ಆ್ಯಪ್ನಗರ

15ರಂದು ಮೌನಾನುಷ್ಠಾನ ಮಂಗಲೋತ್ಸವ

ನರಗುಂದ : ತಾಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿಗಳು ಕೈಗೊಂಡಿರುವ ಮೌನಾನುಷ್ಠಾನ ಮಂಗಲೋತ್ಸವ ಸಮಾರಂಭ ಜು.15ರಂದು ಬೆಳಗ್ಗೆ 10 ಗಂಟೆಗೆ ದೊರೆಸ್ವಾಮಿಮಠದಲ್ಲಿ ನಡæಯಲಿದೆ.

Vijaya Karnataka 13 Jul 2019, 5:00 am
ನರಗುಂದ : ತಾಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿಗಳು ಕೈಗೊಂಡಿರುವ ಮೌನಾನುಷ್ಠಾನ ಮಂಗಲೋತ್ಸವ ಸಮಾರಂಭ ಜು.15ರಂದು ಬೆಳಗ್ಗೆ 10 ಗಂಟೆಗೆ ದೊರೆಸ್ವಾಮಿಮಠದಲ್ಲಿ ನಡæಯಲಿದೆ.
Vijaya Karnataka Web GDG-12NRD1
ನರಗುಂದ ತಾಲೂಕು ಭೈರನಹಟ್ಟಿ ದೊರೆಸ್ವಾಮಿಮಠದ ಶಾಂತಲಿಂಗ ಸ್ವಾಮೀಜಿಗಳಿಂದ ಸೂಪಿ ಸಂತ ಇಬ್ರಾಹಿಂ ಸುತಾರ ಆಶೀರ್ವಾದ ಪಡೆದರು.


ಗದಗ ತೋಂಟದಾರ್ಯ ಮಠದ ಜಗದ್ಗುರು ಲಿಂ.ಡಾ.ತೋಂಟದ ಸಿದ್ದಲಿಂಗ ಸ್ವಾಮಿಗಳ ಮಾರ್ಗದರ್ಶನದಂತೆ ಕಳೆದ ಒಂಬತ್ತು ವರ್ಷಗಳಿಂದ ಮೌನಾನುಷ್ಠಾನ ಕೈಗೊಳ್ಳುವ ಮೂಲಕ ಅಪಾರ ಭಕ್ತರ ಮನಗೆದ್ದಿರುವ ಶ್ರೀಗಳ ಹತ್ತನೆ ವರ್ಷದ ಮೌನಾನುಷ್ಠಾನ ಮಂಗಲೋತ್ಸವ ಗದುಗಿನ ಡಾ.ತೋಂಟದ ಸಿದ್ದರಾಮ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ನಡೆಯಲಿದೆ.

ನರಸಾಪುರದ ಮರುಳುಸಿದ್ದಲಿಂಗ ಸ್ವಾಮೀಜಿ, ಕೊಣ್ಣೂರಿನ ಶಿವಕುಮಾರ ಸ್ವಾಮೀಜಿ, ನರಗುಂದ ಗುಡ್ಡದ ಸಿದ್ದಲಿಂಗ ಸ್ವಾಮೀಜಿ, ವಿರಕ್ತಮಠದ ಶಿವಕುಮಾರ ಸ್ವಾಮೀಜಿ, ಪತ್ರಿವನಮಠದ ಗುರುಸಿದ್ದವೀರ ಶಿವಯೋಗಿಗಳು, ಅವರಾದಿಯ ಶಿವಮೂರ್ತಿ ಸ್ವಾಮೀಜಿ, ಕೊಣ್ಣೂರ ಕಲ್ಮಠದ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿ ಬೀಳಗಿಯ ಗುರುಪಾದ ಸ್ವಾಮೀಜಿ, ಯಶವಂತನಗರದ ಗಂಗಾಧರ ಸ್ವಾಮೀಜಿ, ಬೆಳಗಾವಿಯ ಡಾ.ಸಾವಳಗೇಶ್ವರ ಸ್ವಾಮೀಜಿಗಳಿಗೆ ಗುರುವಂದನೆ ನಡೆಯಲಿದೆ. ಬೆಳಗಾವಿಯ ಶಿವಯೋಗಿ ದೇವರು, ದೇವರಗೆಹಳ್ಳಿಯ ವೀರೇಶ್ವರ ದೇವರು ಸಮ್ಮುಖದಲ್ಲಿ ಅತಿಥಿಗಳಾಗಿ ಶಾಸಕ ಸಿ.ಸಿ.ಪಾಟೀಲ, ಸಂಸದ ಪಿ.ಸಿ.ಗದ್ದಿಗೌಡ್ರ, ಮಾಜಿ ಶಾಸಕ ಬಿ.ಆರ್‌.ಯಾವಗಲ್ಲ, ತಾಪಂ ಅಧ್ಯಕ್ಷ ಪ್ರೌಭುಲಿಂಗ ಎಲಿಗಾರ, ಜಿಪಂ ಸದಸ್ಯ ರಾಜುಗೌಡ ಕೆಂಚನಗೌಡ್ರ, ತಾಪಂ ಸದಸ್ಯೆ ಶಂಕ್ರವ್ವ ಮುದ್ದನಗೌಡ್ರ ಹಾಗೂ ಗ್ರಾಪಂ ಅಧ್ಯಕ್ಷ ರು, ಸದಸ್ಯರು ಆಗಮಿಸುವರು. ಯಡೆಯೂರ ಸಿದ್ದಲಿಂಗೇಶ್ವರ ಸಮಿತಿ ಅಧ್ಯಕ್ಷೆ ಶ್ರೀದೇವಿ ಶೆಟ್ಟರ ಅವರನ್ನು ಸನ್ಮಾನಿಸಲಾಗುವುದು.

ಇಬ್ರಾಹಿಂ ಸುತಾರ ಭೇಟಿ: ಪದ್ಮಭೂಷಣ ಪ್ರಶಸ್ತಿ ವಿಜೇತ ಸೂಪಿ ಸಂತ ಇಬ್ರಾಹಿಂ ಸುತಾರ ಅವರು ಭೈರನಹಟ್ಟಿ ದೊರೆಸ್ವಾಮಿಮಠಕ್ಕೆ ಭೇಟಿ ನೀಡಿ ಲೋಕಕಲ್ಯಾರ್ಥವಾಗಿ ಮೌನಾನುಷ್ಠಾದಲ್ಲಿದ್ದ ಶಾಂತಲಿಂಗ ಸ್ವಾಮೀಜಿಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಶ್ರೀಗಳು ಹಲಗೆ ಮೇಲೆ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ