ಆ್ಯಪ್ನಗರ

ಬೆದರುಗೊಂಬೆಗಳು ಮಾಯ !

ಸಿ.ಕೆ.ಗಣಪ್ಪನವರ ಮುಂಡರಗಿ: ಜೋಳ, ಸಜ್ಜಿ, ನವಣಿ. ಗೋಧಿ, ಶೇಂಗಾ ಮತ್ತು ಹತ್ತಿ ಬೆಳೆ ಹುಲುಸಾಗಿ ಬೆಳೆದು ನಿಂತಾಗ ಅವುಗಳ ರಕ್ಷ ಣೆಗೆ ರೈತರು ಹಿಂದಿನಿಂದಲೂ ಬೆದರುಗೊಂಬೆ ನಿಲ್ಲಿಸುವುದು ವಾಡಿಕೆ. ಇದರಿಂದ ರೈತರು ಬೆಳೆಗಳ ರಕ್ಷ ಣೆಯಾಗುತ್ತದೆ ಎಂದು ನಿರಮ್ಮಳಾಗಿರುತ್ತಿದ್ದರು. ಆದರೆ ಈಗೀಗ ನೀರಾವರಿ ಬೆಳೆಯಲು ಹೆಚ್ಚಾದಂತೆ ಈ ಬೆದರುಗೊಂಬೆಗಳ ವೈಭವ ಇಲ್ಲದಂತಾಗಿದೆ. ಕಾರಣ ಬೆದರುಗೊಂಬೆಗಳನ್ನು ನಿಲ್ಲಿಸುವುದು ಕಡಿಮೆಯಾಗಿದೆ.

Vijaya Karnataka 26 Aug 2019, 5:00 am
ಸಿ.ಕೆ.ಗಣಪ್ಪನವರ ಮುಂಡರಗಿ: ಜೋಳ, ಸಜ್ಜಿ, ನವಣಿ. ಗೋಧಿ, ಶೇಂಗಾ ಮತ್ತು ಹತ್ತಿ ಬೆಳೆ ಹುಲುಸಾಗಿ ಬೆಳೆದು ನಿಂತಾಗ ಅವುಗಳ ರಕ್ಷ ಣೆಗೆ ರೈತರು ಹಿಂದಿನಿಂದಲೂ ಬೆದರುಗೊಂಬೆ ನಿಲ್ಲಿಸುವುದು ವಾಡಿಕೆ. ಇದರಿಂದ ರೈತರು ಬೆಳೆಗಳ ರಕ್ಷ ಣೆಯಾಗುತ್ತದೆ ಎಂದು ನಿರಮ್ಮಳಾಗಿರುತ್ತಿದ್ದರು. ಆದರೆ ಈಗೀಗ ನೀರಾವರಿ ಬೆಳೆಯಲು ಹೆಚ್ಚಾದಂತೆ ಈ ಬೆದರುಗೊಂಬೆಗಳ ವೈಭವ ಇಲ್ಲದಂತಾಗಿದೆ. ಕಾರಣ ಬೆದರುಗೊಂಬೆಗಳನ್ನು ನಿಲ್ಲಿಸುವುದು ಕಡಿಮೆಯಾಗಿದೆ.
Vijaya Karnataka Web the sweatpants are magical
ಬೆದರುಗೊಂಬೆಗಳು ಮಾಯ !


ರೈತರು ಒಣಬೇಸಾಯ ಬೆಳೆ ಜತೆಗೆ ನೀರಾವರಿ ಭತ್ತ, ಶೇಂಗಾ, ಗೋಧಿ, ಸೂರ್ಯಕಾಂತಿ, ಆಧುನಿಕ ರೀತಿಯಲ್ಲಿ ಬೆಳೆಯುವುದ ತರಕಾರಿ ಮತ್ತು ಹಣ್ಣುಗಳ ಬೆಳೆಯನ್ನು ಪ್ರಾಣಿ ಪಕ್ಷಿಗಳಿಂದ ಕಾಪಾಡಲೇಬೇಕು. ಹೀಗಾಗಿ ಭತ್ತ ಇಲ್ಲವೆ, ಹಳೆ ಬಟ್ಟೆ ತುಂಬಿದ ಮನುಷ್ಯನಾಕಾರದ ಗೊಂಬೆ ನಿರ್ಮಾಣ ಮಾಡಿ ಮುಖಕ್ಕೆ ಗಡಿಗೆ ಆಕಾರ ಮಾಡಿ ರೈತರ ಹಳೆ ಶರ್ಟ್‌ ದೋತರ, ಹಾಕಿ ಮನುಷ್ಯರೇ ನಿಂತಂತೆ ಭಾಸವಾಗುವಂತೆ ಮಾಡಲಾಗುತ್ತದೆ. ಬದಲಾದ ಪರಿಸ್ಥಿತಿಯಲ್ಲಿಯೂ ಬೆದರುಗೊಂಬೆಗೆ ಶರ್ಟ್‌ ದೋತರ ಬಿಟ್ಟು ಪ್ಯಾಂಟ್‌ ಶರ್ಟ್‌ ಟೋಪಿ ಹಾಕುವ ಕಾಲವೂ ಬಂದಿದೆ.

ಬೆದರುಗೊಂಬೆ ಹಾಕುವ ಉದ್ದೇಶ ಜಮೀನುಗಳಲ್ಲಿ ಉತ್ತಮವಾಗಿ ಬೆಳೆಗೆ ದೃಷ್ಟಿ ತಾಗಬಾರದು ಎಂದು ವಿಚಾರವಾದರೆ ಪ್ರಾಣಿಗಳು ಇಲ್ಲಿ ಮನುಷ್ಯರು ಇದ್ದಾರೆ ಎಂಬ ಭಯಕ್ಕಾಗಿ ಹಾಕಲಾಗುತ್ತದೆ. ಹಲವು ದಶಕಗಳ ಹಿಂದೆ ಜೋಳ, ಭತ್ತ ಹೊಡೆಯಾಗಿ ತೆನೆ ಬಿಟ್ಟು ಕಾಳು ಆಗುವ ಸಮಯದಲ್ಲಿ ಪಕ್ಷಿಗಳ ಕಾಟ ವಿಪರೀತವಾಗುತ್ತಿತ್ತು. ಆಗೆಲ್ಲ ಕವಣೆಯಲ್ಲಿ ಕಲ್ಲುಹಾಕಿ ಬೀಸುತ್ತ ಪಕ್ಷಿಗಳನ್ನು ಓಡಿಸಲಾಗುತ್ತಿತ್ತು. ಈಗ ಕವಣೆ ಬೀಸುವವರಿಲ್ಲ. ಜಮೀನು ಕಾಯುವವರೂ ಇಲ್ಲ, ಮತ್ತು ಹಿಂದೆ ಕೂಡಾ ನಡು ಹೊಲದಲ್ಲಿ ಎತ್ತರವಾದ ಅಟ್ಟ ಹಾಕಿಕೊಂಡು ಕವಣಿ ಬೀಸುವುದರ ಜತೆಗೆ ಡಬ್ಬಿಗಳ ಸಪ್ಪಳ ಮಾಡಲಾಗುತ್ತಿತ್ತು. ನಂತರ ಬೆದರುಗೊಂಬೆಗಳ ಬಂದು ಈಗ ಅವುಗಳ ಸಂಖ್ಯೆಯೂ ಕಡಿಮೆಯಾಗಿದೆ.

ಆದರೂ ರೈತರು ಅಲ್ಲಲ್ಲಿ ತಮ್ಮ ಹಳೆ ಸಂಪ್ರದಾಯಕ್ಕೆ ಹೊಸ ರೂಪ ಕೊಡುತ್ತಿದ್ದಾರೆ.ಜಮೀನುಗಳಲ್ಲಿ ಆಕೃತಿ ನಿರ್ಮಾಣ ಮಾಡಿ ಆದರಿಂದಲೇ ಬೆಳೆ ರಕ್ಷ ಣೆ ಮಾಡುವಂತೆ ನಿರ್ಮಿಸಿದ್ದಾರೆ. ಇನ್ನು ಕೆಲವರು ಗಾಳಿಗೆ ಹಾರಾಡಿ ಸಪ್ಪಳ ಮಾಡಲಿ ಇದರಿಂದ ಪ್ರಾಣಿಗಳು ಬೆದರಲಿ ಎಂದು ಪ್ಲಾಸ್ಟಿಕ್‌ ಹಾಳೆಗಳನ್ನು ಗಿಡದಲ್ಲಿ ಅಲ್ಲಲ್ಲಿ ಕಟ್ಟುತ್ತಾರೆ.

ವಿದ್ಯುತ್‌ ತಂತಿಗೆ ಮೊರೆ : ತೋಟಗಾರಿಕೆ ಬೆಳೆ ಹೆಚ್ಚು ಬೆಳೆಯುತ್ತಿರುವುರಿಂದ ಅವುಗಳ ರಕ್ಷ ಣೆಗೆ ಸಮಯದ ಮೀಸಲಾಗಿಡುವ ಬದಲು ಬೆಳೆಗಳ ಸುತ್ತಲೂ ಸಣ್ಣ ಪ್ರಮಾಣದಲ್ಲಿ ವಿದ್ಯುತ್‌ ತಂತಿ ಹಾಕಿ ಅದರಲ್ಲಿ ಕರೆಂಟ್‌ ಹರಿಬಿಡಲಾಗುತ್ತದೆ.ಇದು ಬಹುತೇಕ ಅಪಾಯವಾಗಿದ್ದರೂ ಕೂಡ ಸೂಚನೆಯ ನಾಮಫಲಕ ಹಾಕಲಾಗುತ್ತದೆ. ಜನರಿಗಾದರೆ ಈ ಅರಿವು ಇರುತ್ತದೆ. ಪ್ರಾಣಿ ಕಾಡುಪ್ರಾಣಿಗಳಿಂದ ಇದರಿಂದ ರಕ್ಷ ಣೆ ದೊರೆತಂತಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ