ಆ್ಯಪ್ನಗರ

ಡಾ.ಎನ್‌.ಬಿ.ಪಾಟೀಲರ ವಜ್ರಮಹೋತ್ಸವ 11ಕ್ಕೆ

ಗದಗ : ನಗರದ ವಿವೇಕಾನಂದ ಸಭಾಭವನದಲ್ಲಿ ಆ.11 ರಂದು ಬೆಳಗ್ಗೆ 10ಕ್ಕೆ ನಗರದ ಖ್ಯಾತ ವೈದ್ಯ ಡಾ.ಎನ್‌.ಬಿ.ಪಾಟೀಲರ 75ನೇ ಜನ್ಮದಿನದ ಪ್ರಯುಕ್ತ ವಜ್ರಮಹೋತ್ಸವ ಹಾಗೂ ಡಾ.ಎನ್‌.ಬಿ.ಪಾಟೀಲ ಹೆಲ್ತ್‌ ಕೇರ್‌ ಫೌಂಡೇಶನ್‌ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನಿವೃತ್ತ ಪ್ರಾಚಾರ್ಯ ಚಂದ್ರಶೇಖರ ವಸ್ತ್ರದ ಹೇಳಿದರು.

Vijaya Karnataka 8 Aug 2019, 5:00 am
ಗದಗ : ನಗರದ ವಿವೇಕಾನಂದ ಸಭಾಭವನದಲ್ಲಿ ಆ.11 ರಂದು ಬೆಳಗ್ಗೆ 10ಕ್ಕೆ ನಗರದ ಖ್ಯಾತ ವೈದ್ಯ ಡಾ.ಎನ್‌.ಬಿ.ಪಾಟೀಲರ 75ನೇ ಜನ್ಮದಿನದ ಪ್ರಯುಕ್ತ ವಜ್ರಮಹೋತ್ಸವ ಹಾಗೂ ಡಾ.ಎನ್‌.ಬಿ.ಪಾಟೀಲ ಹೆಲ್ತ್‌ ಕೇರ್‌ ಫೌಂಡೇಶನ್‌ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನಿವೃತ್ತ ಪ್ರಾಚಾರ್ಯ ಚಂದ್ರಶೇಖರ ವಸ್ತ್ರದ ಹೇಳಿದರು.
Vijaya Karnataka Web GDG-7RUDRAGOUD11
ಗದಗನ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಚಂದ್ರಶೇಖರ ವಸ್ತ್ರದ ಮಾತನಾಡಿದರು.

ಬುಧವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಜ್ರಮಹೋತ್ಸವ ಕಾರ್ಯಕ್ರಮಕ್ಕೆ ಜ.ತೋಂಟದ ಸಿದ್ಧರಾಮೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಡಾ.ಎನ್‌.ಬಿ.ಪಾಟೀಲ ಕುರಿತ 'ವೈದ್ಯವಜ್ರ' ಗ್ರಂಥವನ್ನು ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ ಲೋಕಾರ್ಪಣೆ ಹಾಗೂ ಡಾ.ಎನ್‌.ಬಿ.ಪಾಟೀಲ ಹೆಲ್ತ್‌ ಕೇರ್‌ ಫೌಂಡೇಶನ್‌ ಉದ್ಘಾಟಿಸುವರು.ಮುಖ್ಯಅತಿಥಿಯಾಗಿ ಡಾ.ಎಂ.ಮಯ್ಯಾ ಪಾಲ್ಗೊಳ್ಳುವರು ಎಂದರು.

ಡಾ.ಪವನ್‌ ಪಾಟೀಲ್‌ ಮಾತನಾಡಿ, ಡಾ.ಎನ್‌.ಬಿ.ಪಾಟೀಲ ಹೆಲ್ತ್‌ ಕೇರ್‌ ಫೌಂಡೇಶನ್‌ ಮೂಲಕ ಜನರಿಗೆ ಉಚಿತ ವೈದ್ಯಕೀಯ ಸೇವೆ ಕಲ್ಪಿಸಲು ಉದ್ದೇಶಿಸಲಾಗಿದೆ. ಜಿಲ್ಲೆಯ ಆರೋಗ್ಯ ಸೇವೆಗಳಿಲ್ಲದ ಹಾಗೂ ಜಿಲ್ಲೆಯ ರಿಮೋಟ್‌ ಏರಿಯಾದಲ್ಲಿರುವ ಗ್ರಾಮಗಳ ಪೈಕಿ ಮುಂಡರಗಿ ತಾಲೂಕಿನ ಕೇಲೂರು ಗ್ರಾಮವನ್ನು ಫೌಂಡೇಶನ್‌ ದತ್ತು ಪಡೆದಿದೆ ಎಂದರು.

ಲೆಕ್ಕ ಪರಿಶೋಧಕ ಆನಂದ ಪೋತ್ನೀಸ್‌, ಶಿವಪ್ಪ ಗೌಡರ, ಬಂಗಾರಶೆಟ್ಟರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ