ಆ್ಯಪ್ನಗರ

ಕನ್ನಡ ಧ್ವಜಾರೋಹಣ ನಿಷೇಧ ಸರಿಯಲ್ಲ

ಗದಗ: ರಾಜ್ಯ ಸರಕಾರ ಯಾವುದೇ ಪೂರ್ವಾಪರ ಚರ್ಚೆ ನಡೆಸದೇ ಕರ್ನಾಟಕ ರಾಜ್ಯೋತ್ಸವ ದಿನದಂದು ಕನ್ನಡ ಧ್ವಜಾರೋಹಣ ನಿಷೇಧಿಸಿರುವುದು ಸರಿಯಾದ ಕ್ರಮವಲ್ಲಎಂದು ಶಾಸಕ ಎಚ್‌.ಕೆ.ಪಾಟೀಲ ಹೇಳಿದರು.

Vijaya Karnataka 2 Nov 2019, 5:00 am
ಗದಗ: ರಾಜ್ಯ ಸರಕಾರ ಯಾವುದೇ ಪೂರ್ವಾಪರ ಚರ್ಚೆ ನಡೆಸದೇ ಕರ್ನಾಟಕ ರಾಜ್ಯೋತ್ಸವ ದಿನದಂದು ಕನ್ನಡ ಧ್ವಜಾರೋಹಣ ನಿಷೇಧಿಸಿರುವುದು ಸರಿಯಾದ ಕ್ರಮವಲ್ಲಎಂದು ಶಾಸಕ ಎಚ್‌.ಕೆ.ಪಾಟೀಲ ಹೇಳಿದರು.
Vijaya Karnataka Web the ban on kannada flags is not correct
ಕನ್ನಡ ಧ್ವಜಾರೋಹಣ ನಿಷೇಧ ಸರಿಯಲ್ಲ


ನಗರದಲ್ಲಿಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಕಾಏಕಿ ಸರಕಾರದ ಇಂತಹ ನಿರ್ಧಾರದಿಂದ ರಾಜ್ಯದ ಕನ್ನಡ ಅಭಿಮಾನಿಗಳಿಗೆ ನೋವುಂಟು ಮಾಡಿದೆ. ವರ್ಷದಲ್ಲಿಒಂದು ಸಾರಿ ಕನ್ನಡ ಧ್ವಜಾರೋಹಣ ಮಾಡುವುದು ಸಹ ನಿಷೇಧಿಸಿರುವುದು ಖಂಡನೀಯವಾಗಿದೆ ಎಂದರು.

ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿಕನ್ನಡ ಧ್ವಜರೋಹಣ ಮಾಡಬಾರದು ಎಂಬ ರಾಜ್ಯ ಸರಕಾರದ ಆದೇಶದಿಂದ ಕನ್ನಡ ಭಾಷೆ, ನೆಲ, ಜಲ, ಸಂಸ್ಕೃತಿ ನೆನಪಿಸಿ, ಅಭಿಮಾನ ಪಡುವ ಈ ದಿನದಂದು ಪ್ರಜಾಪ್ರಭುತ್ವ ವನ್ನು ಗಾಳಿಗೆ ತೂರಿದಂತಾಗಿದೆ. ಕೂಡಲೇ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಈ ನಿರ್ಧಾರ ಹಿಂಪಡೆಯಬೇಕು. ಜತೆಗೆ ಜನರ ಭಾವನಾತ್ಮಕ ವಿಚಾರಕ್ಕೆ ಸಂಬಂಧಿಸಿದ ವಿಷಯಗಳಲ್ಲಿಏಕಾಏಕಿ ನಿರ್ಧಾರ ತೆಗೆದುಕೊಳ್ಳಬಾರದು.ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಸರ್ವಪಕ್ಷ ಸಭೆ ಕರೆದು ಚರ್ಚೆ ನಡೆಸಬೇಕು ಎಂದರು.ಜಿಪಂ ಅಧ್ಯಕ್ಷ ಸಿದ್ದು ಪಾಟೀಲ, ಉಪಾಧ್ಯಕ್ಷೆ ಶಕುಂತಲಾ ಮೂಲಿಮನಿ, ಕೆ.ಬಿ.ತಳಗೇರಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ