ಆ್ಯಪ್ನಗರ

ಕೂರ್ಮಗಡ ಜಾತ್ರೆ ಸುಗಮ

ಕಾರವಾರ : ಕಳೆದ ಬಾರಿಯ ಕಹಿ ಘಟನೆ ಹಿನ್ನೆಲೆಯಲ್ಲಿಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರಿಂದ ಕೂರ್ಮಗಡ ನಡುಗಡ್ಡೆಯ ನರಸಿಂಹ ದೇವರ ಜಾತ್ರೆ ಶುಕ್ರವಾರ ಸುಗಮವಾಗಿ ನಡೆಯಿತು.

Vijaya Karnataka 11 Jan 2020, 7:11 pm
ಕಾರವಾರ : ಕಳೆದ ಬಾರಿಯ ಕಹಿ ಘಟನೆ ಹಿನ್ನೆಲೆಯಲ್ಲಿಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರಿಂದ ಕೂರ್ಮಗಡ ನಡುಗಡ್ಡೆಯ ನರಸಿಂಹ ದೇವರ ಜಾತ್ರೆ ಶುಕ್ರವಾರ ಸುಗಮವಾಗಿ ನಡೆಯಿತು.
Vijaya Karnataka Web the kormagada fair is smooth
ಕೂರ್ಮಗಡ ಜಾತ್ರೆ ಸುಗಮ


ಇಲ್ಲಿನ ದೇವರಿಗೆ ಪೂಜೆ ಸಲ್ಲಿಸಿದರೆ ಉತ್ತಮ ಮೀನು ಬೇಟೆಯಾಗುತ್ತದೆ ಎಂಬುದು ಮೀನುಗಾರರ ನಂಬಿಕೆ. ಅಲ್ಲದೇ ರಾಜ್ಯ, ಹೊರ ರಾಜ್ಯದ ಸಾವಿರಾರು ಭಕ್ತರು ಇಲ್ಲಿನ ದೇವರಿಗೆ ನಡೆದುಕೊಳ್ಳುತ್ತಾರೆ. ಇದರಿಂದ ಕಾರವಾರದಿಂದ ಸುಮಾರು 12 ಮೈಲಿ ದೂರ ಇರುವ ಕೂರ್ಮಗಡ ನಡುಗಡ್ಡೆಗೆ ಅಪಾರ ಭಕ್ತರು ದೋಣಿಗಳಲ್ಲಿತೆರಳುತ್ತಾರೆ. ಕಳೆದ ಬಾರಿ ನಡೆದ ದೋಣಿ ದುರಂತ ಹಿನ್ನೆಲೆ ಮತ್ತು ದೋಣಿಗಳ ಸಂಖ್ಯೆಯೂ ಕಡಿಮೆ ಇದ್ದುದರಿಂದ ಈ ಬಾರಿ ಭಕ್ತರ ಸಂಖ್ಯೆ ತಗ್ಗಿತ್ತು.

ಅಂಗಡಿಗಳು ಇರಲಿಲ್ಲ
ಪ್ರತಿ ವರ್ಷ ಜಾತ್ರೆ ದಿನ ಸಿಹಿ ತಿನಿಸು, ಆಟಿಕೆ ಸೇರಿದಂತೆ ನಾನಾ ಬಗೆಯ ನೂರಾರು ಅಂಗಡಿಗಳು ಕೂರ್ಮಗಡದಲ್ಲಿಕಾಣಸಿಗುತ್ತಿದ್ದವು. ಆದರೆ ಈ ಬಾರಿ ದೇವರಿಗೆ ಹಣ್ಣು ಕಾಯಿ ಸಮರ್ಪಿಸುವ ಸಲುವಾಗಿ ಒಂದೆರಡು ಅಂಗಡಿಗಳು ಮಾತ್ರ ಇದ್ದವು.

ಜಾತ್ರೆಯಲ್ಲಿಕುಡಿಯುವ ನೀರಿನ ಅಭಾವದಿಂದ ಜನ ಪರದಾಡುವಂತಾಯಿತು. ಈ ವಿಷಯ ತಿಳಿದ ಶಾಸಕಿ ರೂಪಾಲಿ ನಾಯ್ಕ ಅವರು ಸುಮಾರು 100 ನೀರಿನ ಬಾಕ್ಸ್‌ಗಳನ್ನು ಕಳುಹಿಸಿದ್ದು, ಕೆಲ ಭಕ್ತರ ನೀರಿನ ದಾಹ ಇಂಗಿತು. ನರಸಿಂಹ ದೇವರ ಪೂಜೆ ವಿಧಿವಿಧಾನಗಳು ಸಂಪ್ರದಾಯಬದ್ಧವಾಗಿ ಎಂದಿನಂತೆ ನಡೆಯಿತು.

ಇಂಟರ್‌ ಸೆಪ್ಟರ್‌ ಗಸ್ತು
ಜಾತ್ರೆಗೆ ಭಕ್ತರನ್ನು ಕರೆದೊಯ್ಯಲು ಮೀನುಗಾರಿಕೆ ಮತ್ತು ಪೊಲೀಸ್‌ ಇಲಾಖೆ ವತಿಯಿಂದ ಅನುಮತಿ ಪಡೆದ ಬೋಟ್‌ಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಸಮವಸ್ತ್ರಧಾರಿ ಮೀನುಗಾರ ಸ್ವಯಂ ಸೇವಕರು ಸುರಕ್ಷತೆಯ ಉಸ್ತುವಾರಿ ವಹಿಸಿದ್ದರು. ಪ್ರತಿಯೊಬ್ಬ ಪ್ರಯಾಣಿಕರಿಗೂ ಕಡ್ಡಾಯವಾಗಿ ಲೈಫ್‌ ಜಾಕೆಟ್‌ ನೀಡಲಾಗಿತ್ತು. ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. ಅಲ್ಲದೇ ಸುರಕ್ಷತೆಯ ದೃಷ್ಟಿಯಿಂದ ಕೋಸ್ಟ್‌ ಗಾರ್ಡ್‌ ವತಿಯಿಂದ ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಎರಡು ಇಂಟರ್‌ಸೆಪ್ಟರ್‌ ಬೋಟ್‌ಗಳು ಗಸ್ತು ತಿರುಗಿದವು.

ಕಳೆದ ಬಾರಿ ಏನಾಗಿತ್ತು?
ಕಳೆದ ಬಾರಿ (ಜ.21) ಜಾತ್ರೆ ನಂತರ ಕೂರ್ಮಗಡ ನಡುಗಡ್ಡೆಯಿಂದ ಕಾರವಾರಕ್ಕೆ ಜನರನ್ನು ಸಾಗಿಸುತ್ತಿದ್ದ ದೋಣಿಯೊಂದು ಸಮುದ್ರದಲ್ಲಿಮಗುಚಿ ಹಾವೇರಿ ಜಿಲ್ಲೆಯ ಒಂದೇ ಕುಟುಂಬದ 12 ಜನ ಸೇರಿದಂತೆ 16 ಜನರು ಜಲಸಮಾಧಿಯಾಗಿದ್ದರು. ಸುಮಾರು 20 ಜನರನ್ನು ಸಾಗಿಸುವ ಸಾಮರ್ಥ್ಯದ ದೋಣಿಯಲ್ಲಿ35ಕ್ಕೂ ಹೆಚ್ಚಿನ ಜನರನ್ನು ಕರೆದೊಯ್ಯುತ್ತಿದ್ದು ಈ ದುರಂತಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ