ಆ್ಯಪ್ನಗರ

4 ವರ್ಷವಾದ್ರೂ ಮೇಲೆಳದ ಕಟ್ಟಡ

ಲಕ್ಕುಂಡಿ : ನಾಲ್ಕು ವರ್ಷಗಳ ಹಿಂದೆ ಇಲ್ಲಿಯ ಮಾರುತಿ ನಗರದಲ್ಲಿಯ ಸಾರ್ವಜನಿಕರ ಸಮುದಾಯ ಭವನ ಕಟ್ಟಡ ಕಾಮಗಾರಿ ಆರಂಭವಾಗಿ ಅರ್ಧಕ್ಕೆ ನಿಂತಿದ್ದು ಏಕೆ ಎಂದು ಜನರಿಗೆ ಕಾಡುತ್ತಿದೆ.

Vijaya Karnataka 2 Feb 2019, 5:00 am
ಲಕ್ಕುಂಡಿ : ನಾಲ್ಕು ವರ್ಷಗಳ ಹಿಂದೆ ಇಲ್ಲಿಯ ಮಾರುತಿ ನಗರದಲ್ಲಿಯ ಸಾರ್ವಜನಿಕರ ಸಮುದಾಯ ಭವನ ಕಟ್ಟಡ ಕಾಮಗಾರಿ ಆರಂಭವಾಗಿ ಅರ್ಧಕ್ಕೆ ನಿಂತಿದ್ದು ಏಕೆ ಎಂದು ಜನರಿಗೆ ಕಾಡುತ್ತಿದೆ.
Vijaya Karnataka Web the building is 4 years old
4 ವರ್ಷವಾದ್ರೂ ಮೇಲೆಳದ ಕಟ್ಟಡ


ಹಿಂದೂಳಿದ ಜನಾಂಗದವರೇ ಹೆಚ್ಚಾಗಿರುವ ಮಾರುತಿ ನಗರದಲ್ಲಿ ಸಾರ್ವಜನಿಕರ ಸಭೆ, ಸಮಾರಂಭಗಳಿಗೆ ಉಪಯೋಗವಾಗಬೇಕಿದ್ದ ಡಾ.ಬಾಬು ಜಗಜೀವನರಾಮ ಸಮುದಾಯ ಭವನಕ್ಕೆ ನಾಲ್ಕು ವರ್ಷಗಳಿಂದ ಕೇವಲ ಪ್ಲಿಂತ್‌ ಹಾಗೂ ಕಾಲಂ ಹಾಕಿ ಅಲ್ಲಿಗೆ ನಿಲ್ಲಿಸಲಾಗಿದೆ. ಈ ಜಾಗದಲ್ಲಿ ಕಸ ಕಡ್ಡಿ, ಮುಳ್ಳಿನ ಕಂಟಿ ಬೆಳೆದು ಹಲವು ವಿಷಕಾರಕ ಜಂತುಗಳು ವಾಸಿಸುವ ಸ್ಥಳವಾಗಿ ಮಾರ್ಪಾಡಾಗಿದ್ದು ಜನರು ಭಯಭೀತಿಯಲ್ಲಿ ವಾಸಿಸುವಂತಾಗಿದೆ.

5 ಲಕ್ಷ ರೂ.ಅನುದಾನ:

ಈ ಕಟ್ಟಡ ನಿರ್ಮಾಣ ಕಾಮಗಾರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ 5 ಲಕ್ಷ ರೂ. ಅನುದಾನ ಮಂಜೂರಿಯಾಗಿದ್ದು ಈವರೆಗೂ ಸಹ ಭವನ ಪೂರ್ಣಗೊಳ್ಳುತ್ತಿಲ್ಲ. ಈ ಭವನ ನಿರ್ಮಾಣಕ್ಕೆ ಹಲವು ಸಲ ಶಾಸಕರಿಗೆ ಒತ್ತಾಯಿಸಲಾಗಿತ್ತು. ಎರಡು ಭಾರಿ ಗುದ್ದಲಿ ಪೂಜೆ ನಡೆದು ಸಾರ್ವಜನಕರ ಪಾಲಿಗೆ ನಗೆಪಾಟಲಿಗೆ ಈಡಾಗಿತ್ತು. ಕಾಮಗಾರಿ ಅರ್ಧಕ್ಕೆ ನಿಂತಿರುವ ಕುರಿತು ಹಲವು ಸಲ ಅಧಿಕಾರಿಗಳನ್ನು ಕೇಳಿದರೆ ಇನ್ನೂ ವಾರ, ತಿಂಗಳೊಳಗೆ ಕಾಮಗಾರಿ ಆರಂಭಿಸಲಾಗುವುದು ಎಂದು ಹೇಳುತ್ತಲೇ ಬಂದಿದ್ದಾರೆ.

ಹಣ ಮಂಜೂರಾದರೂ ಕಾಮಗಾರಿ ಅರ್ಧಕ್ಕೆ :

ಗುತ್ತಿಗೆ ಪಡೆದ ಭೂ ಸೇನಾ ನಿಗಮಕ್ಕೆ ಮೊದಲ ಕಂತಿನ ಹಣ 5 ಲಕ್ಷ ರೂ. ಪಾವತಿಯಾಗಿದೆ. ಆದರೆ ಕೇವಲ ಸುಮಾರು 2 ಲಕ್ಷ ರೂ.ವರೆಗೂ ಮಾತ್ರ ಕಾಮಗಾರಿ ಆಗಿದ್ದು ಉಳಿದ ಹಣ ಏನಾಯಿತು ಎಂಬ ಪ್ರಶ್ನೆ ಸಾರ್ವಜನಿಕರದಾಗಿದೆ. ಮೂಲಗಳ ಪ್ರಕಾರ ಈ ಹಣವನ್ನು ಗುತ್ತಿಗೆದಾರರು ಬೇರೆ ಊರಿನ ಸಮುದಾಯ ಭವನಕ್ಕೆ ಬಳಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಬಾಬು ಜಗಜೀವನರಾಮ ಸಮುದಾಯ ಭವನ ನಿರ್ಮಾಣ ಕಾಮಗಾರಿಯನ್ನು ನಿರ್ಲಕ್ಷ ್ಯಸಿದ್ದಾರೆ. ಈ ಕುರಿತು ಸ್ಥಳೀಯ ಜನಪ್ರತಿನಿಧಿಗಳು ಸಹ ಲಕ್ಷ ್ಯ ವಹಿಸದಿರುವುದಕ್ಕೆ ಇಂತಹ ಹಲವು ಕಾಮಗಾರಿಗಳು ಅರ್ಧಕ್ಕೆ ನಿಲ್ಲುತ್ತಿದ್ದು ಬೇಜವಾಬ್ದಾರಿ ನೀತಿಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಮಗಾರಿ ಆರಂಭಗೊಳಿಸದಿದ್ದರೆ ಜಿಲ್ಲಾಧಿಕಾರಿಗೆ ದೂರು ನೀಡಿ ಪ್ರತಿಭಟಿಸಲಾಗುವುದು ಎಂದು ನಗರದ ನಿವಾಸಿಗಳಾದ ಬಸವರಾಜ ಅಕ್ಕಿ, ವೀರಯ್ಯ ನರಗುಂದಮಠ, ಕಾಶಿಮಯ್ಯ ಥೇವರ, ಹನುಮಂತಪ್ಪ ಬಾಳಿತೋಟ, ಮಾಬುಸಾಬ ಕೊರ್ಲಹಳ್ಳಿ, ಅಲ್ಲಾಭಕ್ಷಿ ತಲಾಲಚೂರ, ಮೌನೇಶ ರಿತ್ತಿ, ರಫೀಕ ಕದಾಂಪೂರ, ಸಂತೋಷ ಕವಲೂರ ಎಚ್ಚರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ