ಆ್ಯಪ್ನಗರ

ವಿದ್ಯಾರ್ಥಿ ಜೀವನದಲ್ಲಿ ಪ್ರತಿಭೆ ಅಂತರಾತ್ಮದ ಶಕ್ತಿ

ನರೇಗಲ್ಲ : ವಿದ್ಯಾರ್ಥಿ ಜೀವನದಲ್ಲಿ ಪ್ರತಿಭೆ ಅಂತರಾತ್ಮದ ಶಕ್ತಿಯಾಗಿದೆ. ಅದನ್ನು ಉತ್ತಮ ಶಿಕ್ಷ ಣ ಪಡೆಯುವ ಮೂಲಕ ಸಾದರಪಡಿಸಬೇಕು ಎಂದು ಜಿಲ್ಲಾ ಪಿಯು ಉಪ ನಿರ್ದೇಶಕ ಎಸ್‌. ಎಸ್‌. ಹಿರೇಮಠ ಹೇಳಿದರು.

Vijaya Karnataka 22 Aug 2019, 5:00 am
ನರೇಗಲ್ಲ : ವಿದ್ಯಾರ್ಥಿ ಜೀವನದಲ್ಲಿ ಪ್ರತಿಭೆ ಅಂತರಾತ್ಮದ ಶಕ್ತಿಯಾಗಿದೆ. ಅದನ್ನು ಉತ್ತಮ ಶಿಕ್ಷ ಣ ಪಡೆಯುವ ಮೂಲಕ ಸಾದರಪಡಿಸಬೇಕು ಎಂದು ಜಿಲ್ಲಾ ಪಿಯು ಉಪ ನಿರ್ದೇಶಕ ಎಸ್‌. ಎಸ್‌. ಹಿರೇಮಠ ಹೇಳಿದರು.
Vijaya Karnataka Web talent is the power of intuition in student life
ವಿದ್ಯಾರ್ಥಿ ಜೀವನದಲ್ಲಿ ಪ್ರತಿಭೆ ಅಂತರಾತ್ಮದ ಶಕ್ತಿ


ಸ್ಥಳೀಯ ಅನ್ನದಾನೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ವಿವಿಧ ಸಾಂಘಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. ಮಠಗಳು ಶಿಕ್ಷ ಣ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿವೆ. ಅದರಲ್ಲೂ ಅನ್ನದಾನೇಶ್ವರ ಮಠವು ಸ್ವಾತಂತ್ರ್ಯ ಪೂರ್ವದಲ್ಲಿಯೇ ಶಿಕ್ಷ ಣ ಸಂಸ್ಥೆ ಸ್ಥಾಪಿಸುವ ಮೂಲಕ ಉತ್ತರ ಕರ್ನಾಟಕದ ಶಿಕ್ಷ ಣಕಾಶಿ ಎಂಬ ಕೀರ್ತಿಗೆ ಪಾತ್ರವಾಗಿದೆ. ವಿದ್ಯಾರ್ಥಿಗಳು ಕೇವಲ ಓದಿನಿಂದಲೆ ಸಾಧನೆ ಮಾಡಬೇಕೆಂದಿಲ್ಲ ಕ್ರೀಡೆ, ನೃತ್ಯ, ಹಾಡುಗಾರಿಕೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ಸಾಧನೆ ತೋರಬಹುದಾಗಿದೆ ಎಂದರು.

ಧಾರವಾಡ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಡಾ. ಪ್ರಜ್ಞಾ ಮತ್ತಿಹಳ್ಳಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಏನು ಬೇಕಾದರೂ ಸಾಧಿಸುವಂತಹ ವಯಸ್ಸಿರುತ್ತದೆ. ಇಂತಹ ಅಮೂಲ್ಯ ವಯಸ್ಸು ಮತ್ತು ಸಮಯವನ್ನು ಸಾಧನೆಗಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಹಾಲಕೆರೆ ಸಂಸ್ಥಾನ ಮಠದ ಡಾ. ಅಭಿನವ ಅನ್ನದಾನ ಸ್ವಾಮಿಗಳು ಆರ್ಶಿವಚನ ನೀಡಿದರು.

ಹೆಚ್ಚು ಅಂಕ ಪಡೆದ 301 ವಿದ್ಯಾರ್ಥಿಗಳಿಗೆ ನಗದು ಪ್ರತಿಭಾ ಪುರಸ್ಕಾರ ನಡೆಯಿತು. ಪಿಯು ಕಾಲೇಜಿನ ಅಧ್ಯಕ್ಷ ಡಾ. ಶಾಂತಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ ಮಹಾಂತೇಶ ಸೋಮನಕಟ್ಟಿ, ಆಡಳಿತಾಧಿಕಾರಿ ಎಸ್‌.ಜಿ.ಹಿರೇಮಠ, ಪ್ರಾಚಾರ್ಯ ವೈ. ಸಿ. ಪಾಟೀಲ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ