ಆ್ಯಪ್ನಗರ

ವಿಠಲಾಪುರಕ್ಕೆ ತಹಸೀಲ್ದಾರ, ಶಾಸಕರು ಭೇಟಿ

ಮುಂಡರಗಿ : ತಾಲೂಕಿನ ತುಂಗಭದ್ರ ನದಿ ತುಂಬಿ ಹರಿಯುತ್ತಿದ್ದು ಇದರ ಪರಿಣಾಮ ವಿಠಲಾಪುರದಲ್ಲಿ ನೀರು ನುಗ್ಗಿದ್ದು ಕೆಲವು ಮನೆಗಳು ಜಲಾವೃತಗೊಂಡಿವೆ.

Vijaya Karnataka 11 Aug 2019, 5:00 am
ಮುಂಡರಗಿ : ತಾಲೂಕಿನ ತುಂಗಭದ್ರ ನದಿ ತುಂಬಿ ಹರಿಯುತ್ತಿದ್ದು ಇದರ ಪರಿಣಾಮ ವಿಠಲಾಪುರದಲ್ಲಿ ನೀರು ನುಗ್ಗಿದ್ದು ಕೆಲವು ಮನೆಗಳು ಜಲಾವೃತಗೊಂಡಿವೆ.
Vijaya Karnataka Web GDG-9MDR5 VITAL PRAVAHA
ವಿಠಲಾಪುರಕ್ಕೆ ಗುರುವಾರ ರಾತ್ರಿಯಿಂದಲೇ ತುಂಗಭದ್ರಾ ನದಿಗೆ ನೀರಿನ ಪ್ರವಾಹದಿಂದ ಹೆಚ್ಚಾಗಿರುವದರಿಂದ ಗ್ರಾಮದ 8-10 ಮನೆಗಳು ಭಾಗಶಹ ಜಲಾವೃತಗೊಂಡಿವೆ.


ಗ್ರಾಮವು ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ಒಳಪಡುತ್ತಿದ್ದು ಇದು ಕೂಡಾ ಮುಳುಗಡೆಗೆ ಸಂಬಂಧಿಸಿದೆ ಆದರೆ ಗ್ರಾಮ ಸ್ಥಳಾಂತರಕ್ಕೆ ಅನೇಕ ಬಾರಿ ಒತ್ತಾಯಿಸಿದರೂ ಕ್ರಮ ಕೈಗೊಳ್ಳುತ್ತಿಲ್ಲ, ನದಿ ನೀರು ಹರಿವು ಹೆಚ್ಚಾದಾಗ ಮಾತ್ರ ಬಂದರೆ ನಮ್ಮ ಸಮಸ್ಯೆ ತಪ್ಪುತ್ತದೆಯೇ ಎಂದು ಗ್ರಾಮಸ್ಥರು ತಮ್ಮ ಅಸಹನೆ ಹೊರಹಾಕಿದರು.

ಗುರುವಾರ ರಾತ್ರಿಯಿಂದಲೇ ತುಂಗಭದ್ರಾ ನದಿಗೆ ನೀರು ಹೆಚ್ಚಾಗಿ ವಿಠಲಾಪೂರ ಗ್ರಾಮದಲ್ಲಿನ ಕೆಲವು ಮನೆಗಳು ಮುಳುಗಡೆ0åÜÞಗಿವೆ. ಶುಕ್ರವಾರ ಶಾಸಕ ರಾಮಣ್ಣ ಲಮಾಣಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಮೂಲ ಸೌಲಭ್ಯ ಕುರಿತು ನಾನು ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸುತ್ತೇನೆ ಎಂದರು.

ತಹಸೀಲ್ದಾರ ಡಾ.ವೆಂಕಟೇಶ ನಾಯಕ, ತಾಪಂ ಇಒ ಎಸ್‌.ಎಸ್‌.ಕಲ್ಮನಿ, ಎಇ ಬಸವರಾಜ, ಪಿಡಿಒ ವಡ್ಡರ, ಅಕ್ಷ ರ ದಾಸೋಹ ರಂಜನಾ ತಳಗೇರಿ, ಕರಬಸಪ್ಪ ಹಂಚಿನಾಳ, ಸುನಿಲ್‌ ಮಹಾಪುರುಷ, ಪರುಶುರಾಮ ಜೋಗೇರ, ಪುಟ್ಟಣ್ಣ ಐಗಾರ, ಕೋಟೆಪ್ಪ ಸ್ವಾಗಿ, ಮಹಾಂತೇಶ ಐಗಾರ, ದೇವಪ್ಪ ಬಾರಕೇರ, ಅಶೋಕ ಹಡಪದ, ಅಶೋಕ ರಡ್ಡಿ, ಪರುಶುರಾಮ ಬಾರಕೇರ, ಮಂಜುನಾಥ ಸೋಮಣ್ಣವರ, ಕೇಶಪ್ಪ ಸ್ವಾಗಿ, ದುರ್ಗಪ್ಪ ದೊಡ್ಡಮನಿ, ಎಚ್‌.ಟಿ.ಸ್ವಾಗಿ, ಆರ್‌.ಎಂ.ತಪ್ಪಡಿ, ಕೊಪ್ಪಣ್ಣ ಕೊಪ್ಪಣ್ಣನವರ, ರಾಜೇಂದ್ರ ಹುಜರತ್ತಿ ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ