ಆ್ಯಪ್ನಗರ

ಮದ್ಯಮುಕ್ತ ರಾಜ್ಯವಾಗಿಸಲು ಹಕ್ಕೊತ್ತಾಯ

ಶಿರಹಟ್ಟಿ : ಮದ್ಯಮುಕ್ತ ರಾಷ್ಟ್ರದ ಪರಿಕಲ್ಪನೆಯನ್ನು ರಾಜ್ಯದಲ್ಲಿಧರ್ಮಸ್ಥಳ ಸಂಸ್ಥೆಯ ವತಿಯಿಂದ ಡಾ.ವೀರೇಂದ್ರ ಹೆಗ್ಗಡೆ ಅವರು ಜನಜಾಗೃತಿ ವೇದಿಕೆ ರಚಿಸುವುದರ ಮೂಲಕ ಸಮಾಜದ ಸ್ವಾಸ್ತತ್ರ್ಯ ಕಾಪಾಡುವುದಕ್ಕೆ ಹಲವಾರು ಜಾಗೃತಿ ಕಾರ‍್ಯಕ್ರಮ ಹಮ್ಮಿಕೊಂಡಿದೆ ಎಂದು ಜಿಲ್ಲಾಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಶಿವಪ್ರಕಾಶ ಮಹಾಜನಶೆಟ್ಟರ ಹೇಳಿದರು.

Vijaya Karnataka 28 Sep 2019, 5:00 am
ಶಿರಹಟ್ಟಿ : ಮದ್ಯಮುಕ್ತ ರಾಷ್ಟ್ರದ ಪರಿಕಲ್ಪನೆಯನ್ನು ರಾಜ್ಯದಲ್ಲಿಧರ್ಮಸ್ಥಳ ಸಂಸ್ಥೆಯ ವತಿಯಿಂದ ಡಾ.ವೀರೇಂದ್ರ ಹೆಗ್ಗಡೆ ಅವರು ಜನಜಾಗೃತಿ ವೇದಿಕೆ ರಚಿಸುವುದರ ಮೂಲಕ ಸಮಾಜದ ಸ್ವಾಸ್ತತ್ರ್ಯ ಕಾಪಾಡುವುದಕ್ಕೆ ಹಲವಾರು ಜಾಗೃತಿ ಕಾರ‍್ಯಕ್ರಮ ಹಮ್ಮಿಕೊಂಡಿದೆ ಎಂದು ಜಿಲ್ಲಾಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಶಿವಪ್ರಕಾಶ ಮಹಾಜನಶೆಟ್ಟರ ಹೇಳಿದರು.
Vijaya Karnataka Web the right to make the state a liquor free state
ಮದ್ಯಮುಕ್ತ ರಾಜ್ಯವಾಗಿಸಲು ಹಕ್ಕೊತ್ತಾಯ


ಪಟ್ಟಣದ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ವತಿಯಿಂದ ಅ.3ರಂದು ಶಿರಹಟ್ಟಿ ಪಟ್ಟಣದಲ್ಲಿನಡೆಯಲಿರುವ ಜಿಲ್ಲಾಮಟ್ಟದ ಗಾಂಧಿ ಸ್ಮೃತಿ ಕಾರ‍್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮದ್ಯದ ವ್ಯವಹಾರ ಬಂದು ಮಾಡುವುದು ವೇದಿಕೆಯ ಉದ್ದೇಶವಲ್ಲ. ಬದಲಾಗಿ ಸಮಾಜದಲ್ಲಿಸ್ವಾಸ್ತತ್ರ್ಯ ಕಾಪಾಡುವುದಾಗಿದೆ. ಸಂಸ್ಥೆ ಕೇವಲ ಸಾಲ ಮಾತ್ರ ನೀಡುತ್ತಿಲ್ಲ, ಬದಲಾಗಿ ಒಂದು ಕುಟುಂಬದ ಸರ್ವಾಂಗೀಣ ಅಭಿವೃದ್ದಿಗೆ ಆದ್ಯತೆ ನೀಡಿ ಮಹಿಳೆಯರು ಮುಖ್ಯವಾಹಿನಿಗೆ ಬರುವಂತೆ ಮಾಡುತ್ತಿದೆ. ಇದರ ಜತೆಗೆ ಕುಟುಂಬದ ಮುಖ್ಯಸ್ಥನು ಕುಡಿತದ ಚಟಕ್ಕೆ ಒಳಗಾಗಿದ್ದರೆ ಅಂತಹವರನ್ನು ಗುರುತಿಸಿ ಮದ್ಯವರ್ಜನ ಶಿಬಿರದ ಮೂಲಕ ನುರಿತ ತಜ್ಞರಿಂದ ಅವರಲ್ಲಿಜಾಗೃತಿ ಮೂಡಿಸಿ ನವಜೀವನ ಸಾಗಿಸುವುದಕ್ಕೆ ಪ್ರೇರಣೆ ನೀಡಲಾಗುತ್ತಿದೆ. ಅ.3ರಂದು ಸಂಸ್ಥೆ ವತಿಯಿಂದ ಜಿಲ್ಲಾಮಟ್ಟದಲ್ಲಿಗಾಂಧಿಸ್ಮೃತಿ ಕಾರ‍್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ಕಾರ‍್ಯಕ್ರಮ ಯಶಸ್ವಿಗೊಳಿಸಬೇಕೆಂದು ಹೇಳಿದರು.

ಸಂಸ್ಥೆಯ ಜಿಲ್ಲಾಯೋಜನಾ ನಿರ್ದೆಶಕ ಶಿವಾನಂದ ಆಚಾರ‍್ಯ ಮಾತನಾಡಿ, ಮದ್ಯ ಸೇವನೆಯಿಂದ ಅನೇಕ ಕುಟುಂಬ ಹಾಳಾಗುತ್ತಿರುವುದನ್ನು ತಪ್ಪಿಸುವದಕ್ಕಾಗಿ ಸಂಸ್ಥೆಯು ಚುನಾವಣಾ ಸಮಯದಲ್ಲಿಮದ್ಯ ಸರಬರಾಜು ಮಾಡದಂತೆ ಸರಕಾರದ ಮೇಲೆ ಒತ್ತಡ, ಸಾಕ್ಷತ್ರ್ಯಚಿತ್ರ, ಬೀದಿ ನಾಟಕ ಹೀಗೆ ಹಲವು ಕಾರ‍್ಯಕ್ರಮಗಳ ಮೂಲಕ ಜನರಲ್ಲಿಜಾಗೃತಿ ಮೂಡಿಸುತ್ತಿದೆ ಎಂದರು.

ಪಪಂ ಮಾಜಿ ಅಧ್ಯಕ್ಷ ಹುಮಾಯೂನ್‌ ಮಾಗಡಿ ಮಾತನಾಡಿ, ಅ.3ರಂದು ನಡೆಯಲಿರುವ ಜಿಲ್ಲಾಮಟ್ಟದ ಕಾರ‍್ಯಕ್ರಮದಲ್ಲಿವಿಶೇಷ ನಿರ್ಣಯ ಮಂಡಿಸಿ ಸರಕಾರದ ಗಮನ ಸೆಳೆಯಲಾಗುವುದು ಎಂದರು.

ಪಪಂ ಸದಸ್ಯರಾದ ಸಂದೀಪ ಕಪ್ಪತ್ತನವರ, ಫಕ್ಕೀರೇಶ ರಟ್ಟಿಹಳ್ಳಿ, ಹೊನ್ನಪ್ಪ ಶಿರಹಟ್ಟಿ, ಮಹಾಂತೇಶ ದಶಮನಿ, ಯೋಜನಾಧಿಕಾರಿ ಶಿವಣ್ಣ.ಎಸ್‌, ಮೇಲ್ವಿಚಾರಕಿ ಜ್ಯೋತಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ