ಆ್ಯಪ್ನಗರ

ಸಮಾಜ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ದೊಡ್ಡದು

ಹೊಳೆಆಲೂರ: ಒಂದು ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಉತ್ತಮ ಕೊಡುಗೆ ನೀಡುವಲ್ಲಿಪ್ರಾಥಮಿಕ ಶಿಕ್ಷಕರ ಪರಿಶ್ರಮ ದೊಡ್ಡದು. ಶಿಕ್ಷಕರು ನಾನಾ ಸಮಸ್ಯೆಗಳ ಪರಿಹಾರಕ್ಕಾಗಿ ಸಂಘಟಿತರಾಗಬೇಕು ಎಂದು ಸ್ಥಳೀಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆ ಎ ಜಿ ಚಿತ್ರಗಾರ ಹೇಳಿದರು.

Vijaya Karnataka 14 Jan 2020, 5:00 am
ಹೊಳೆಆಲೂರ: ಒಂದು ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಉತ್ತಮ ಕೊಡುಗೆ ನೀಡುವಲ್ಲಿಪ್ರಾಥಮಿಕ ಶಿಕ್ಷಕರ ಪರಿಶ್ರಮ ದೊಡ್ಡದು. ಶಿಕ್ಷಕರು ನಾನಾ ಸಮಸ್ಯೆಗಳ ಪರಿಹಾರಕ್ಕಾಗಿ ಸಂಘಟಿತರಾಗಬೇಕು ಎಂದು ಸ್ಥಳೀಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆ ಎ ಜಿ ಚಿತ್ರಗಾರ ಹೇಳಿದರು.
Vijaya Karnataka Web teachers role in social development
ಸಮಾಜ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ದೊಡ್ಡದು


ಸ್ಥಳೀಯ ಸರಕಾರಿ ಕನ್ನಡ ಶಾಲೆಯಲ್ಲಿನಡೆದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಾಸ್ತಾವಿಕ ಮಾತನಾಡಿದ ಶಿಕ್ಷಕ ಎಮ್‌ ವ್ಹಿ ಅರಳಿ, ಶಿಕ್ಷಕರಲ್ಲಿಸಮಸ್ಯೆ, ಕುಂದುಕೊರತೆ ಪರಿಹಾರಕ್ಕಾಗಿ ಸಂಘ ಮಾಡಲಾಗಿದ್ದು ಇದರ ಜತೆಗೆ ಶಿಕ್ಷರರೆಲ್ಲರೂ ಸೇರಿ ಹಣಕಾಸು ನೆರೆವಿನ ಸಂಸ್ಥೆ ತೆರೆಯುವ ಮೂಲಕ ಸಂಘದ ಬೆಳವಣಿಗೆ, ನಿವೃತ್ತ ಶಿಕ್ಷಕರಿಗೆ ಸನ್ಮಾನ ಮುಂತಾದ ಕಾರ್ಯಕ್ರಮ ಹಮ್ಮಿಕೊಳ್ಳುವ ಉದ್ದೇಶವಿದೆ ಎಂದರು.

ಮುಖ್ಯ ಅತಿಥಿ ಬಾಲಿಕೆಯರ ಶಾಲೆ ಮುಖ್ಯೋಪಾಧ್ಯಾಯ ಮಹೇಶ ಕುರಿ ಮಾತನಾಡಿ, ಈಗಾಗಲೇ ಶಿಕ್ಷಕರ ಸಂಘಗಳು ಅನೇಕ ಸಾಮಾಜಿಕ ಕಾರ್ಯ ಹಮ್ಮಿಕೊಂಡಿದೆ. ಕಲಿಕೆ ಸುಧಾರಣೆ, ಶಿಕ್ಷಕರ ಹಿತಕ್ಕಾಗಿ ಸ್ಟಂದಿಸುವ ಕಾರ್ಯಕ್ಕೆ ಇಲ್ಲಿಮುನ್ನುಡಿ ಬರೆದಿದ್ದು ಶ್ಲಾಘನೀಯ ಎಂದರು. ಸಾನ್ನಿಧ್ಯ ವಹಿಸಿದ್ದ ಯಚ್ಚರೇಶ್ವರ ಮಠದ ಯಚ್ಚರಸ್ವಾಮಿಗಳು ಶಿಕ್ಷಕರ ಸಂಘವು ಉತ್ತರೋತ್ತರವಾಗಿ ಬೆಳೆದು ಸಮಾಜಕ್ಕೆ ಉತ್ತಮ ಕೊಡುಗೆ ನೀಡಲಿ ಎಂದು ಹಾರೈಸಿದರು. ಉಪಾಧ್ಯಕ್ಷ ಎಸ್‌ ಎಮ್‌ ಅಂಬಿಗೇರ , ಸಿ ಆರ್‌ ಸಿಯ ಸಿ ಎನ್‌ ಜೋಗಿ ಮಾತನಾಡಿದರು.

ನಿವೃತ್ತ ಶಿಕ್ಷಕರ ಸನ್ಮಾನ ಕಾರ್ಯಕ್ರಮದ ನಿರ್ವಹಣೆಯನ್ನು ಬಿ ಎಚ ಹಾದಿಮನಿ ಮಾಡಿದರು. ವಾಯ್‌ ಎಸ ಸನಬದ, ವ್ಹಿ ಕೆ ಕ್ಯಾಮನಗೌಡ್ರ ಮುಂತಾದ ಶಿಕ್ಷಕರು ಉಪಸ್ಥಿತರಿದ್ದರು. ವ್ಹಿ ಎಸ್‌ ರುಮ್ಮಿ, ಗೀತಾ ದಾಸರ ಪ್ರಾರ್ಥಿಸಿದರು. ಎ ಎಮ್‌ ಸುಳ್ಳದ ಸ್ವಾಗತಿಸಿದರು. ಎಸ್‌ ವಾಯ್‌ ಹೆಬ್ಬಳ್ಳಿ ನಿರೂಪಿಸಿದರು. ಎಚ್‌ ವ್ಹಿ ಬ್ಯಾಡಗಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ