ಆ್ಯಪ್ನಗರ

ವಿದ್ಯುತ್‌ ತಗುಲಿ ಕಬ್ಬು ಬೆಳೆ ಭಸ್ಮ

ಡಂಬಳ: ಕಟಾವು ಮಾಡಿ ಪ್ಯಾಕ್ಟರಿಗೆ ಕಳಿಸಬೇಕು ಎನ್ನುವಷ್ಟರಲ್ಲಿ ಗುರುವಾರ ಆಕಸ್ಮಿಕವಾಗಿ ಕಬ್ಬು ಬೆಳೆಗೆ ವಿದ್ಯುತ್‌ ತಗುಲಿ ಸುಟ್ಟ ಘಟನೆ ಪಟ್ಟಣದ ಯಲ್ಲವ್ವ ಬಸಪ್ಪ ಕುಲಕರ್ಣಿ ಎಂಬುವರಿಗೆ ಸೇರಿದ ಒಂದು ಎಕರೆ ಜಮೀನಿನಲ್ಲಿ ಸಂಭವಿಸಿದೆ.

Vijaya Karnataka 18 Jan 2019, 5:00 am
ಡಂಬಳ: ಕಟಾವು ಮಾಡಿ ಪ್ಯಾಕ್ಟರಿಗೆ ಕಳಿಸಬೇಕು ಎನ್ನುವಷ್ಟರಲ್ಲಿ ಗುರುವಾರ ಆಕಸ್ಮಿಕವಾಗಿ ಕಬ್ಬು ಬೆಳೆಗೆ ವಿದ್ಯುತ್‌ ತಗುಲಿ ಸುಟ್ಟ ಘಟನೆ ಪಟ್ಟಣದ ಯಲ್ಲವ್ವ ಬಸಪ್ಪ ಕುಲಕರ್ಣಿ ಎಂಬುವರಿಗೆ ಸೇರಿದ ಒಂದು ಎಕರೆ ಜಮೀನಿನಲ್ಲಿ ಸಂಭವಿಸಿದೆ.
Vijaya Karnataka Web the power consumption and the sugarcane crop
ವಿದ್ಯುತ್‌ ತಗುಲಿ ಕಬ್ಬು ಬೆಳೆ ಭಸ್ಮ


ಡಂಬಳದ ಯಲ್ಲವ್ವ ಬಸಪ್ಪ ಕುಲಕರ್ಣಿ ಎಂಬುವರ ಒಂದು ಎಕರೆ ಜಮೀನಿನಲ್ಲಿ ಕಬ್ಬು ನಾಟಿ ಮಾಡಿ 12 ತಿಂಗಳು ಕಳೆದಿದ್ದರಿಂದ ಕಟಾವಿಗೆ ಬಂದಿತ್ತು. ಈ ವಾರದಲ್ಲಿ ಕಟಾವು ಮಾಡಿ ಪ್ಯಾಕ್ಟರಿಗೆ ಕಳಿಸಬೇಕೆಂಬ ಉದ್ದೇಶವಿತ್ತು. ಆದರೆ ಮಧ್ಯಾಹ್ನ 3 ಗಂಟೆಗೆ ಆಕಸ್ಮಿಕವಾಗಿ ವಿದ್ಯುತ್‌ ತಗುಲಿದ್ದರಿಂದ ಬಹುತೇಕ ಕಬ್ಬು ಸುಟ್ಟು ಕರಕಲಾಗಿದೆ ಎನ್ನುತ್ತಾರೆ ರೈತ ಮಹಿಳೆ ಯಲ್ಲವ್ವ.

ಮುಂಡರಗಿ ನಗರದ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷ ಣ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶ್ವಸಿಯಾಗಿದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗುವುದನ್ನು ರಕ್ಷ ಣೆ ಮಾಡಲಾಗಿದೆ. ಒಂದು ಲಕ್ಷ ರೂ. ಮೌಲ್ಯದ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ