ಆ್ಯಪ್ನಗರ

ಮಹನೀಯರ ಸಂದೇಶ ಸಮಾಜಕ್ಕೆ ದಾರಿದೀಪ

ಗಜೇಂದ್ರಗಡ : ಸಾಹಿತ್ಯ ಕ್ಷೇತ್ರಕ್ಕೆ ಗುರುಪರಂಪರೆ ಕೊಡುಗೆ ಅಪಾರ. ಬಸವ, ಬುದ್ಧ, ಸರ್ವಜ್ಞ, ಸೂಪಿಗಳು, ದಾಸರಂತಹ ಮಹಾಮಹಿಮರ ಸಂದೇಶಗಳು ಸಮಾಜಕ್ಕೆ ದಾರಿದೀಪವಾಗಿವೆ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಕೆ.ಎ. ಹಾದಿಮನಿ ಹೇಳಿದರು.

Vijaya Karnataka 15 Jul 2019, 5:00 am
ಗಜೇಂದ್ರಗಡ : ಸಾಹಿತ್ಯ ಕ್ಷೇತ್ರಕ್ಕೆ ಗುರುಪರಂಪರೆ ಕೊಡುಗೆ ಅಪಾರ. ಬಸವ, ಬುದ್ಧ, ಸರ್ವಜ್ಞ, ಸೂಪಿಗಳು, ದಾಸರಂತಹ ಮಹಾಮಹಿಮರ ಸಂದೇಶಗಳು ಸಮಾಜಕ್ಕೆ ದಾರಿದೀಪವಾಗಿವೆ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಕೆ.ಎ. ಹಾದಿಮನಿ ಹೇಳಿದರು.
Vijaya Karnataka Web the great message is the road to society
ಮಹನೀಯರ ಸಂದೇಶ ಸಮಾಜಕ್ಕೆ ದಾರಿದೀಪ


ಸ್ಥಳೀಯ ಮೈಸೂರಮಠದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ದಿಂದ ಶನಿವಾರ ಸಂಜೆ ನಡೆದ 157ನೇ ವಾರದ ಸಾಹಿತ್ಯ ಚಿಂತನಾಗೋಷ್ಠಿ ಕಾರ‍್ಯಕ್ರಮದಲ್ಲಿ ಅವರು ಮಾತನಾಡಿದರು.

ದಾರ್ಶನಿಕರು, ಮಹಾತ್ಮರ ಜೀವನ ಚರಿತ್ರೆ ಓದುವುದರಿಂದ ಬದುಕಿನ ಜಂಜಾಟಗಳನ್ನು ಕಾಯಕ ಮೂಲಕ ಹೋಗಲಾಡಿಸಲು ಸಾಧ್ಯ ಎಂಬುದನ್ನು ಅರಿಯಬಹುದು. ಸಮಾಜದಲ್ಲಿ ಸಾಮರಸ್ಯ ಬದಕು ನಿರ್ಮಾಣವಾಗಲಿದೆ ಎಂದರು.

ಕಸಾಪ ಅಧ್ಯಕ್ಷ ಐ.ಎ. ರೇವಡಿ ಮಾತನಾಡಿ, ಗುರು ಪರಂಪರೆಗೆ ವಿಶಿಷ್ಟವಾದ ಸ್ಥಾನವಿದೆ. ವಿದ್ಯೆ, ಬುದ್ಧಿ ಕಲಿಸಿದ ಗುರು ಬದುಕಿನ ಚಿತ್ರಣವನ್ನೇ ಬದಲಿಸುತ್ತಾನೆ. ಭವಿಷ್ಯದ ಭದ್ರ ಬುನಾದಿ ಹಾಕುವವರು ಗುರುಗಳು ಎಂದರು. ಶರಣಮ್ಮಾ ಅಂಗಡಿ, ಶಂಕರ್‌ ಕಲ್ಲಿಗನೂರ, ಪ್ರೋ. ಬಸವರಾಜ ಮುನವಳ್ಳಿ, ಎಸ್‌.ಎಸ್‌. ನರೇಗಲ್‌, ಕೆ.ಜಿ. ಸಂಗಟಿ, ಹುಚ್ಚಪ್ಪ ಹಾವೇರಿ, ಎಮ್‌.ಎಸ್‌. ಮಕಾನದಾರ, ಶರಣಪ್ಪ ಬೇವಿನಕಟ್ಟಿ, ದಾನಮ್ಮಾ ಪಟ್ಟೇದ, ಲಕ್ಷ್ಮಿ ಬಿದರಿ, ಚೈತ್ರಾ ವಿಶ್ವಬ್ರಾಹ್ಮಣ, ಹನುಮಂತಪ್ಪ ಭಜೆಂತ್ರಿ, ಶಿಕ್ಷ ಕ ನೂಲ್ವಿ ಇನ್ನಿತರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ