ಆ್ಯಪ್ನಗರ

ಆಸ್ಪತ್ರೆಗೆ ಬಾರದ ವೈದ್ಯರು, ಜನರ ಆಕ್ರೊಶ

ರೋಣ: ಬೆಳವಣಿಕಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇಬ್ಬರು ವೈದ್ಯರನ್ನು ನಿಯೋಜನೆ ಮಾಡಿದ್ದು,ಅವರು ಹಾಜರಾಗಿ ಹೋದವರು ಮರಳಿ ಬಾರದಿರುವುದರಿಂದ ರೋಗಿಗಳಿಗೆ ತೊಂದರೆಯಾಗಿದ್ದು ಇಂತವರನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿ ಗ್ರಾಮದ ಗೆಳೆಯರ ಬಳಗ ಶನಿವಾರ ಪ್ರತಿಭಟನೆ ನಡೆಸಿದರು

Vijaya Karnataka 21 Oct 2019, 5:00 am
ರೋಣ: ಬೆಳವಣಿಕಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇಬ್ಬರು ವೈದ್ಯರನ್ನು ನಿಯೋಜನೆ ಮಾಡಿದ್ದು,ಅವರು ಹಾಜರಾಗಿ ಹೋದವರು ಮರಳಿ ಬಾರದಿರುವುದರಿಂದ ರೋಗಿಗಳಿಗೆ ತೊಂದರೆಯಾಗಿದ್ದು ಇಂತವರನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿ ಗ್ರಾಮದ ಗೆಳೆಯರ ಬಳಗ ಶನಿವಾರ ಪ್ರತಿಭಟನೆ ನಡೆಸಿದರು
Vijaya Karnataka Web the outrage of doctors and people who are not hospitalized
ಆಸ್ಪತ್ರೆಗೆ ಬಾರದ ವೈದ್ಯರು, ಜನರ ಆಕ್ರೊಶ


ಮುತ್ತು ನಂದಿ ಮಾತನಾಡಿ, ಹಲವು ವರ್ಷಗಳಿಂದ ಆಸ್ಪತ್ರೆಗೆ ವೈದರು ಇಲ್ಲದೆ, ಕೆಳಹಂತದ ಸಿಬ್ಬಂದಿಯಿಂದ ಇಲ್ಲಿನ ಬಡವರು,ಸಾರ್ವಜನಿಕರು ಆರೋಗ್ಯ ಸೇವೆ ಪಡೆದುಕೊಳ್ಳುವಂತಾಗಿತ್ತು. ಈ ಕುರಿತು ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಹಲವು ಬಾರಿ ಸಾರ್ವಜನಿಕರು ಮಾಡಿಕೊಂಡ ಮನವಿಯಿಂದ ಇಬ್ಬರು ವೈದ್ಯರನ್ನು ನೇಮಕ ಮಾಡಲಾಗಿತ್ತು. ಅವರು ಬಂದು ಒಂದು ದಿನವೂ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ಇದರಿಂದ ಪ್ರಯೋಜನ ಯಾರಿಗೆ, ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿ ವಿಶಾಲವಾಗಿದ್ದು, 12 ಗ್ರಾಮಗಳು ಒಳಪಡುತ್ತಿದ್ದು, ಇಲ್ಲಿಗೆ ನೇಮಕಗೊಂಡ ವೈದ್ಯರು ಕರ್ತವ್ಯಕ್ಕೆ ಬಾರದೆ ಬಡವರ ಆರೋಗ್ಯದ ಜತೆ ಚಲ್ಲಾಟವಾಡುತ್ತಿದ್ದಾರೆ. ಇಂತಹ ವೈದ್ಯರನ್ನು ಬೇರೆಡೆ ಕಳುಹಿಸಿ, ಉತ್ತಮ ಸೇವೆ ಮಾಡುವ ವೈದ್ಯರನ್ನು ನೇಮಕ ಮಾಡಬೇಕು ಎಂದರು.

ವೈದ್ಯರು ಬಾರದ್ದರಿಂದ ಆರೋಗ್ಯ ಸಹಾಯಕಿರು ರೋಗಿಗಳ ಪಾಲಿಗೆ ದೇವರಾಗಿದ್ದು, ಎಲ್ಲವನ್ನೂ ಅವರೇ ನೋಡಿಕೊಳ್ಳುವಂತಾಗಿದೆ. ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ಕೂಡಲೇ ಗಮನ ಹರಿಸಿ ಸಮಸ್ಯೆ ಪರಿಹರಿಸಬೇಕು. ನಿರ್ಲಕ್ಷತ್ರ್ಯ ತಾಳಿದರೆ ಆಸ್ಪತ್ರೆಗೆ ಬೀಗ ಜಡಿದು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು

ಅಶೋಕ ತಾಳದವರ, ಬಸವರಾಜ ನಾಯ್ಕರ, ಹುಸೇನಸಾಬ ಕೊಲಕಾರ, ಸಂಗು ಸಂಗಳದ, ಚಂದ್ರು ಹದ್ಲಿ, ಜ್ಞಾನೇಶ ಹದ್ಲಿ, ಶರಣು ನಂದಿ, ಗಣೇಶ ಚಲವಾದಿ, ಕುಮಾರ ದಾನಿ, ಕುಮಾರ ಮಣ್ಣೂರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ