ಆ್ಯಪ್ನಗರ

ಗಮನ ಸೆಳೆದ ಅನುಭವ ಮಂಟಪ

ಹೊಸದಿಲ್ಲಿಯಲ್ಲಿಭಾನುವಾರ ನಡೆದ ಗಣರಾಜ್ಯೋತ್ಸವ ಪರೇಡ್‌ನಲ್ಲಿಗಮನ ಸೆಳೆದ ಕರ್ನಾಟಕದ ಅನುಭವ ಮಂಟಪ ಸ್ತಬ್ದಚಿತ್ರದ ರೀತಿಯಲ್ಲಿಯೇ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿಯ ...

Vijaya Karnataka 28 Jan 2020, 5:00 am
ಶಿಗ್ಲಿ: ಹೊಸದಿಲ್ಲಿಯಲ್ಲಿಭಾನುವಾರ ನಡೆದ ಗಣರಾಜ್ಯೋತ್ಸವ ಪರೇಡ್‌ನಲ್ಲಿಗಮನ ಸೆಳೆದ ಕರ್ನಾಟಕದ ಅನುಭವ ಮಂಟಪ ಸ್ತಬ್ದಚಿತ್ರದ ರೀತಿಯಲ್ಲಿಯೇ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿಯ ಜಿ.ಎಸ್‌.ಎಸ್‌.ಸಂಸ್ಥೆ ವಿದ್ಯಾರ್ಥಿಗಳಿಂದ ಸಿದ್ದಪಡಿಸಿದ ಸ್ತಬ್ದಚಿತ್ರವು ಸಾರ್ವಜನಿಕರ ಮೆಚ್ಚಿಗೆಗೆ ಪಾತ್ರವಾಯಿತು.
Vijaya Karnataka Web the pantheon of attention and experience
ಗಮನ ಸೆಳೆದ ಅನುಭವ ಮಂಟಪ


ಗ್ರಾಮದ ಕೆ.ಜಿ.ಮುದಗಲ್ಲಪ್ರೌಢಶಾಲೆ,ಜಿ.ಎಫ್‌.ಉಪನಾಳ ಪ್ರಾಥಮಿಕ ಶಾಲೆ,ಢವಳಗಿ ತಬ್ಬಣ್ಣಜ್ಜ ಪೂರ್ವಪ್ರಾಥಮಿಕ ಕ ಶಾಲೆ ಹಾಗೂ ಎಸ್‌.ಎ.ಹುಲಗೂರ ಆಂಗ್ಲಮಾದ್ಯಮ ಶಾಲೆಗಳ ಮಕ್ಕಳು ತೆರೆದ ಎರಡು ವಾಹನದಲ್ಲಿಅನುಭವ ಮಂಟಪದ ಸ್ತಬ್ದಚಿತ್ರವು ಗ್ರಾಮದ ಪ್ರಮುಖ ಬೀದಿಗಳಲ್ಲಿಸಂಚರಿಸಿ 12ನೇ ಶತಮಾನದ ಶಿವಶರಣರ ಕಲ್ಪನೆ ಮೂಡಿಸುವಲ್ಲಿಯಶಸ್ವಿಯಾಯಿತು.

ಬೀದರ್‌ ಜಿಲ್ಲೆಯ ಬಸವ ಕಲ್ಯಾಣದಲ್ಲಿ12ನೇ ಶತಮಾನದಲ್ಲಿಅಸ್ತಿತ್ವಕ್ಕೆ ಬಂದ ಅನುಭವ ಮಂಟಪವು ಸಾಮಾಜಿಕ,ಧಾರ್ಮಿಕ, ಪ್ರಜಾಪ್ರಬುತ್ವದ ನೆಲೆಗಟ್ಟಿನಲ್ಲಿಮಾನವ ಸಮಾಜದ ಅಭಿವೃದ್ಧಿಗೆ ಆಧ್ಯಾತ್ಮಿಕ ತತ್ವಶಾಸ್ತ್ರದ ಆಧಾರದ ಮೇಲೆ ಬಸವೇಶ್ವರರು ಹಾಕಿಕೊಟ್ಟ ಸಮಾನತೆಯ ದೃಷ್ಟಿಕೋನ, ಸಹೋದರತೆ ಹಾಗೂ ಸಹಭಾಗಿತ್ವದ ಹಾದಿಯಲ್ಲಿಸಮಾಜದ ಸುಧಾರಕರಾಗಿ ಒಂಬತ್ತು ಶತಮಾನಗಳ ಹಿಂದೆಯೇ ರೂಪಿಸಿದ ಸಾಮಾಜಿಕ ಪರಿಕಲ್ಪನೆ ಹಾಗೂ ಮಹಾನ್‌ ಮಾನವತಾವಾದಿ ಬಸವಾದಿ ಶರಣರ ಸಾಧನೆ ಅನುಪಮ ಎಂಬುದನ್ನು ಸ್ತಬ್ದ ಚಿತ್ರ ತೋರಿಸುವಲ್ಲಿಯಶಸ್ವಿಯಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ