ಆ್ಯಪ್ನಗರ

ಭಾಷೆ ಬೆಳೆಸಿದಷ್ಟು ಮಾಧುರ್ಯತೆ ಹೆಚ್ಚು

ನರೇಗಲ್ಲ: ಕನ್ನಡ ಭಾಷೆ ಬಹಳಷ್ಟು ಪ್ರಾಚೀನ ಭಾಷೆಯಾಗಿದ್ದು, ಅದಕ್ಕೆ ಎಂದಿಗೂ ಅಳಿಗಾಲ ಇಲ್ಲಎಂದು ಮುಖ್ಯೋಪಾದ್ಯಾಯನಿ ಎನ್‌. ಎಸ್‌. ಹಿರೇಮಠ ಹೇಳಿದರು. ಅವರು ಸ್ಥಳೀಯ ಜಗದ್ಗುರು ಪಂಚಾಚಾರ್ಯ ಗ್ರಾಮಿಣಾಭಿವೃದ್ಧಿ ಶಿಕ್ಷಣ ಸಂಸ್ಥೆಯ ಶ್ರೀ ರೇಣುಕಾಚಾರ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿನಡೆದ 64ನೇ ಕನ್ನಡ

Vijaya Karnataka 7 Nov 2019, 5:00 am
ನರೇಗಲ್ಲ: ಕನ್ನಡ ಭಾಷೆ ಬಹಳಷ್ಟು ಪ್ರಾಚೀನ ಭಾಷೆಯಾಗಿದ್ದು, ಅದಕ್ಕೆ ಎಂದಿಗೂ ಅಳಿಗಾಲ ಇಲ್ಲಎಂದು ಮುಖ್ಯೋಪಾದ್ಯಾಯನಿ ಎನ್‌. ಎಸ್‌. ಹಿರೇಮಠ ಹೇಳಿದರು.
Vijaya Karnataka Web the sweetness is as much as the language develops
ಭಾಷೆ ಬೆಳೆಸಿದಷ್ಟು ಮಾಧುರ್ಯತೆ ಹೆಚ್ಚು

ಅವರು ಸ್ಥಳೀಯ ಜಗದ್ಗುರು ಪಂಚಾಚಾರ್ಯ ಗ್ರಾಮಿಣಾಭಿವೃದ್ಧಿ ಶಿಕ್ಷಣ ಸಂಸ್ಥೆಯ ಶ್ರೀ ರೇಣುಕಾಚಾರ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿನಡೆದ 64ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿಮಾತನಾಡಿದರು. ಕನ್ನಡ ಭಾಷೆಯನ್ನು ಕನ್ನಡಿಗರು ಪ್ರೀತಿಸದಿದ್ದರೆ ಅದು ಹೇಗೆ ತಾನೆ ಬೆಳವಣಿಗೆ ಕಂಡೀತು? ಅದಕ್ಕಾಗಿ ಎಲ್ಲರೂ ಕನ್ನಡ ಭಾಷೆ ಪ್ರೀತಿಸಿ, ಗೌರವಿಸಿ, ಮಾತನಾಡುವ ಹಾಗೂ ಕನ್ನಡ ಸಾಹಿತ್ಯದಲ್ಲಿಬರೆಯುವ ಕಾರ್ಯ ಮಾಡಬೇಕಿದೆ ಎಂದು ಹಿರೇಮಠ ತಿಳಿಸಿದರು. ಭಾಷೆಯನ್ನು ಬಳಸಿದಷ್ಟೂ ಅದರ ಮಾಧುರ್ಯತೆ ಹೆಚ್ಚಾಗುತ್ತದೆ. ಸಂಪರ್ಕದ ಕೊಂಡಿಗಳು ಬೆಸೆಯುತ್ತವೆ. ಈ ಮೂಲಕ ನಮ್ಮ ಮನದಲ್ಲಿನ ದುಗುಡಗಳು ಕಡಿಮೆಯಾಗಿ ನಮ್ಮಲ್ಲಿಸೌಹಾರ್ದ ಮೂಡುತ್ತದೆ ಎಂದರು.

ಶಿಕ್ಷಕ ಈಶ್ವರ ಆದಿ ಮಾತನಾಡಿ, ಕನ್ನಡದ ಉಳಿವಿಗಾಗಿ ಅಂದಿನ ರಾಜಮಹಾರಾಜರೂ ಅನೇಕ ರೀತಿಯ ಕ್ರಮ ತೆಗೆದುಕೊಂಡಿದ್ದರು. ಕನ್ನಡದ ಕೈಂಕರ್ಯಕ್ಕೆ ನಾವೆಲ್ಲರೂ ಕಂಕಣಬದ್ಧರಾದಾಗ ಮಾತ್ರ ಕನ್ನಡ ಬೆಳವಣಿಗೆ ಸಾಧ್ಯವಾಗುತ್ತದೆ. ಹರಡಿಹೋಗಿದ್ದ ಕನ್ನಡಿಗರನ್ನು ಒಗ್ಗೂಡಿಸಿದ ಕೀರ್ತಿ ಹುಯಿಲಗೋಳ ನಾರಾಯಣರು, ಜಕ್ಕಲಿ ಅಂದಾನಪ್ಪ ದೊಡ್ಡಮೇಟಿ ಹಾಗೂ ಉತ್ತರ ಕರ್ನಾಟಕದ ಹಲವು ಮಹನಿಯರಿಗೆ ಸಲ್ಲುತ್ತದೆ. ಕನ್ನಡ ಭಾಷೆ ಸುಲಿದ ಬಾಳೆ ಹಣ್ಣಿನಂತೆ ಸುಮಧುರವಾಗಿದ್ದು ಅದರ ಸಿಹಿಯನ್ನು ಸವಿದವರಿಗಷ್ಟೆ ಅದರ ಸವಿ ಗೊತ್ತಾಗುತ್ತದೆ ಎಂದರು. ಸಂಸ್ಥೆ ಉಪಾಧ್ಯಕ್ಷ ಸಿ.ಕೆ. ಪಾರಿಗೊಂಡ, ಕಾರ್ಯದರ್ಶಿ ಈಶ್ವರ ಬೆಟಗೇರಿ ಉಪಸ್ಥಿತರಿದ್ದರು.
ಶಿಕ್ಷಕ ಬಸವರಾಜ ಸ್ವಾಗತಿಸಿದರು. ರೇಖಾ ಪಾಯಪ್ಪಗೌಡ್ರ ನಿರೂಪಿಸಿದರು. ಜಯಶ್ರೀ ಗಂಗರಗೊಂಡ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ