ಆ್ಯಪ್ನಗರ

ರಸ್ತೆ ತಗ್ಗು ಮುಚ್ಚಿದ ಯುವಕರು

ಡಂಬಳ: ಮುಂಡರಗಿಯಿಂದ ಗದಗ ತೆರಳುವ ಅರಭಾವಿ ಚಳ್ಳಕೇರಿ ರಾಜ್ಯ ಹೆದ್ದಾರಿಯಲ್ಲಿಗುಂಡಿ ನಿರ್ಮಾಣವಾಗಿದ್ದು ಬೈಕ್‌ ಸವಾರರು ಬಿದ್ದು ಗಾಯಗೊಳ್ಳುತ್ತಿರುವ ಘಟನೆ ಹೆಚ್ಚಾಗುತ್ತಿರುವುದನ್ನು ಅರಿತ ಮೇವುಂಡಿ ಗ್ರಾಮದ ಕೆಲ ಯುವಕರು ಮಣ್ಣು ತಂದು ಗುಂಡಿ ಮುಚ್ಚಲು ಮುಂದಾಗಿದ್ದಾರೆ.

Vijaya Karnataka 19 Oct 2019, 5:00 am
ಡಂಬಳ: ಮುಂಡರಗಿಯಿಂದ ಗದಗ ತೆರಳುವ ಅರಭಾವಿ ಚಳ್ಳಕೇರಿ ರಾಜ್ಯ ಹೆದ್ದಾರಿಯಲ್ಲಿಗುಂಡಿ ನಿರ್ಮಾಣವಾಗಿದ್ದು ಬೈಕ್‌ ಸವಾರರು ಬಿದ್ದು ಗಾಯಗೊಳ್ಳುತ್ತಿರುವ ಘಟನೆ ಹೆಚ್ಚಾಗುತ್ತಿರುವುದನ್ನು ಅರಿತ ಮೇವುಂಡಿ ಗ್ರಾಮದ ಕೆಲ ಯುವಕರು ಮಣ್ಣು ತಂದು ಗುಂಡಿ ಮುಚ್ಚಲು ಮುಂದಾಗಿದ್ದಾರೆ.
Vijaya Karnataka Web the roadside low lying youths
ರಸ್ತೆ ತಗ್ಗು ಮುಚ್ಚಿದ ಯುವಕರು


ಚಾಲಕ ಹಾಗೂ ಕಾರ್ಮಿಕರ ಕೆಲಸ ಈ ಯುವಕರು ರಸ್ತೆಯ ಮಧ್ಯದ ಗುಂಡಿ ಕಾಣದೆ ಬಿದ್ದ ಗಾಯಗೊಂಡ ಹಲವು ದ್ವಿಚಕ್ರ ವಾಹನ ಸವಾರರನ್ನು ಆಂಬ್ಯುಲೆನ್ಸ್‌ಗೆ ತಿಳಿಸಿ ಆಸ್ಪತ್ರೆಗೆ ರವಾನಿಸಿದ್ದಾರೆ.

ನಿತ್ಯ ಸಾವಿರಾರು ವಾಹನ ಈ ರಾಜ್ಯ ಹೆದ್ದಾರಿ ಮೂಲಕ ಸಂಚರಿಸುತ್ತಿದ್ದು 2 ತಿಂಗಳಿನಿಂದ ರಸ್ತೆ ತಗ್ಗು ಗುಂಡಿ ಮುಚ್ಚುವಂತೆ ಮನವಿ ಮಾಡಿದರೂ ಇಲಾಖೆಯವರು ಸ್ಪಂದಿಸಲಿಲ್ಲ. ಆದ್ದರಿಂದ ಸ್ವಪ್ರೇರಣೆಯಿಂದ ಮಣ್ಣಿನಿಂದ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಮುಂದಾಗಿದ್ದಾಗಿ ಯುವಕರು ಪತ್ರಿಕೆಗೆ ಹೇಳಿದರು.

ಅಧಿಕಾರಿ ಗಮನ ಹರಿಸಿ ರಸ್ತೆಯಲ್ಲಿನ ತಗ್ಗು ಗುಂಡಿಗಳನ್ನು ಮುಚ್ಚಲು ಮುಂದಾಗಬೇಕು ಇಲ್ಲವಾದಲ್ಲಿರಸ್ತೆ ತಡೆ ಮಾಡಬೇಕಾಗುತ್ತದೆ ಎಂದು ಕೊಟೇಶ ಆಲೂರ ಎಚ್ಚರಿಸಿದ್ದಾರೆ.

ಆದಿತ್ಯ ಬಡಿಗೇರ, ಬಸವರಾಜ ಕೋವಿ, ಶ್ರೀಕಾಂತ ಬ್ಯಾಳಿ, ದೂದಪೀರ ವಾಲಿಕಾರ, ಕೊಟೆಪ್ಪ ನೋಟಗಾರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ