ಆ್ಯಪ್ನಗರ

ಮಾನವೀಯತೆ ಮೆರೆದ ಹೃದಯಗಳು

ನರಗುಂದ : ಭೀಕರ ಪ್ರವಾಹಕ್ಕೆ ತಾಲೂಕಿನ ಐದು ಗ್ರಾಮಗಳು ಸಂಪೂರ್ಣ ಜಲಾವೃಗೊಂಡು ಮನೆ, ಮಠ ಕಳೆದುಕೊಂಡು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದ ಸಂತ್ರಸ್ತರ ನೆರವಿಗೆ ನರಗುಂದದ ವಿವಿಧ ಬಡಾವಣೆಯ ಯವಕರು ಸೇರಿದಂತೆ ಅನೇಕ ಸಂಘ, ಸಂಸ್ಥೆಗಳ, ಮಠಾಧೀಶರು ಸಹಾಯ ಹಸ್ತಚಾಚಿ ಮಾನವೀಯತೆ ಮೆರೆದಿದ್ದಾರೆ.

Vijaya Karnataka 13 Aug 2019, 5:00 am
ನರಗುಂದ : ಭೀಕರ ಪ್ರವಾಹಕ್ಕೆ ತಾಲೂಕಿನ ಐದು ಗ್ರಾಮಗಳು ಸಂಪೂರ್ಣ ಜಲಾವೃಗೊಂಡು ಮನೆ, ಮಠ ಕಳೆದುಕೊಂಡು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದ ಸಂತ್ರಸ್ತರ ನೆರವಿಗೆ ನರಗುಂದದ ವಿವಿಧ ಬಡಾವಣೆಯ ಯವಕರು ಸೇರಿದಂತೆ ಅನೇಕ ಸಂಘ, ಸಂಸ್ಥೆಗಳ, ಮಠಾಧೀಶರು ಸಹಾಯ ಹಸ್ತಚಾಚಿ ಮಾನವೀಯತೆ ಮೆರೆದಿದ್ದಾರೆ.
Vijaya Karnataka Web GDG-11NRD1G


ತಾಲೂಕಿನ ಭೈರನಹಟ್ಟಿ ಗ್ರಾಮದ ಸರಕಾರಿ ಶಾಲೆಯಲ್ಲಿ ಆಶ್ರಯ ಪಡೆದ ಸಂತ್ರಸ್ತರಿಗೆ ದೊರೆಸ್ವಾಮಿಠದ ಶಾಂತಲಿಂಗ ಸ್ವಾಮಿಗಳು ಬಟ್ಟೆ ವಿತರಿಸಿದರು. ತಮ್ಮ ಮಠದಿಂದ ಸಂತ್ರಸ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದರು.

ಶಿರೋಳ ಗ್ರಾಮದ ನೆರೆ ಪೀಡಿತ ಸಂತ್ರಸ್ತರು ಆಶ್ರಯ ಪಡೆದಿದ್ದ ಏಳು ಕಾಳಜಿ ಕೇಂದ್ರಕ್ಕೆ ತೆರಳಿ ರೊಟ್ಟಿ, ಉಪ್ಪಿಟ್ಟು, ಶಿರಾ ವಿತರಿಸಿ ಭಕ್ತರಿಗೆ ದೈರ್ಯ ತುಂಬಿದರು. ಹುಬ್ಬಳ್ಳಿ ಸಿದ್ಧಾರೂಢ ಮಠದ ಗೆಳೆಯರ ಬಳಗದ 15 ಜನ ದಾನಿಗಳು ಶಿರೊಳ ಸಂತ್ರಸ್ತರಿಗೆ ಸಹಾಯ ಮಾಡಿದ್ದಾರೆ. ಮಹಿಳೆಯರು, ಮಕ್ಕಳಿಗೆ ಬಟ್ಟೆ, ಬಿಸ್ಕಿಟ್‌, ಕುರುಕುರೆ, ರೊಟ್ಟಿ, ಚಾಕಲೇಟು, ಜಂಡುಭಾಮ್‌, ಸೊಳ್ಳಿ ಬತ್ತಿಗಳನ್ನು ವಿತರಿಸಿ ಮಾನವೀಯತೆ ಮೆರೆದರು.

ನ್ಯಾಯವಾದಿಗಳ ಸಂಘ : ಸಂತ್ರಸ್ತರ ನೆರವಿಗೆ ಧಾವಿಸಿದ ನ್ಯಾಯವಾದಿಗಳ ಸಂಘ ಕೊಣ್ಣೂರ, ವಾಸನ, ಲಖಮಾಪುರ, ಭೂದಿಹಾಳ ಗ್ರಾಮದ ಜನ ಆಶ್ರಯ ಪಡೆದ ಕಾಳಜಿ ಕೇಂದ್ರಗಳಿಗೆ ತೆರಳಿ ಹಾಸಿಗೆ ಹೊದಿಕೆ ನೀಡಿದರು. ನ್ಯಾಯಾಧೀಶರಾದ ಲಗ್ಮಾ ಹುಕ್ಕೇರಿ ಅವರು ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ವಕೀಲರ ಸಂಘದ ಅಧ್ಯಕ್ಷ ಎಸ್‌.ಎಚ್‌.ಹರಪನಹಳ್ಳಿ, ಸಿ.ಎಸ್‌.ಪಾಟೀಲ, ಕೆ.ಎಸ್‌.ಹುಲ್ಲೂರ, ಆರ್‌.ಸಿ.ಪಾಟೀಲ,ಎನ್‌.ಸಿ.ಪಾಟೀಲ, ಎಸ್‌.ವೈ.ಕೊಲ್ಲಾಪೂರ, ಎಸ್‌.ಎಂ.ಗುಗ್ಗರಿ, ರಮೇಶ ನಾಯ್ಕರ, ಎಂ.ಟಿ.ಪಾಟೀಲ, ವಿ.ಎಸ್‌.ದೇಶಪಾಂಡೆ, ಎಂ.ಡಿ.ರಂಗರಡ್ಡಿ, ಪಿ.ಎಸ್‌.ಹುಂಬಿ ಮುಂತಾದವರಿದ್ದರು.

ಈಶ್ವರೀಯ ವಿವಿ : ಇಲ್ಲಿನ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬ್ರ.ಪ್ರಭಕ್ಕನವರ ನೇತೃತ್ವದಲ್ಲಿ ಕೊಣ್ಣೂರು ಕೆಇಎಸ್‌ ಪ್ರೌಢ ಶಾಲೆ, ಕೊಣ್ಣೂರ ಎಪಿಎಂಸಿ ಸೇರಿದಂತೆ ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು.

ಆರೋಗ್ಯ ಶಿಬಿರ: ನರಗುಂದ ಬಸವೇಶ್ವರ ಸಮುದಾಯ ಭವನದಲ್ಲಿ ಆಶ್ರಯ ಪಡೆದ ಪ್ರವಾಹ ಪೀಡಿತ ಲಖಮಾಪುರ, ವಾಸನ, ಕೊಣ್ಣೂರ, ಬೂದಿಹಾಳ ಗ್ರಾಮದ ಸಂತ್ರಸ್ತರಿಗೆ ಐಆರ್‌ಡಿಎಸ್‌ ಸಂಸ್ಥೆಯಿಂದ

ಉಚಿತ ಆರೋಗ್ಯ ತಪಾಸಣೆ ಕೈಗೊಳ್ಳಲಾಯಿತು.ಮಹೇಶ ಕೊಳ್ಳಿಯವರ ನೇತೃತ್ವ ವಹಿಸಿದ್ದರು.

ಕನ್ನಡ ಪರ ಸಂಘಟನೆ ನೆರವು: ಮಲಪ್ರಭಾ ನದಿ ಪ್ರವಾಹ ಹಾಗೂ ಬೆಣ್ಣೆ ಹಳ್ಳ ಪ್ರವಾಹ ಪೀಡಿತ ಸಂತ್ರಸ್ತರ ನೆರವಿಗೆ ನಿಂತ ರೈತ ಸಂಘ, ಹಸಿರು ಸೇನೆ, ಕನ್ನಡ ಪರ ಸಂಘಟನೆ, ಜೈ ಕರ್ನಾಟಕ ಸಂಘಟನೆ ಕಾರ್ಯಕರ್ತರು ಹಣ್ಣು, ಬಿಸ್ಕಿ, ಫಲಾವು ವಿತರಣೆ ಮಾಡಿ ಮಾನವೀಯತೆ ಮೆರೆದರು.ರೈತ ಸಂಘದ ವಿಠಲ ಜಾಧವ ಅವರು ದೇವರು ಕೊಟ್ಟ ಈ ಜೀವನ ನೆರೆ ಪೀಡಿತ ಸಂತ್ರಸ್ಥರ ನೆರವಿಗೆ ನಿಲ್ಲೋನ. ಎಲ್ಲರೂ ಸಂತ್ರಸ್ಥರಿಗೆ ಸಹಾಯ ಮಾಡಲು ಮುಂದಾಗಬೇಕು ಎಂದು ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಅಧ್ಯಕ್ಷ ಬಸವರಾಜ ಸಾಬಳೆ, ಒಕ್ಕೂಟದ ಅಧ್ಯಕ್ಷ ಚನ್ನು ನಂದಿ, ಜೈ ಕರ್ನಾಟಕ ಜಿಲ್ಲಾ ಅದ್ಯಕ್ಷ ಬಸವರಾಜ ತಾವರೆ, ಮಂಜು ದೊಡಮನಿ, ಸಂದೀಪ ಸುಬೇದಾರ, ಕರವೆ ಅಧ್ಯಕ್ಷ ನಬಿಸಾಬ ಕಿಲ್ಲೇದಾರ ಹಾಗೂ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಯುವಕರಿಂದ ಅನ್ನ ಸಂತರ್ಪಣೆ: ಕರ್ನಾಟಕ ರಕ್ಷ ಣ ವೇದಿಕೆ(ಪ್ರವೀಣ ಶೆಟ್ಟಿ ಬಣ) ಕಾರ್ಯಕರ್ತರು, ಯುವಕರು ಸೇರಿ ನೆರೆ ಪೀಡಿತ ಗ್ರಾಮದ ಸಂತ್ರಸ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ಕರವೆ ಅಧ್ಯಕ್ಷ ಹನಮಂತ ಮಜ್ಜಿಗುಡ್ಡ, ಯುವ ಘಟಕ ಅಧ್ಯಕ್ಷ ಮುತ್ತು ಹೊಣವರ, ಕಾರ್ಯಾಧ್ಯಕ್ಷ ಯಲ್ಲಪ್ಪ ಹೊಸಮನಿ, ಪ್ರತಾಪ ದಾನೆ, ವಿನಾಯಕ ಮಂಜುನಾಥ ಪವಾರ, ಚಿನ್ನು ಜ್ಯೋತಿಬಾ ಭಾಗಹಿಸಿದ್ದರು.

ಹದಲಿ ಗ್ರಾಮದ ಯುವಕರು: ತಾಲೂಕಿನ ಹದಲಿ ಗ್ರಾಮ ಬೆಣ್ಣೆ ಹಳ್ಳಕ್ಕೆ ಭಾಗಶಃ ಭಾದಿತವಾಗಿದ್ದರೂ ಜಲಾವೃತ ಗ್ರಾಮಗಳ ಸಂತ್ರಸ್ತರ ಸಹಾಯಕ್ಕೆ ಮುಂದಾಗುವ ಮೂಲಕ ಮಾನವೀಯತೆ ಮರೆದಿದ್ದಾರೆ. ನೆರೆ ಪೀಡಿತ ಬೆಣಸಗಿ, ಗುಳಗುಂದಿ ಗ್ರಾಮಗಳಿಗೆ ತೆರಳಿ 2500 ರೊಟ್ಟಿ, 2500 ಚಪಾತಿ ವಿತರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ