ಆ್ಯಪ್ನಗರ

ಕನ್ನಡದ ನೆಲ ಅತ್ಯಂತ ಶ್ರೇಷ್ಠ : ಗುಳೇದ

ಲಕ್ಷ್ಮೇಶ್ವರ: ಕನ್ನಡ ಬರೀ ಭಾಷೆಯಲ್ಲ. ಅದು ಈ ನೆಲದ ಸಂಸ್ಕೃತಿ, ಸಂಸ್ಕಾರ, ಪರಂಪರೆ ಸಾರುವ ಶಕ್ತಿಯಾಗಿದೆ ಎಂದು ಕೆಎಸ್‌ಆರ್‌ಟಿಸಿ ಚಾಲಕ ಹನಮಂತಪ್ಪ ಗುಳೇದ ಅಭಿಪ್ರಾಯಪಟ್ಟರು.

Vijaya Karnataka 2 Nov 2020, 5:00 am
ಲಕ್ಷ್ಮೇಶ್ವರ: ಕನ್ನಡ ಬರೀ ಭಾಷೆಯಲ್ಲ. ಅದು ಈ ನೆಲದ ಸಂಸ್ಕೃತಿ, ಸಂಸ್ಕಾರ, ಪರಂಪರೆ ಸಾರುವ ಶಕ್ತಿಯಾಗಿದೆ ಎಂದು ಕೆಎಸ್‌ಆರ್‌ಟಿಸಿ ಚಾಲಕ ಹನಮಂತಪ್ಪ ಗುಳೇದ ಅಭಿಪ್ರಾಯಪಟ್ಟರು.
Vijaya Karnataka Web 1 LXR 2_25
ಬಾಲೇಹೊಸೂರದಲ್ಲಿಕನ್ನಡಾಭಿಮಾನಿ ಹನಮಂತಪ್ಪ ಗುಳೇದ ಅವರನ್ನು ಗ್ರಾಮಸ್ಥರು ಮತ್ತು ಕರವೇ ಸಂಘಟನೆ ವತಿಯಿಂದ ಸನ್ಮಾನಿಸಲಾಯಿತು.


ರಾಜ್ಯೋತ್ಸವ ಅಂಗವಾಗಿ ಬಸ್‌ನ್ನು ತಳಿರು ತೋರಣ, ಕನ್ನಡದ ಧ್ವ್ವಜಗಳಿಂದ ಶೃಂಗರಿಸಿ ಬಾಲೆಹೊಸೂರ ಗ್ರಾಮಕ್ಕೆ ಬಂದ ವೇಳೆ ಗ್ರಾಮದ ಕರವೇ ಕಾರ್ಯಕರ್ತರು, ಗ್ರಾಮಸ್ಥರ

ವತಿಯಿಂದ ನಡೆದ ಸನ್ಮಾನ ಕಾರ‍್ಯಕ್ರಮದಲ್ಲಿಮಾತನಾಡಿದರು. ಕನ್ನಡದ ನೆಲ ಅತ್ಯಂತ ಶ್ರೇಷ್ಠ ಮತ್ತು ಪವಿತ್ರವಾಗಿದೆ. ಕನ್ನಡ ನಾಡು ನುಡಿಯನ್ನು ಮತ್ತಷ್ಟು ಶ್ರೀಮಂತಗೊಳಿಸುವಲ್ಲಿನುಡಿಗಿಂತ ನಡೆ ಮುಖ್ಯವಾಗಿದೆ. ರಾಜ್ಯೋತ್ಸವ ಆಚರಣೆ ನಿತ್ಯೋತ್ಸವವಾಗಬೇಕು ಎಂದರು.

ತಾಪಂ ಸದಸ್ಯರಾದ ನಿಂಗಪ್ಪ ಜಾಲವಾಡಗಿ, ಅಪ್ಪಣ್ಣ ಕುಬೇರ, ಡಾ. ಡಿ.ಡಿ. ಬಡೇಖಾನವರ, ಯಲ್ಲಪ್ಪ ಸೂರಣಗಿ, ಫಕ್ಕಿರೇಶ ಮ್ಯಾಟೆಣ್ಣವರ, ಬಸವರೆಡ್ಡಿ ಹನಮರೆಡ್ಡಿ, ಗ್ರಾಮದ ಕರವೇ ಘಟಕದ ರಾಜು ಬಾಲೆಹೊಸೂರ, ವಿನಾಯಕ ಶಿರೋಳ, ಶಿವು ಮಿಳ್ಳಿ, ಹಜರೇಸಾಬ ಮಾಚೇನಹಳ್ಳಿ, ಲೊಕೇಶ ಜಾಲವಾಡಗಿ, ಮಲ್ಲೇಶ ಯತ್ನಳ್ಳಿ, ಮಾರುತಿ ಸತ್ಯಮ್ಮನವರ, ಮಾಂತೇಶ ಮಾಗಿ, ಮಂಜು ಕಬ್ಬೇರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ