ಆ್ಯಪ್ನಗರ

ಶಿಕ್ಷಕರ ಸ್ಥಿತಿ ದಯನೀಯ, ಹೊರಟ್ಟಿ

ಗದಗ: ರಾಜ್ಯದಲ್ಲಿ ಪ್ರಸ್ತುತ ಶಿಕ್ಷ ಕರ ಸ್ಥಿತಿ ದಯನೀಯವಾಗಿದೆ. ಇದಕ್ಕೆ ನಿದರ್ಶನವೆಂದರೆ ಕಳೆದ ನಾಲ್ಕು ತಿಂಗಳಿನಿಂದ ವೇತನ ಬಿಡುಗಡೆಯಾಗಿಲ್ಲ. ಇದರ ಪರಿಣಾಮದಿಂದ ಗುಣಮಟ್ಟದ ಶಿಕ್ಷ ಣಕ್ಕೆ ತೊಂದರೆಯಾಗುತ್ತಿದೆ ಎಂದು ವಿಧಾನಪರಿಷತ್‌ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

Vijaya Karnataka 21 Aug 2019, 5:00 am
ಗದಗ: ರಾಜ್ಯದಲ್ಲಿ ಪ್ರಸ್ತುತ ಶಿಕ್ಷ ಕರ ಸ್ಥಿತಿ ದಯನೀಯವಾಗಿದೆ. ಇದಕ್ಕೆ ನಿದರ್ಶನವೆಂದರೆ ಕಳೆದ ನಾಲ್ಕು ತಿಂಗಳಿನಿಂದ ವೇತನ ಬಿಡುಗಡೆಯಾಗಿಲ್ಲ. ಇದರ ಪರಿಣಾಮದಿಂದ ಗುಣಮಟ್ಟದ ಶಿಕ್ಷ ಣಕ್ಕೆ ತೊಂದರೆಯಾಗುತ್ತಿದೆ ಎಂದು ವಿಧಾನಪರಿಷತ್‌ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.
Vijaya Karnataka Web teacher status is kind horatti
ಶಿಕ್ಷಕರ ಸ್ಥಿತಿ ದಯನೀಯ, ಹೊರಟ್ಟಿ


ನಗರದ ಡಾ.ಬಸವರಾಜ ಧಾರವಾಡ ಅವರ ನಿವಾಸದಲ್ಲಿ ಶಿಕ್ಷ ಕರು ನೀಡಿದ ಮನವಿ ಹಾಗೂ ಸಮಸ್ಯೆಗಳನ್ನು ಆಲಿಸಿ ಅವರು ಮಾತನಾಡಿದರು.

ಕಳೆದ ಒಂದೂವರೆ ವರ್ಷದಿಂದ ಶಿಕ್ಷ ಣ ಸಚಿವರಿಲ್ಲದೇ, ಅಧಿಕಾರಿಗಳು ಹೇಳಿದ್ದೇ ಆಟವಾಗಿದೆ. ಹೀಗಾಗಿ ಇಲ್ಲಿಯವರೆಗೆ ಶಿಕ್ಷ ಕರ ವೇತನವಾಗಲೀ, ಅವರ ಸಮಸ್ಯೆಗಳಿಗೆ ಸ್ಪಂದಿಸುವುದಾಗಲೀ ವಿದ್ಯಾರ್ಥಿಗಳಿಗೆ ಸೈಕಲ್‌, ಪಠ್ಯಪುಸ್ತಕ, ಶೂ, ಸಾಕ್ಸ್‌ ಹಾಗೂ ಪಠ್ಯೇತರ ಸಾಮಗ್ರಿಗಳು ಬರದಿರುವುದು ಶೋಚನೀಯವಾಗಿದೆ ಎಂದು ಹೇಳಿದರು.

ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಎಸ್‌.ವಿ. ಶಿವಪ್ಪಯ್ಯನಮಠ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಘಟಕದ ಪರಿಷತ್‌ ಸದಸ್ಯ ಉಪತಹಸೀಲ್ದಾರ್‌ ಕುಮಾರ ಅಣ್ಣಿಗೇರಿ ಅವರನ್ನು ಸನ್ಮಾನಿಸಿದರು. ಡಾ.ಬಸವರಾಜ ಹೊರಟ್ಟಿ, ಎಸ್‌.ಎಂ. ಕೊಟಗಿ, ಎಸ್‌.ಎಂ. ಅಗಡಿ, ವಿ.ವಿ. ಬಳಿಗೇರ, ಜಯಲಕ್ಷ್ಮೇ ಅಣ್ಣಿಗೇರಿ, ಗೀತಾ ಭಿಕ್ಷಾವತಿಮಠ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ