ಆ್ಯಪ್ನಗರ

ಪಂ.ಪುಟ್ಟರಾಜರು ಶತಮಾನದ ಅದ್ಭುತ ಸೃಷ್ಟಿ

ಗದಗ: ಲಿಂ.ಪಂ. ಪುಟ್ಟರಾಜ ಗವಾಯಿಗಳು 20 ನೇ ಶತಮಾನದ ಅದ್ಭುತ ಸೃಷ್ಟಿಯಾಗಿದ್ದಾರೆ ಎಂದು ಹುಬ್ಬಳ್ಳಿ ಮೂರುಸಾವಿರ ಮಠದ ಜ.ಗುರುಸಿದ್ದ ರಾಜಯೋಗೀಂದ್ರ ಸ್ವಾಮಿಗಳು ಹೇಳಿದರು.

Vijaya Karnataka 10 Sep 2019, 5:00 am
ಗದಗ: ಲಿಂ.ಪಂ. ಪುಟ್ಟರಾಜ ಗವಾಯಿಗಳು 20 ನೇ ಶತಮಾನದ ಅದ್ಭುತ ಸೃಷ್ಟಿಯಾಗಿದ್ದಾರೆ ಎಂದು ಹುಬ್ಬಳ್ಳಿ ಮೂರುಸಾವಿರ ಮಠದ ಜ.ಗುರುಸಿದ್ದ ರಾಜಯೋಗೀಂದ್ರ ಸ್ವಾಮಿಗಳು ಹೇಳಿದರು.
Vijaya Karnataka Web the brilliant creation of the century by puttaraj gawai
ಪಂ.ಪುಟ್ಟರಾಜರು ಶತಮಾನದ ಅದ್ಭುತ ಸೃಷ್ಟಿ


ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿನಡೆದ ಗಾನಯೋಗಿ ಡಾ. ಪಂ.ಪುಟ್ಟರಾಜ ಸೇವಾ ಸಮಿತಿಯಿಂದ ಶಿವಯೋಗಿ ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳ 9 ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ಪ್ರಶಸ್ತಿ ಪ್ರದಾನ, ಸನ್ಮಾನ ಹಾಗೂ ಅಹೋರಾತ್ರಿ ಸಂಗೀತ ಸ್ವರ ನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಣ್ಣಿದ್ದವರು ಮಾಡದ ಸಾಧನೆ ಕಣ್ಣಿಲ್ಲದ ಪಂ.ಪುಟ್ಟರಾಜ ಗವಾಯಿಗಳು ಮಾಡಿದ್ದಾರೆ. ಭಗವಂತನು ಅವರನ್ನು ವಿಶೇಷವಾಗಿ ಸೃಷ್ಟಿ ಮಾಡಿ ಅವರ ಸಾಧನೆಗೆ ಎಲ್ಲರೂ ಮಾರು ಹೋಗುವಂತೆ ಮಾಡಿದ್ದಾರೆ. ಮಹಾನ್‌ ಸಂತರು ಬರೆದ 8 ಹಿಂದಿ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ ಹಿರಿಮೆ ಅವರದು. ಯಾವುದೇ ಭಾಷೆ ಕಲಿಯಬಹುದು ಆದರೆ, ಭಾಷೆಯೊಳಗಿನ ಅಂತರಂಗ, ಕಲೆ ಹಾಗೂ ಸೌಂದರ್ಯ ಅರಿಯುವುದು ಕಷ್ಟ .ಅಂತಹ ಸಾಧನೆಯನ್ನು ಪಂ.ಪುಟ್ಟರಾಜ ಗವಾಯಿಗಳು ಮಾಡಿದ್ದಾರೆ. ಕಬ್ಬಿಣದ ಕಡಲೆಯಾಗಿದ್ದ ಬಸವ ಪುರಾಣವನ್ನು ಹಿಂದಿ ಭಾಷೆಗೆ ಅನುವಾದ ಮಾಡಿದ ಏಕೈಕ ಕನ್ನಡ ವಿದ್ವಾಂಸರು ಪಂ.ಪುಟ್ಟರಾಜರು ಆಗಿದ್ದಾರೆ. ಸಂಸ್ಕೃತದ 4 ಸಾವಿರ ವ್ಯಾಕರಣ ಸೂತ್ರಗಳನ್ನು ಕಂಠಪಾಠ ಮಾಡಿ ಹೇಳಿರುವುದು ನಿಜಕ್ಕೂ ಅಚ್ಚರಿಯ ಸಂಗತಿ ಎಂದರು.

ತೋಂಟದಾರ್ಯ ಮಠದ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ , ಅಡ್ನೂರ ಬೃಹನ್ಮಠದ ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ, ನಿಚ್ಚಣಿಕೆ ಮಡಿವಾಳೇಶ್ವರ ಮಠದ ಪಂಚಾಕ್ಷರ ಸ್ವಾಮೀಜಿ, ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು, ಬಸವರಾಜ ಹಿಡ್ಕಿಮಠ ಸಮ್ಮುಖ ವಹಿಸಿದ್ದರು.

ಕೊಪ್ಪಳ ಜಂಗಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಯ್ಯ ನವಲಿಹಿರೇಮಠ, ಗಾನಯೋಗಿ ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಅಧ್ಯಕ್ಷ ಎಂ.ಜಿ.ಗುರುಸಿದ್ಧೇಶ್ವರ ಶಾಸ್ತ್ರಿಗಳು ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಕೊಪ್ಪಳದ ಲಿಂ.ರಾಜಶೇಖರಯ್ಯ, ಲಿಂ.ಮಾತೋಶ್ರೀ ನೀಲಾಂಬಿಕಾ ನವಲಿಹಿರೇಮಠ ಅವರ ಸ್ಮರಣಾರ್ಥ ಕೊಡಮಾಡುವ ಶಿವಯೋಗಿ ಪುಟ್ಟರಾಜ ಪ್ರಶಸ್ತಿಯನ್ನು ಶಿರಾಳಕೊಪ್ಪದ ಪಂ.ರೇವಣಪ್ಪ ಕುಂಕುಮಗಾರ, ಧಾರವಾಡದ ರೇಣುಕಾ ನಾಕೋಡ ಅವರಿಗೆ ನೀಡಿ ಗೌರವಿಸಲಾಯಿತು.

ಕೋಡಿಕೊಪ್ಪದ ರುದ್ರರಾಧ್ಯ ಶಾಸ್ತ್ರಿಗಳು ಚೌಕಿಮಠ, ಪಂ.ಬಸವಣ್ಣಯ್ಯಶಾಸ್ತ್ರಿಗಳು ಹಿರೇಮಠ, ತಾವರಗೇರಿಯ ಪಂ.ಶಿವರಾಜಶಾಸ್ತ್ರಿ ಅವರಿಗೆ ಕಥಾ ಕೀರ್ತನ ಕಂಠೀರವ ಪ್ರಶಸ್ತಿ, ಸಿ.ಎಸ್‌.ಹಿರೇಮಠ, ಮಹೇಶಗೌಡ್ರ ತಲೆಗೌಡ್ರ, ರುದ್ರಗೌಡ್ರ ರಬ್ಬನಗೌಡ್ರ, ಶರಣು ಗದಗ ಅವರಿಗೆ ಉದ್ಯೋಗ ರತ್ನ ಪ್ರಶಸ್ತಿ ಹಾಗೂ ಪಂಚಾಕ್ಷರಿ ಮಾಸ್ತರ ಅಣ್ಣಿಗೇರಿ ಅವರಿಗೆ ಸ್ವರ ಋುಷಿ ಪ್ರಶಸ್ತಿ ನೀಡಲಾಯಿತು.

ಬಳಗಾನೂರಿನ ಶರಭಯ್ಯಶಾಸ್ತ್ರಿಗಳ ರಚಿಸಿದ ಶ್ರೀಗುರು ಪುಟ್ಟರಾಜ ವಿರಚಿತ ಶ್ರೀ ಗುರುವಚನ ಪ್ರಭೆ ಕೃತಿಗಳು ಲೋಕಾರ್ಪಣೆಗೊಂಡವು.

ನಂತರ ಜರುಗಿದ ಸಂಗೀತ ಸ್ವರ ನಮನ ಕಾರ್ಯಕ್ರಮದಲ್ಲಿ ಮೈಸೂರಿನ ವಿದ್ವಾನ್‌ ಹರೀಶ ಪಾಂಡವ ಹಾಗೂ ತಂಡದವರಿಂದ ಸ್ಯಾಕ್ಸೋಫೋನ್‌ ವಾದನ, ಶಿರಾಳಕೊಪ್ಪದ ಪಂ.ರೇವಣಪ್ಪ ಕುಂಕುಮಗಾರ ಅವರಿಂದ ವಾಯೋಲಿನ್‌ ವಾದನ, ಧಾರವಾಡದ ರೇಣುಕಾ ನಾಕೋಡ ಅವರಿಂದ ಗಾಯನ, ಪಂ. ರಘುನಾಥ ನಾಕೋಡ ಅವರಿಂದ ತಬಲಾ ವಾದನ, ವೀರೇಶ್ವರ ಪುಣ್ಯಾಶ್ರಮದ ಶಿಷ್ಯರಿಂದ, ಕುಮಾರೇಶ್ವರ ಕೃಪಾಪೋಷಿತ ಪಂ. ಪಂಚಾಕ್ಷರಿ ಗವಾಯಿಗಳವರ ಸಂಗೀತ ಪಾಠಶಾಲೆ, ಪಂ. ಪಂಚಾಕ್ಷರಿ ಗವಾಯಿಗಳ ಸಂಗೀತ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಹಾಗೂ ಪಂ.ಪಂಚಾಕ್ಷರಿ ಗವಾಯಿಗಳ ಅಂಧರ ವಸತಿಯುತ ಸಂಗೀತ ಶಾಲೆ ಸಿಬ್ಬಂದಿಯಿಂದ ಅಹೋರಾತ್ರಿ ಸ್ವರ ನಮನ ಕಾರ್ಯಕ್ರಮ ಜರುಗಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ