ಆ್ಯಪ್ನಗರ

ಸತ್ಯ ಮಾತುಗಳೇ ನಾಲಿಗೆಗೆ ಭೂಷಣ

ಗದಗ : ವ್ಯಕ್ತಿತ್ವದ ಉನ್ನತಿಗೆ ಸತ್ಯವು ಶ್ರೇಷ್ಠ ಸಾಧನವಾಗಿದ್ದು, ನಾಲಿಗೆಗೆ ಸತ್ಯವಾದ ಮಾತುಗಳೇ ಭೂಷಣ ಎಂಬ ಸರ್ಪಭೂಷಣ ಶಿವಯೋಗಿಗಳ ವಾಣಿಯಂತೆ ಮಾನವನು ಜೀವನದಲ್ಲಿ ಎಂಥದ್ದೇ ಸಂದರ್ಭಗಳು ಎದುರಾದರೂ ಸತ್ಯ ಮಾತನಾಡುವುದನ್ನು ಬಿಡಬಾರದು ಎಂದು ಹಿಪ್ಪರಗಿಯ ಶಿವರುದ್ರ ಶರಣರು ಹೇಳಿದರು.

Vijaya Karnataka 17 Apr 2019, 5:00 am
ಗದಗ : ವ್ಯಕ್ತಿತ್ವದ ಉನ್ನತಿಗೆ ಸತ್ಯವು ಶ್ರೇಷ್ಠ ಸಾಧನವಾಗಿದ್ದು, ನಾಲಿಗೆಗೆ ಸತ್ಯವಾದ ಮಾತುಗಳೇ ಭೂಷಣ ಎಂಬ ಸರ್ಪಭೂಷಣ ಶಿವಯೋಗಿಗಳ ವಾಣಿಯಂತೆ ಮಾನವನು ಜೀವನದಲ್ಲಿ ಎಂಥದ್ದೇ ಸಂದರ್ಭಗಳು ಎದುರಾದರೂ ಸತ್ಯ ಮಾತನಾಡುವುದನ್ನು ಬಿಡಬಾರದು ಎಂದು ಹಿಪ್ಪರಗಿಯ ಶಿವರುದ್ರ ಶರಣರು ಹೇಳಿದರು.
Vijaya Karnataka Web the truth is the tongue
ಸತ್ಯ ಮಾತುಗಳೇ ನಾಲಿಗೆಗೆ ಭೂಷಣ

ನಗರದ ತೋಂಟದಾರ್ಯಮಠದಲ್ಲಿ ಜಾತ್ರಾ ಮಹೋತ್ಸವದಂಗವಾಗಿ ಆಯೋಜಿಸಿದ 3ನೇ ದಿನದ ಪ್ರವಚನ ಮಾಲಿಕೆಯಲ್ಲಿ ಮಾತನಾಡಿದರು.

ಬಸವಾದಿ ಶರಣರು ತಮ್ಮ ವಚನಗಳಲ್ಲಿ ಸತ್ಯದ ಮಹತ್ವ ಸಾರಿದ್ದಾರೆ. ಸತ್ಯವ ನುಡಿವುದೇ ಸ್ವರ್ಗ ಎಂಬ ಬಸವೇಶ್ವರರ ವಾಣಿಯಂತೆ ಸತ್ಯವಂತನಿಗೆ ಜಯ ಕಟ್ಟಿಟ್ಟ ಬುತ್ತಿಯಾಗಿರುತ್ತದೆ. ಇಂದ್ರನನ್ನು ಗೆದ್ದವನಿಗಿಂತ ನೂರ್ಪಟ್ಟು ಶ್ರೇಷ್ಠನು ಇಂದ್ರಿಯ ನಿಗ್ರಹಿಸಿದವನು ಎಂದು ಶ್ರೀ ರಾಮಾಯಣ ದರ್ಶನಂ ದಲ್ಲಿ ಕುವೆಂಪು ಅವರು ಉಲ್ಲೇಖಿಸಿದ್ದಾರೆ. ಇಂದ್ರಿಯಗಳನ್ನು ನಿಗ್ರಹಿಸದ ಹೊರತು ಶ್ರೇಷ್ಠ ಕಾರ್ಯಸಿದ್ಧಿ ಸಾಧ್ಯವಿಲ್ಲ ಎಂದರು. ಜ.ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ