ಆ್ಯಪ್ನಗರ

ರೈತರ ಅಭಿವೃದ್ಧಿಯೇ ಜೆಡಿಎಸ್‌ ಗುರಿ

ಲಕ್ಕುಂಡಿ :ರಾಷ್ಟ್ರೀಯ ಪಕ್ಷ ಗಳು ರೈತರನ್ನು ನಿರ್ಲಕ್ಷಿಸಿದ್ದು, ಜೆಡಿಎಸ್‌ ಇಸ್ರೇಲ್‌ ತಂತ್ರಜ್ಞಾನದ ಮೂಲಕ ರೈತರಿಗೆ ಅಭಿವೃದ್ಧಿಗೆ ಶ್ರಮಿಸಲಿದೆ ಎಂದು ನರಗುಂದ ವಿಧಾನಸಭೆ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಗಿರೀಶಗೌಡ ಪಾಟೀಲ ಹೇಳಿದರು.

Vijaya Karnataka 5 May 2018, 5:00 am
ಲಕ್ಕುಂಡಿ :ರಾಷ್ಟ್ರೀಯ ಪಕ್ಷ ಗಳು ರೈತರನ್ನು ನಿರ್ಲಕ್ಷಿಸಿದ್ದು, ಜೆಡಿಎಸ್‌ ಇಸ್ರೇಲ್‌ ತಂತ್ರಜ್ಞಾನದ ಮೂಲಕ ರೈತರಿಗೆ ಅಭಿವೃದ್ಧಿಗೆ ಶ್ರಮಿಸಲಿದೆ ಎಂದು ನರಗುಂದ ವಿಧಾನಸಭೆ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಗಿರೀಶಗೌಡ ಪಾಟೀಲ ಹೇಳಿದರು.
Vijaya Karnataka Web the development of farmers is the target of jds
ರೈತರ ಅಭಿವೃದ್ಧಿಯೇ ಜೆಡಿಎಸ್‌ ಗುರಿ


ಬೆಂಬಲಿಗರೊಂದಿಗೆ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದ ಅವರು, ರೈತರಿಗೆ ಉಪಯೋಗವಾಗಲಿರುವ ಮಹದಾಯಿ, ಕಳಸಾ ಬಂಡೂರಿ ಯೋಜನೆಯ ಹೋರಾಟಕ್ಕೆ ಅನ್ಯಾಯವಾಗುತ್ತಿದ್ದು, ಪಕ್ಷ ವು ಈ ಯೋಜನೆ ಪರವಾಗಿ ಹೋರಾಟ ಮಾಡುತ್ತಾ ಬಂದಿದೆ. ರೈತರ ಸಾಲ ಮನ್ನಾ ಮಾಡುವುದರ ಮೂಲಕ ರೈತರ ಏಳ್ಗೆಗಾಗಿ ಕುಮಾರಸ್ವಾಮಿ ಅವರು ಶ್ರಮಿಸಲಿದ್ದಾರೆ. ಈವರೆಗೂ ಎರಡೂ ಪಕ್ಷ ಗಳು ಲಕ್ಕುಂಡಿಯನ್ನು ವಿಶ್ವ ಪರಂಪರೆ ಪಟ್ಟಿಗೆ ಸೇರಿಸುತ್ತೇವೆ ಎಂದು ಸುಳ್ಳು ಭರವಸೆ ನೀಡಿ ಕೇವಲ ಡಂಬಾಚಾರದ ಉತ್ಸವ ಆಚರಣೆ ಮಾಡಿದ್ದಾರೆ. ಜೆಡಿಎಸ್‌ ಸರಕಾರ ಬಂದ ಮೇಲೆ ಕ್ಷೇತ್ರವನ್ನು ರಾಷ್ಟ್ರ ಮಟ್ಟದಲ್ಲಿ ಬೆಳಗಿಸಿ ಯುವಕರಿಗೆ ಉದ್ಯೋಗ ಕಲ್ಪಸಲು ಯೋಜನೆ ರೂಪಿಸಲಾಗುವುದು ಎಂದರು.

ಗದಗ ಜಿಲ್ಲಾ ಜೆಡಿಎಸ್‌ ಸಂಘಟನಾ ಕಾರ್ಯದರ್ಶಿ ಅಂದಾನಯ್ಯ ಮುನವಳ್ಳಿಮಠ, ಯುವ ಧುರೀಣ ರಮೇಶ ಭಾವಿ, ಲಕ್ಕುಂಡಿ ಘಟಕದ ಅಧ್ಯಕ್ಷ ಬಸವರಾಜ ಕವಲೂರು, ಮಂಜುನಾಥ ಪರ್ವತಗೌಡರ, ಸಿದ್ದಪ್ಪ ಪೂಜಾರ, ಈರಪ್ಪ ಕುಂಬಾರ, ಮಹಾಂತೇಶ ತಿಂಪೂರ, ಈರಪ್ಪ ಕುಂಬಾರ ಸೇರಿದಂತೆ ಇತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ