಿನ ಹೊಡೆತಕ್ಕೆ ಕುರಿ, ಮೇಕೆ ಮೇಯಿಸುಲು ಆತಂಕ ಪಡುವಂತಾಗಿದೆ.
Vijaya Karnataka Web sunny temperatures sheep and water do not get to the goat
ಬಿಸಿಲಿನ ತಾಪ :ಕುರಿ,ಮೇಕೆಗೆ ಸಿಗ್ತಿಲ್ಲ ನೀರು


ಕುಡಿವ ನೀರಿನ ಕೊರತೆ : ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದ ಕಾರಣ ಕುರಿ ಮಾಲೀಕರು ಆತಂಕದಲ್ಲಿದ್ದಾರೆ. ಹಳ್ಳ, ಕೆರೆಗಳಲ್ಲಿ ನೀರು ಬತ್ತಿಹೊಗಿದ್ದು, ಆಹಾರ ಮತ್ತು ನೀರಿನ ಕೊರತೆ ಮತ್ತು ಸುಡುವ ಬಿಸಿಲಿನ ಮಧ್ಯೆ ಅಲೆದಾಟ ಸಾಮಾನ್ಯವಾಗಿದೆ. ನೀರಿಗಾಗಿ ಹತ್ತಾರು ಕಿಮೀ ದೂರ ಹೋಗಿ ಬರಬೇಕಾದ ಸ್ಥಿತಿ ಇದೆ.

ಅಂತರ್ಜಲ ಮಟ್ಟದ ಕುಸಿತದಿಂದ ಭೂಮಿ ಮೇಲ್ಭಾಗದಲ್ಲಿ ನೀರು ಸಂಗ್ರಹವಾಗಿರುವುದು ಕಾಣುವುದು ಅಪರೂಪವಾಗಿದೆ. ಬಹುತೇಹ ಗ್ರಾಮಗಳಲ್ಲಿ ಕೊಳವೆ ಬಾವಿ ಆಶ್ರಯಿಸಬೇಕಾದ ಸ್ಥಿತಿ ಇದೆ. ಹೀಗಾಗಿ ನೀರು ಕುಡಿಸುವುದು ದೊಡ್ಡ ಸಮಸ್ಯೆ ಆಗಿದೆ.

ಬಿಸಿಲ ಝಳಕ್ಕೆ ತತ್ತರ : ಮಳೆರಾಯ ಮುನಿಸಿಕೊಂಡಿದ್ದರಿಂದ ಕುರಿಗಾಹಿಗಳ ಬದುಕು ಹೈರಾಣವಾಗಿದೆ. ಎತ್ತ ನೋಡಿದರೂ ಬರಡು ಭೂಮಿ ಎದ್ದು ಕಾಣುತ್ತಿದೆ. ಕುರಿ, ಮೇಕೆಗಳನ್ನು ಮೇಯಿಸಲು ಏನೂ ಇಲ್ಲದ ಕಾರಣ ಮತ್ತು ಬಿಸಿಲ ಝಳಕ್ಕೆ ತತ್ತರಿಸಿ ಹೋಗಿದ್ದಾರೆ.

ಆಶ್ರಯವಾದ ಗಿಡಮರಗಳ ನೆರಳು : ಹೆಚ್ಚಿದ ತಾಪಮಾನದಿಂದ ಗಿಡ ಮರಗಳ ನೆರಳಿನಲ್ಲಿ ವಿಶ್ರಾಂತಿ ಪಡೆಯುವುದು ಅನಿವಾರ್ಯವಾಗಿದೆ. 11ರಿಂದ ಬಿಸಿಲ ಝಳ ಹೆಚ್ಚಾಗುತ್ತಿರುವುದು ಸುಮಾರು ಮೂರು- ನಾಲ್ಕು ಘಂಟೆ ವರೆಗೂ ನೆರಳಿನಲ್ಲಿಯೇ ಇರಬೇಕಾದ ಪರಿಸ್ಥಿತಿ ಇದೆ.ಬೆಸಿಗೆ ಕಾಲದಲ್ಲಿ ಅಲ್ಲಲ್ಲಿ ಕುಡಿವ ನೀರಿನ ತೊಟ್ಟಿ ನಿರ್ಮಿಸಿದರೆ ಜಾನುವಾರು ಹಾಗೂ ಕುರಿ, ಮೇಕೆಗಳಲ್ಲಿ ಹೆಚ್ಚಿನ ಪ್ರಯೋಜನವಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ