ಆ್ಯಪ್ನಗರ

ರಜೆ ಮುಗಿತು, ಶುರುವಾಯ್ತು ಶಾಲೆ

ಗಜೇಂದ್ರಗಡ : ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ಸರಕಾರಿ ಮತ್ತು ಖಾಸಗಿ ಶಿಕ್ಷ ಣ ಸಂಸ್ಥೆಗಳ ಶಾಲೆಗಳ ಬಾಗಿಲುಗಳು ಸೋಮ ವಾರ ಮತ್ತೆ ತೆರೆದಿವೆ. ದಸರಾ ರಜೆಯ ಮಜಾ ಕಳೆದಿರುವ ವಿದ್ಯಾರ್ಥಿಗಳು ಮತ್ತೆ ಶಾಲೆಯತ್ತ ಹೆಜ್ಜೆ ಹಾಕುತ್ತಿದ್ದಾರೆ.

Vijaya Karnataka 23 Oct 2018, 5:00 am
ಗಜೇಂದ್ರಗಡ : ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ಸರಕಾರಿ ಮತ್ತು ಖಾಸಗಿ ಶಿಕ್ಷ ಣ ಸಂಸ್ಥೆಗಳ ಶಾಲೆಗಳ ಬಾಗಿಲುಗಳು ಸೋಮ ವಾರ ಮತ್ತೆ ತೆರೆದಿವೆ. ದಸರಾ ರಜೆಯ ಮಜಾ ಕಳೆದಿರುವ ವಿದ್ಯಾರ್ಥಿಗಳು ಮತ್ತೆ ಶಾಲೆಯತ್ತ ಹೆಜ್ಜೆ ಹಾಕುತ್ತಿದ್ದಾರೆ. ಢಣ, ಢಣ ಗಂಟೆ ಬಾರಿಸಿದೆ. ರಜೆ ಮಜಾ ಸಾಕು ಮಕ್ಕಳೆ. ಬಿಸಿಯೂಟ ಉಂಡು, ಅಕ್ಷ ರದಾನ ಜ್ಞಾನ ಕಲಿಯಲು ವಿದ್ಯಾದೇಗುಲಕ್ಕೆ ಬನ್ನಿ ಮಕ್ಕಳೆ ಎಂದು ಶಿಕ್ಷ ಕರು ಮಕ್ಕಳ ಮನವೊಲಿಕೆ ಮಾಡುತ್ತಿದ್ದಾರೆ.
Vijaya Karnataka Web the vacation ended and the school started
ರಜೆ ಮುಗಿತು, ಶುರುವಾಯ್ತು ಶಾಲೆ


ಶಿಕ್ಷ ಣ ಇಲಾಖೆ 14 ದಿನಕ್ಕೆ ಕಡಿತ ಮಾಡಿರುವ ದಸರಾ ರಜಾ ಮುಗಿದಿದೆ. ಸರಕಾರ ಮಕ್ಕಳನ್ನು ಓದಿನ ಕಡೆಗೆ ಹೆಚ್ಚಿನ ಗಮನ ಹರಿಸುವುದು ಮತ್ತು ಶಾಲೆಯತ್ತ ಸೆಳೆಯಲು ಸರ್ವ ಶಿಕ್ಷ ಣ ಅಭಿಯಾನ, ಮರಳಿ ಬಾ ಶಾಲೆಗೆ, ಬಿಸಿಯೂಟ, ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಶೊ, ಬೈಸಿಕಲ್‌, ಕಂಪ್ಯೂಟರ್‌ ಶಿಕ್ಷ ಣ ಸೇರಿದಂತೆ ನಾನಾ ಯೋಜನೆ ಕಲ್ಪಿಸಿದೆ.

ಮೊದಲೆ ದಿನ ಕಮ್ಮಿ ವಿದ್ಯಾರ್ಥಿಗಳು :

ಬೇಸಿಗೆ ರಜೆ ಮುಗಿದಿದೆ. ಶಾಲೆ ಆರಂಭವಾಗಿದೆ. ರಜೆ ಆಟದಲ್ಲಿ ಕಾಲ ಕಳೆದ ಮಕ್ಕಳು ಶಾಲೆಗೆ ಹೋಗಲು ಹಿಂಜರಿಯುವುದು ಸಹಜ. ರಜೆ ಮಜಾ ಸವಿದಿರುವ ಮಕ್ಕಳು ಮೊದಲ ದಿನ ವಿದ್ಯಾರ್ಥಿಗಳು ಕಡಿಮೆ ಬಂದಿದ್ದರು.

ಶಾಲೆ ಬದಲಾವಣೆ ಅಗತ್ಯ :

ಪುಟ್ಟ ಮಕ್ಕಳಿಗೆ ಶಾಲೆಗೆ ಹೋಗುವುದು ಎಂದರೆ ಒಂದು ಸಂಭ್ರಮವಾಗಬೇಕು. ಇದಾಗದೇ ನಾಲ್ಕು ಗೋಡೆಗಳಲ್ಲಿ ಮಕ್ಕ ಳನ್ನು ಕೂಡಿಹಾಕುವಂತಹ ವ್ಯವಸ್ಥೆ ಇದೆ. ಹೀಗಾಗಿ ಮಕ್ಕಳು ಶಾಲೆಗೆ ಹೋಗಲು ಹಿಂಜರಿಯುತ್ತಿದ್ದಾರೆ. ಮಕ್ಕಳು ಪ್ರಕೃತಿ ಯಲ್ಲಿ ಒಂದಾಗಿ ಬೆಳೆಯಬೇಕು. ಪಾಠಕ್ಕಿಂತ ಆಟ ಹೆಚ್ಚಾಗಬೇಕು. ದೈಹಿಕ ಬೆಳವಣಿಗೆಗೆ ಆದ್ಯತೆ ನೀಡಬೇಕು. ಮಗುವಿನ ಮನಸ್ಸು ಹೂವಿನಂತೆ ಅರಳಬೇಕು. ಮಗುವಿಗೆ ಹೆದರಿಕೆ, ಸಂಕೋಚ ಇರದಂತೆ ನೋಡಿಕೊಳ್ಳಬೇಕು ಎಂಬುದು ಪಾಲಕರ ಆಶಯ.

ಶಿಕ್ಷ ಕರನ್ನು ಮಕ್ಕಳು ತಂದೆ ತಾಯಿಗಿಂತ ಹೆಚ್ಚು ಪ್ರೀತಿಸುತ್ತಾರೆ. ಮಕ್ಕಳು ತಮಗೆ ಪಾಠ ಹೇಳಿಕೊಟ್ಟ ಗುರುಗಳನ್ನು ಎಂದೂ ಮರೆಯುವುದಿಲ್ಲ. ಅಕ್ಷ ರ ಕಲಿಸಿದ ಗುರುಗಳಿಗೆ ಪರಂಪರೆಯಲ್ಲಿ ದೊಡ್ಡ ಸ್ಥಾನವಿದೆ. ಸರಕಾರ ಶೈಕ್ಷ ಣಿಕ ಪ್ರಗತಿಗೆ ಎಲ್ಲ ಸವಲತ್ತು ಕಲ್ಪಿಸಿಕೊಟ್ಟಿದೆ. ಮಕ್ಕಳಿಗೆ ಶಿಕ್ಷ ಕರ ಬಗ್ಗೆ ಇರುವ ಗೌರವ ಕಡಿಮೆಯಾಗುತ್ತದೆ. ಮಕ್ಕಳಿಗೆ ಬಿಸಿಯೂಟ ನೀಡಲು ಆರಂಭಿಸಿದ ಮೇಲೆ ಶಾಲೆಗಳಿಗೆ ಮಕ್ಕಳ ಹಾಜರಾತಿ ಅಧಿಕವಾಗಿದೆ. ಅದೇರೀತಿ ಪಠ್ಯಪುಸ್ತಕ ವಿತರಣೆ ಶಾಲೆಗಳಿಗೆ ಮೂಲ ಸವಲತ್ತು ಕಲ್ಪಿಸಿಕೊಡಬೇಕು. ಹೆಣ್ಣುಮಕ್ಕಳು ಒದುವ ಶಾಲೆಗಳಲ್ಲಿ ಶೌಚಾಲಯ ಕೊರತೆ ನಿಗಿಸಬೇಕು. ಗ್ರಾಮೀಣ ಪ್ರದೇಶ ಶಾಲೆಗಳು ಉತ್ತಮವಾಗಿ ನಡೆಯಲು ಸೌಲಭ್ಯಗಳ ಸದ್ವಿನಿಯೋಗವಾಗಬೇಕಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ