ಆ್ಯಪ್ನಗರ

ಬೆಂಬಲ ಬೆಲೆ ಬಲೆ..!

ಸಿ.ಕೆ.ಗಣಪ್ಪನವರ ಮುಂಡರಗಿ: ನಾನಾ ಸಂಕಷ್ಟಗಳಿಂದ ಪರಿತಪಿಸಿರುವ ರೈತರು ಈಗ ಬೆಂಬಲ ಬೆಲೆ ಎಂಬ ಬಲೆಯಲ್ಲಿಸಿಲುಕುವಂತಾಗಿದೆ.

Vijaya Karnataka 14 Feb 2020, 5:00 am
ಸಿ.ಕೆ.ಗಣಪ್ಪನವರ ಮುಂಡರಗಿ: ನಾನಾ ಸಂಕಷ್ಟಗಳಿಂದ ಪರಿತಪಿಸಿರುವ ರೈತರು ಈಗ ಬೆಂಬಲ ಬೆಲೆ ಎಂಬ ಬಲೆಯಲ್ಲಿಸಿಲುಕುವಂತಾಗಿದೆ.
Vijaya Karnataka Web support price trap
ಬೆಂಬಲ ಬೆಲೆ ಬಲೆ..!


ಶೇಂಗಾ ಬೆಳೆಗೆ ಸರಕಾರ ಬೆಂಬಲ ಬೆಲೆ ಘೋಷಿಸಿದ ಹಿನ್ನೆಲೆಯಲ್ಲಿಕೃಷಿ ಇಲಾಖೆಯಿಂದ ಪಡೆದ ಎಫ್‌ಐಡಿ, ಬೆಳೆ ದೃಢೀಕರಣ ಪತ್ರ ಪ್ರತಿ, ಆಧಾರ ಕಾರ್ಡ್‌, ಬ್ಯಾಂಕ್‌ ಪಾಸ್‌ ಬುಕ್‌ ಹಾಗೂ ಜಮೀನು ಉತಾರದೊಂದಿಗೆ ನೋಂದಣಿ ಪ್ರಕ್ರಿಯೆ ನಡೆದಿದೆ. ಆದರೆ, ಹಲವು ತಾಂತ್ರಿಕ ದೋಷಗಳಿಂದ ನೋಂದಣಿಯಾಗದೇ ದಾಖಲೆಗಳನ್ನು ಹಿಡಿದುಕೊಂಡೇ ಓಡಾಡುವ ಪರಿಸ್ಥಿತಿ ರೈತರದಾಗಿದೆ.

ಶೇಂಗಾವನ್ನು ಸರಕಾರ ಸಹಕಾರ ಸಂಘಗಳ ಮೂಲಕ ಎಪಿಎಂಸಿ ಸಹಯೋಗದಲ್ಲಿಖರೀದಿಸಲು ಮುಂದಾಗಿದ್ದು, ಕ್ವಿಂಟಾಲ್‌ಗೆ 5090 ರೂ.ನಿಗದಿಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿತಾಲೂಕಿನಲ್ಲಿಎಣ್ಣೆ ಬೀಜ ಬೆಳೆಗಾರರ ಸಂಸ್ಕರಣ ಸಹಕಾರಿ ಸಂಘಗಳ ಮೂಲಕ ನೋಂದಣಿ ಕಾರ್ಯ ಆರಂಭವಾಗಿದ್ದು, ಫೆ.16 ಕೊನೆ ದಿನವಾಗಿದೆ. ಈಗಾಗಲೇ 200ಕ್ಕೂ ಹೆಚ್ಚು ಬೆಳೆಗಾರರು ನೋಂದಣಿ ಮಾಡಿಸಿದ್ದಾರೆ. ಉಳಿದವರು ತಾಂತ್ರಿಕ ಕಾರಣಗಳಿಂದ ನೋಂದಣಿಯಾಗದೆ ತೊಂದರೆ ಅನುಭವಿಸುತ್ತಿದ್ದಾರೆ.

ಜಮೀನಿನಲ್ಲಿಬೆಳೆದ ಬೆಳೆಯೇ ಒಂದಾದರೆ ದೃಢೀಕರಣ ಪತ್ರದಲ್ಲಿಇನ್ನೊಂದು ಬೆಳೆ ನಮೂದಾಗಿದೆ. ಈಗ ಮತ್ತೆ ದೃಢೀಕರಣ ಪತ್ರ ಪಡೆಯಲು ಸಾಧ್ಯವಾಗುತ್ತಿಲ್ಲ. ಇದರ ಜತೆಗೆ ಬ್ಯಾಂಕ್‌ ಖಾತೆಗೆ ಆಧಾರ ಲಿಂಕ್‌ ಮಾಡಿಸಿದರೂ ಎಫ್‌ಐಡಿ ಮೂಲಕ ನೋಂದಣಿ ಮಾಡಿಸಲು ಮುಂದಾದರೆ ಸ್ವೀಕಾರವಾಗುತ್ತಿಲ್ಲ. ಆಧಾರ ಜೋಡಣೆಯಾದ ಬ್ಯಾಂಕ್‌ ಖಾತೆಗೆ ಮಾತ್ರ ಬೆಂಬಲ ಬೆಲೆ ಮೊತ್ತ ಜಮಾ ಆಗುತ್ತದೆ. ಹೀಗಾಗಿ ರೈತರಿಗೆ ಏನು ಮಾಡಬೇಕೆಂದು ತೋಚದಾಗಿದೆ.

ಕೃಷಿ ಇಲಾಖೆ ಅಧಿಕಾರಿಗಳನ್ನು ಕೇಳಿದರೆ ನಮ್ಮಲ್ಲಿಏನೂ ದೋಷ ಇಲ್ಲ, ಆಧಾರ ಲಿಂಕ್‌ ಮಾಡಿಸಿರಿ ಎಂದು ಹೇಳುತ್ತಾರೆ. ಆದರೆ ಎಲ್ಲರೀತಿಯ ಆಧಾರ್‌ ಅಪಡೇಟ್‌ ಆದರೂ ನೋಂದಣಿಯಾಗುತ್ತಿಲ್ಲ. ತಹಸೀಲ್ದಾರರು ಮತ್ತು ಅಧಿಕಾರಿಗಳು ತುರ್ತಾಗಿ ಕ್ರಮ ಜರುಗಿಸಬೇಕು ಎಂದು ಡೋಣಿ, ಡಂಬಳ, ಕಲಕೇರಿ ಇತರ ಗ್ರಾಮದ ರೈತರು ಒತ್ತಾಯಿಸುತ್ತಿದ್ದಾರೆ.

ಸರಿ ಇದ್ದರೂ ಸ್ವೀಕೃತಿ ಇಲ್ಲ..!: ಕೃಷಿ ಇಲಾಖೆ ನೀಡಿರುವ ಎಫ್‌ಐಡಿ ನಂಬರ್‌ನಡಿ ಪರಿಶೀಲಿಸಿದರೂ ಆಧಾರ್‌ ಜೋಡಣೆಯಾಗಿಲ್ಲ, ಬ್ಯಾಂಕ್‌ ಖಾತೆ ಇಲ್ಲ, ಬೆಂಬಲ ಬೆಲೆ ಮೊತ್ತವನ್ನು ಜಮಾ ಮಾಡಲು ನೀವು ಕೂಡಲೇ ಆಧಾರ ಜೋಡಣೆಯಾಗಿರುವ ನಿಮ್ಮ ಬ್ಯಾಂಕ್‌ ಖಾತೆಯನ್ನು ಎಫ್‌ಐಡಿಗೆ ನೀಡಲು ತಿಳಿಸಿದೆ ಎಂಬ ಮೆಸೇಜ್‌ ಬರುತ್ತದೆ. ಬೇರೆ ಬೇರೆ ಆಧಾರಗೆ ಜೋಡಣೆಯಾದ ಬ್ಯಾಂಕ್‌ ಖಾತೆ ಸಂಖ್ಯೆ ಹಾಕಿ ನೋಂದಣಿ ಮುಂದಾದರೂ ಪ್ರಯೋಜನವಾಗುತ್ತಿಲ್ಲಎಂದು ರೈತರು ದೂರುತ್ತಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ