ಆ್ಯಪ್ನಗರ

ನಾರಾಯಣರಾವ್‌ ನಾಡಿನ ಕಣ್ಮಣಿ

ಗಜೇಂದ್ರಗಡ : ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ನಾಡಗೀತೆ ರಚಿಸಿದ ಹುಯಿಲಗೋಳ ನಾರಾಯಣರಾವ್‌ ಅವರು ಇಡೀ ಕನ್ನಡ ನಾಡಿನ ಕಣ್ಮಣಿಯಾಗಿದ್ದಾರೆ. ಅವರ ಕೊಡುಗೆ ಅಮೋಘ ಎಂದು ಉಪನ್ಯಾಸಕ ಡಿ.ಕೆ. ಕಟ್ಟಮನಿ ಹೇಳಿದರು.

Vijaya Karnataka 14 Oct 2019, 5:00 am
ಗಜೇಂದ್ರಗಡ : ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ನಾಡಗೀತೆ ರಚಿಸಿದ ಹುಯಿಲಗೋಳ ನಾರಾಯಣರಾವ್‌ ಅವರು ಇಡೀ ಕನ್ನಡ ನಾಡಿನ ಕಣ್ಮಣಿಯಾಗಿದ್ದಾರೆ. ಅವರ ಕೊಡುಗೆ ಅಮೋಘ ಎಂದು ಉಪನ್ಯಾಸಕ ಡಿ.ಕೆ. ಕಟ್ಟಮನಿ ಹೇಳಿದರು.
Vijaya Karnataka Web the disappearance of narayanraos pulse
ನಾರಾಯಣರಾವ್‌ ನಾಡಿನ ಕಣ್ಮಣಿ


ಸ್ಥಳೀಯ ಮೈಸೂರಮಠದಲ್ಲಿಶನಿವಾರ ಸಂಜೆ ಕನ್ನಡ ಸಾಹಿತ್ಯ ಪರಿಷತ್‌ದಿಂದ ನಡೆದ 170ನೇ ವಾರದ ಸಾಹಿತ್ಯ ಚಿಂತನಾಗೋಷ್ಠಿಯಲ್ಲಿಅವರು ಮಾತನಾಡಿದರು.

ಮುಂಬೈ ಕರ್ನಾಟಕ, ಹೈದ್ರಾಬಾದ ಕರ್ನಾಟಕ, ಮೈಸೂರ ಕರ್ನಾಟಕ ಪ್ರಾಂತಗಳಾಗಿ ಹರಿದು ಹಂಚಿ ಹೋಗಿದ್ದ ರಾಜ್ಯವನ್ನು ಒಂದುಗೂಡಿಸುವ ಮಹನೀಯರಲ್ಲಿಹುಯಿಲಗೋಳ ನಾರಾಯಣರಾವ್‌ ಒಬ್ಬರಾಗಿದ್ದಾರೆ. ಇಂತಹ ಮಹನೀಯರ ಭಾಷಾಭಿಮಾನ ಯುವಕರಿಗೆ ದಾರಿದೀಪ ಎಂದರು.

ಮಹಿಳಾ ಘಟಕ ಅಧ್ಯಕ್ಷೆ ಶರಣಮ್ಮಾ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಕೆ.ಜಿ. ಸಂಗಟಿ, ಎಂ.ಎಸ್‌. ಮಕಾನದಾರ, ಹುಚ್ಚಪ್ಪ ಹಾವೇರಿ, ಸಂಗಮದ, ಕರ್ನಿ, ವಿರೇಶ ಅಕ್ಕಿ, ಅಶ್ವಥ ವಿಶ್ವಬ್ರಾಹ್ಮಣ, ಬಸವರಾಜ ಮುನವಳ್ಲಿ, ಜೂಲಕಟ್ಟಿ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ