ಆ್ಯಪ್ನಗರ

ಕ್ಲಾಸ್‌ ರೂಮ್‌ಲ್ಲಿ ಹಾವು ಪ್ರತ್ಯಕ್ಷ

ನರಗುಂದ :ಇಲ್ಲಿನ ಹಳೆಯ ಎಪಿಎಂಸಿ ಆವರಣದಲ್ಲಿರುವ ಶಾಲಾ ಕೊಠಡಿಯಲ್ಲಿ ಕಪ್ಪೆ ನುಂಗಿದ ಹಾವೊಂದು ಪ್ರತ್ಯಕ್ಷ ವಾಗಿ ಕೆಲ ಕಾಲ ಆತಂಕ ಮೂಡಿಸಿದ ಘಟನೆ ಇತ್ತೀಚೆಗೆ ಸಂಭವಿಸಿದೆ.

Vijaya Karnataka 7 Jul 2018, 5:57 pm
ನರಗುಂದ :ಇಲ್ಲಿನ ಹಳೆಯ ಎಪಿಎಂಸಿ ಆವರಣದಲ್ಲಿರುವ ಶಾಲಾ ಕೊಠಡಿಯಲ್ಲಿ ಕಪ್ಪೆ ನುಂಗಿದ ಹಾವೊಂದು ಪ್ರತ್ಯಕ್ಷ ವಾಗಿ ಕೆಲ ಕಾಲ ಆತಂಕ ಮೂಡಿಸಿದ ಘಟನೆ ಇತ್ತೀಚೆಗೆ ಸಂಭವಿಸಿದೆ.
Vijaya Karnataka Web the snake appears at the class room
ಕ್ಲಾಸ್‌ ರೂಮ್‌ಲ್ಲಿ ಹಾವು ಪ್ರತ್ಯಕ್ಷ


''ವಿವೇಕಾನಂದ ಪ್ರಾಥಮಿಕ ಶಾಲೆ ಮೂರನೇ ತರಗತಿ ಕೊಠಡಿಯಲ್ಲಿ ಮೂರ್ನಾಲ್ಕು ಕಪ್ಪೆಗಳನ್ನು ನುಂಗಿದ್ದ ಹಸಿರು ಚೌಕಳಿ ಹಾವು ಕಾಣಿಸಿಕೊಂಡಿತ್ತು. ವನ್ಯಜೀವಿ ಸಂರಕ್ಷ ಕ ಮಂಜುನಾಥ ನಾಯ್ಕರ ಅವರನ್ನು ಕರೆಸಿಕೊಂಡು ಹಾವನ್ನು ಹಿಡಿಯಲಾಯಿತು. ನುಂಗಿದ ಕಪ್ಪೆಗಳನ್ನು ಜೀರ್ಣಿಸಿಕೊಂಡ ನಂತರ ಸಹಜ ಸ್ಥಿತಿಗೆ ಮರಳಿದ್ದು, ನಂತರ ಅದನ್ನು ಸೋಮಾಪೂರ ಭಾಗದ ಕೆರೆ ಪ್ರದೇಶದಲ್ಲಿ ಬಿಡಲಾಯಿತು'' ಎಂದು ಮುಖ್ಯ ಶಿಕ್ಷ ಕ ಅಂಗಡಿ ಪ್ರತಿಕ್ರಿಯಿಸಿದ್ದಾರೆ.

ಪರಿಸರದ ಸಮತೋಲನ ಕಾಯ್ದುಕೊಳ್ಳಲು ಹಾವುಗಳ ರಕ್ಷಣೆ ಅವಶ್ಯವಿದೆ. ಹಾವುಗಳು ಕಂಡರೆ ತಮ್ಮ ಗಮನಕ್ಕೆ ತರಲು ಜೀವ ವೈದ್ಯ ಸಂಶೋಧಕರಾಗಿರುವ ಮಂಜುನಾಥ ನಾಯ್ಕರ (ಮೊ: 9535942215) ಕೋರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ