ಆ್ಯಪ್ನಗರ

ವಿದ್ಯಾರ್ಥಿಗಳೊಂದಿಗೆ ನಾಗೂರ ಸಂವಾದ

ಗದಗ: ಇಲ್ಲಿನ ಸಿದ್ಧಲಿಂಗ ನಗರದ ಸರಕಾರಿ ಪ್ರೌಢ ಶಾಲೆಯಲ್ಲಿಸಾರ್ವಜನಿಕ ಸಿಕ್ಷಣ ಇಲಾಖೆ ಉಪನಿರ್ದೇಶಕ ಎನ್‌.ಎಚ್‌.ನಾಗೂರ ಇತ್ತೀಚೆಗೆ ಭೇಟಿ ನೀಡಿ ಎಲ್ಲಾತರಗತಿ ಮಕ್ಕಳ ಕಲಿಕೆ ಅವಲೋಕನ ಹಾಗೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗೆ ಸಂವಾದ ಕಾರ್ಯಕ್ರಮ ನಡೆಸಿದರು.

Vijaya Karnataka 1 Oct 2019, 5:00 am
ಗದಗ: ಇಲ್ಲಿನ ಸಿದ್ಧಲಿಂಗ ನಗರದ ಸರಕಾರಿ ಪ್ರೌಢ ಶಾಲೆಯಲ್ಲಿಸಾರ್ವಜನಿಕ ಸಿಕ್ಷಣ ಇಲಾಖೆ ಉಪನಿರ್ದೇಶಕ ಎನ್‌.ಎಚ್‌.ನಾಗೂರ ಇತ್ತೀಚೆಗೆ ಭೇಟಿ ನೀಡಿ ಎಲ್ಲಾತರಗತಿ ಮಕ್ಕಳ ಕಲಿಕೆ ಅವಲೋಕನ ಹಾಗೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗೆ ಸಂವಾದ ಕಾರ್ಯಕ್ರಮ ನಡೆಸಿದರು.
Vijaya Karnataka Web temple development with the help of devotees
ವಿದ್ಯಾರ್ಥಿಗಳೊಂದಿಗೆ ನಾಗೂರ ಸಂವಾದ


ಮಕ್ಕಳು ಪ್ರಸಕ್ತ ವರ್ಷದ ಪರೀಕ್ಷೆಯಲ್ಲಿಉತ್ತಮ ಫಲಿತಾಂಶ ಪಡೆಯುವ, ನಿರಂತರ, ಶ್ರದ್ಧೆಯಿಂದ ಅಭ್ಯಾಸ ಮಾಡುವ ಕ್ರಮ, ಬರವಣಿಗೆಯ ಮಹತ್ವ, ಮನನ ಮಾಡಿಕೊಳ್ಳುವ ವಿಧಾನ, ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ಕುರಿತು ಹಾಗೂ ಭಾಷಾ ವಿಷಯಗಳ ಅಧ್ಯಯನ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳಲ್ಲಿಬರುವ ಪ್ರಮುಖ ಅಂಶಗಳ ಕಲಿಕೆ ಬಗ್ಗೆ ಪರೀಕ್ಷಾ ಸಮಯದಲ್ಲಿಮಾಡಿಕೊಳ್ಳಬೇಕಾದ ಸಿದ್ಧತೆ, ಉತ್ತಮ ಆರೋಗ್ಯ, ಸಮಯದ ಉತ್ತಮ ಬಳಕೆ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿ ಅವರ ಪ್ರಶ್ನೆಗಳಿಗೆ ಉತ್ತರ ನೀಡಿದರು.

ಇದೇ ಸಂದರ್ಭದಲ್ಲಿಶಾಲೆಯ ಎಲ್ಲಶಿಕ್ಷಕರ ಸಭೆ ನಡೆಸಿ, ಮಕ್ಕಳಿಗೆ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಹೇಳಿದ ಅಂಶಗಳನ್ನು ಎಲ್ಲಶಿಕ್ಷಕರು ಆಗಾಗ್ಗೆ ಮಕ್ಕಳಿಗೆ ನೆನಪಿಸಲು ಉಪನಿರ್ದೇಕರು ತಿಳಿಸಿದರು.

ಎಚ್‌.ಬಿ.ರಡ್ಡೇರ, ಎಸ್‌.ಎಸ್‌. ಹವಾಲ್ದಾರ್‌, ವಿಷಯ ಪರಿವೀಕ್ಷಕ ಎಸ್‌.ಎಂ. ಮೆಣಸಿನಕಾಯಿ, ಮುಳಗುಂದಮಠ, ಎಲ್ಲಾಶಿಕ್ಷಕರು, ಶಾಲೆಯ 200 ಮಕ್ಕಳು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ