ಆ್ಯಪ್ನಗರ

ಹೆಚ್ಚುವರಿ ಒತ್ತಡ ಕೈಬಿಡಲು ಆಗ್ರಹ

ಗದಗ: ಕೃಷಿ ಇಲಾಖೆಯಲ್ಲಿಬೆಳೆ ಸಮೀಕ್ಷೆ, ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿಗ್ರೇಡರ್‌ಗಳ ನೇಮಕ ಹೀಗೆ ಅನ್ಯ ಇಲಾಖೆಗಳ ಕಾರ್ಯದಲ್ಲಿತೊಡಗುತ್ತಿರುವುದರಿಂದ ಇಲಾಖೆಯ ಕಾರ್ಯ ಕುಂಠಿತಗೊಳ್ಳುತ್ತಿವೆ. ಸರಕಾರ ಈ ಹೆಚ್ಚುವರಿ ಒತ್ತಡ ಕೈಬಿಡಬೇಕು ಎಂದು ಆಗ್ರಹಿಸಿ ಇತ್ತೀಚೆಗೆ ಕೃಷಿ ಪದವೀಧರ ಅಧಿಕಾರಿಗಳು ಹಾಗೂ ಸಹಾಯಕ ಕೃಷಿ ಅಧಿಕಾರಿಗಳು ಆಗ್ರಹಿಸಿದರು.

Vijaya Karnataka 16 Feb 2020, 5:00 am
ಗದಗ: ಕೃಷಿ ಇಲಾಖೆಯಲ್ಲಿಬೆಳೆ ಸಮೀಕ್ಷೆ, ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿಗ್ರೇಡರ್‌ಗಳ ನೇಮಕ ಹೀಗೆ ಅನ್ಯ ಇಲಾಖೆಗಳ ಕಾರ್ಯದಲ್ಲಿತೊಡಗುತ್ತಿರುವುದರಿಂದ ಇಲಾಖೆಯ ಕಾರ್ಯ ಕುಂಠಿತಗೊಳ್ಳುತ್ತಿವೆ. ಸರಕಾರ ಈ ಹೆಚ್ಚುವರಿ ಒತ್ತಡ ಕೈಬಿಡಬೇಕು ಎಂದು ಆಗ್ರಹಿಸಿ ಇತ್ತೀಚೆಗೆ ಕೃಷಿ ಪದವೀಧರ ಅಧಿಕಾರಿಗಳು ಹಾಗೂ ಸಹಾಯಕ ಕೃಷಿ ಅಧಿಕಾರಿಗಳು ಆಗ್ರಹಿಸಿದರು.
Vijaya Karnataka Web the urge to drop extra stress
ಹೆಚ್ಚುವರಿ ಒತ್ತಡ ಕೈಬಿಡಲು ಆಗ್ರಹ


ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್‌. ರುದ್ರೇಶಪ್ಪ ನೇತೃತ್ವದಲ್ಲಿಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದ್ದರು.

ಇಲಾಖೆಯಲ್ಲಿ1987 ರಲ್ಲಿಕೃಷಿ ಸಹಾಯಕರ ನೇಮಕಾತಿಯಾಗಿದ್ದು, ಇಲ್ಲಿಯ ವರೆಗೆ ಸುಮಾರು 33 ವರ್ಷ ಕಾಲ ಯಾವುದೇ ಮೂಲ ಕ್ಷೇತ್ರ ಸಿಬ್ಬಂದಿ ನೇಮಕಾತಿ ಆಗಿಲ್ಲ. ಕೃಷಿ ಡಿಪೊ್ಲೕಮಾ ಪೂರೈಸಿದವರನ್ನು ಒಂದು ಗ್ರಾಮ ಒಂದು ಪಂಚಾಯಿತಿಗೆ ಒಬ್ಬರಂತೆ ಕ್ಷೇತ್ರ ಮಟ್ಟದ ಮೂಲ ಸಿಬ್ಬಂದಿ ನೇಮಿಸಲು ಹಾಗೂ ಕಂದಾಯ ಇಲಾಖೆ ನಿರ್ವಹಿಸುತ್ತಿದ್ದ ಬೆಳೆ ಸಮೀಕ್ಷೆ ಯೋಜನೆ ಸರಕಾರದ ಮಟ್ಟದಲ್ಲಿಕೃಷಿ ಇಲಾಖೆಯ ಮೂಲಕ ಕಾರ್ಯಕೈಗೊಳ್ಳಲು ಆದೇಶಿಸಿದ್ದಾರೆ. ಇದರಿಂದ ಆ್ಯಪ್‌ ಆಧಾರಿತ ತಂತ್ರಾಂಶದಲ್ಲಿಕ್ಷೇತ್ರಮಟ್ಟದಲ್ಲಿಕಾರ್ಯಕೈಗೊಳ ್ಳಬೇಕಾಗಿದೆ. ಇದರಿಂದ ಈಗಾಗಲೇ ನಿವೃತ್ತಿ ಅಂಚಿನಲ್ಲಿರುವ ಹಾಗೂ ತಂತ್ರ ಜ್ಞಾನದ ಅನುಭವವಿಲ್ಲದ ಅಧಿಕಾರಿ, ಸಿಬ್ಬಂದಿಗೆ ಅನಾನುಕೂಲತೆ ಉಂಟಾಗುತ್ತಿದೆ. ಇಲಾಖೆಯ ಎಲ್ಲಾಅಧಿಕಾರಿ ಹಾಗೂ ಕ್ಷೇತ್ರಮಟ್ಟದ ಸಿಬ್ಬಂದಿ ಈ ಕಾರ್ಯದಲ್ಲಿತೊಡಗಿಸಿಕೊಂಡಲ್ಲಿಇಲಾಖೆಯ ಕೃಷಿ ಧ್ಯೇಯದ ಮೂಲ ಕಾರ್ಯ ಅನುಷ್ಠಾನ ಗೊಳಿಸುವಲ್ಲಿಕೊರತೆ ಉಂಟಾಗಿ ಒತ್ತಡದಲ್ಲಿಕಾರ್ಯ ನಿರ್ವಹಿಸುವ ಸ್ಥಿತಿ ಒದಗಿಬಂದಿದೆ. ಕನಿಷ್ಟ ಬೆಂಬಲ ಬೆಲೆ ಖರೀದಿ ಕೇಂದ್ರಗಳಲ್ಲಿಇಲಾಖೆಯ ಅಧಿಕಾರಿ, ಸಿಬ್ಬಂದಿ ಗ್ರೇಡ್‌ರಗಳನ್ನಾಗಿ ನೇಮಿಸಿ ತಿಂಗಳಾನುಗಟ್ಟಲೆ ಇಲ್ಲಿರುವ ಸಿಬ್ಬಂದಿ ನಿಯೋಜಿಸಿದಲ್ಲಿಇಲಾಖೆಯ ಕಾರ್ಯಗಳು ಕುಂಠಿತಗೊಳ್ಳುತ್ತಿವೆ. ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆ, ಪ್ರಧಾನ ಮಂತ್ರಿ ಫಸಲ್‌ ಭೀಮಾ ಯೋಜನೆ ಹಾಗೂ ಪಿ.ಎಂ.ಕಿಸಾನ್‌ ಸಮ್ಮಾನ ಯೋಜನೆ ಮುಂತಾದ ಯೋಜನೆಗಳನ್ನು ಏಕಕಾಲಕ್ಕೆ ಅನುಷ್ಠಾನ ಗೊಳಿಸುವ ಒತ್ತಡ ಉಂಟಾಗಿ ಅಧಿಕಾರಿ/ಸಿಬ್ಬಂದಿ ಮಾನಸಿಕ ಹಾಗೂ ದೈಹಿಕವಾಗಿ ಕುಗ್ಗಿದ್ದು, ಈ ಕುರಿತು ಸೂಕ್ತ ಕ್ರಮ ಜರುಗಿಸಲು ಆಗ್ರಹಿಸಿದರು.

ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರವಿ ಗುಂಜಿಕರ, ವೀರೇಶ ಹುನಗುಂದ, ಮೋಹನ ದಾಸ ಕೆ.ಎಸ್‌, ಜಿ.ಎಂ. ನಿಂಬನಾಯ್ಕರ, ಬಿ.ಎಸ್‌. ಅಣ್ಣಿಗೇರಿ, ಬಿ.ಎಸ್‌. ಕಮತರ ಎಸ್‌. ಆರ್‌. ಬಿರಸಾಲ, ಎಫ್‌.ಸಿ. ಗುರಿಕಾರ, ಮಲ್ಲಯ್ಯ ಕೊರವನವರ, ಎಸ್‌.ಬಿ. ಸೂಡಿ, ಎಸ್‌. ಎಸ್‌. ಕುಲಕರ್ಣಿ, ಸಹಾಯಕ ಕೃಷಿ ನಿರ್ದೇಶಕರು ಗದಗ, ಮುಂಡರಗಿ, ಶಿರಹಟಿ,್ಟ ರೋಣ, ನರಗುಂದ, ಹಾಗೂ ಎಲ್ಲಾಕೃಷಿ ಅಧಿಕಾರಿಗಳು, ಸಹಾಯಕ ಕೃಷಿ ಅಧಿಕಾರಿಗಳು, ಸಿಬ್ಬಂದಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ