ಆ್ಯಪ್ನಗರ

ಮುಂಗಡ ಪತ್ರ ದೇಶದ ಅಭಿವೃದ್ಧಿಯ ದಿಕ್ಸೂಚಿ

ಗದಗ: ಸರಕಾರದ ಹಣಕಾಸಿನ ಅಂಕಿ ಸಂಖ್ಯೆಗಳು ಆ ದೇಶದ ಮುಂಗಡ ಪತ್ರದ ಮೂಲಕ ದೊರೆಯತ್ತಿದ್ದು, ಆ ಸಂಖ್ಯೆಗಳಿಂದ ದೇಶದ ಆರ್ಥಿಕ ದಿಕ್ಸೂಚಿಯನ್ನು ತಿಳಿದುಕೊಳ್ಳಲು ಸಾಧ್ಯ ಎಂದು ಪ್ರೊ.ವಿ.ಎ.ನಿಂಗೋಜಿ ಹೇಳಿದರು.

Vijaya Karnataka 5 Feb 2020, 5:00 am
ಗದಗ: ಸರಕಾರದ ಹಣಕಾಸಿನ ಅಂಕಿ ಸಂಖ್ಯೆಗಳು ಆ ದೇಶದ ಮುಂಗಡ ಪತ್ರದ ಮೂಲಕ ದೊರೆಯತ್ತಿದ್ದು, ಆ ಸಂಖ್ಯೆಗಳಿಂದ ದೇಶದ ಆರ್ಥಿಕ ದಿಕ್ಸೂಚಿಯನ್ನು ತಿಳಿದುಕೊಳ್ಳಲು ಸಾಧ್ಯ ಎಂದು ಪ್ರೊ.ವಿ.ಎ.ನಿಂಗೋಜಿ ಹೇಳಿದರು.
Vijaya Karnataka Web the advance letter is the countrys development compass
ಮುಂಗಡ ಪತ್ರ ದೇಶದ ಅಭಿವೃದ್ಧಿಯ ದಿಕ್ಸೂಚಿ


ನಗರದ ಪಂಡಿತ ಪಂಚಾಕ್ಷರ ಗವಾಯಿಗಳವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಆಶ್ರಯದಲ್ಲಿಕೇಂದ್ರ ಮುಂಗಡ ಪತ್ರ ಒಂದು ವಿಶ್ಲೇಷಣೆ ಎಂಬ ಕಾರ್ಯಕ್ರಮದಲ್ಲಿಮಾತನಾಡಿದರು.

ಮುಂಗಡ ಪತ್ರದ ಪದ ಬಳಕೆ ಅದರ ವಿವರಣೆ ನೀಡುತ್ತ ಸ್ವಾತಂತ್ರತ್ರ್ಯ ನಂತರ 71ನೇ ಪೂರ್ಣ ಪ್ರಮಾಣದ ಮುಂಗಡ ಪತ್ರವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸಂಸತ್ತಿನಲ್ಲಿಮಂಡಿಸಿದ್ದಾರೆ. ಆ ಮುಂಗಡ ಪತ್ರದ ಗಾತ್ರ 30,42,230 ಕೋಟಿ ರೂ. ಆಗಿದ್ದು ಇದನ್ನು ಆದಾಯ ತೆರಿಗೆ, ಜಿಎಸ್‌ಟಿ, ಕಾಪೋರ್‍ರೇಶನ ತೆರಿಗೆ, ಕಸ್ಟಮ್‌ ಶುಲ್ಕ, ಅಬಕಾರಿ ಶುಲ್ಕ, ಮೊದಲಾದ ತೆರಿಗೆಗಳೊಂದಿಗೆ ತೆರಿಗೆಯೇತರ ಮೂಲಗಳಿಂದ ಕೇಂದ್ರ ಸರಕಾರ ಆದಾಯ ಸಂಗ್ರಹಿಸುತ್ತಿದ್ದು ಇವುಗಳ ಸಂಕ್ಷೀಪ್ತ ಮಾಹಿತಿ ನೀಡಿ ಪ್ರಸಕ್ತ ಹಣಕಾಸು ವರ್ಷದಲ್ಲಿಯಾವ ಪ್ರಮಾಣದಲ್ಲಿಆದಾಯ ಸಂಗ್ರಹಿಸುತ್ತಾರೆ ಎಂದರು.

ಸಂಗ್ರಹಿಸಿದ ಈ ಆದಾಯವನ್ನು ಕೃಷಿ ಮೂಲ ಸೌಕರ್ಯ, ರಕ್ಷಣೆ, ಗೃಹ, ಸಾರಿಗೆ, ಆರೋಗ್ಯ ಸಬ್ಸಿಡಿ, ಗ್ರಾಮೀಣಾಭಿವೃದ್ಧಿ ಈ ಮೊದಲಾದವುಗಳ ಮಹತ್ವತೆಯ ಸಂಕ್ಷಿಪ್ತ ಮಾಹಿತಿಯನ್ನು ನೀಡುತ್ತ ಹಣಕಾಸು ವರ್ಷದಲ್ಲಿಯಾವ ಪ್ರಮಾಣದಲ್ಲಿವೆಚ್ಚ ಕೈಗೊಳ್ಳುತ್ತಾರೆ ಎಂಬುದನ್ನು ಅಂಕಿ ಸಂಖ್ಯೆಗಳ ಸಮೇತ ವಿವರಣೆ ನೀಡಿದರು.

ಪ್ರೊ.ಎ.ಜಿ.ಕಟ್ಟಿಮನಿ ಮಾತನಾಡಿ, ದೇಶದ ಪ್ರತಿಯೊಬ್ಬರಿಗೂ ಮುಂಗಡ ಪತ್ರದ ತಿಳಿವಳಿಕೆ ಅವಶ್ಯಕವಾಗಿದೆ. ತೆರಿಗೆ ಹಾಗೂ ಸರಕಾರದ ವೆಚ್ಚದ ಪ್ರಕಾರಗಳನ್ನು ಉದಾಹರಣೆ ಮೂಲಕ ಸಭೆಗೆ ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾ.ಜಿ.ಎಸ್‌. ಯತ್ನಟ್ಟಿ ಮಾತನಾಡಿ, ಮುಂಗಡ ಪತ್ರದ ಜ್ಞಾನ, ಪ್ರತಿಯೊಬ್ಬ ವಿದ್ಯಾರ್ಥಿಗೆ ಅವಶ್ಯಕವಿದ್ದು ಇತ್ತೀಚಿನ ಕೇಂದ್ರ ಮುಂಗಡ ಪತ್ರದ ಆಶೋತ್ತರಗಳು ಈಡೇರಲಿ ಎಂದರು.

ಪ್ರೊ.ಎಫ್‌.ಬಿ. ಅಂಗಡಿ, ಪ್ರೊ.ಎಂ.ಎನ್‌.ಹೊಂಬಾಳಿ, ಪ್ರೊ.ಕರಬಿಷ್ಠಿ, ರುಕ್ಮೀಣಿ ಲಂಬಾಣಿ, ಯಲ್ಲವ್ವ ಸಾಸ್ವಿಹಳ್ಳಿ, ವಿಜು ಸಾಳಗಿ, ಮುತ್ತು ಗುಡ್ಲಾನೂರ, ವಿದ್ಯಾರ್ಥಿಗಳು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ