ಆ್ಯಪ್ನಗರ

ಸಂತ್ರಸ್ತರಿಗೆ ಲಾಠಿ ರುಚಿ

ನರಗುಂದ : ಜಲಾವೃತ ಗ್ರಾಮ ವೀಕ್ಷ ಣೆಗೆ ಆಗಮಿಸಿದ್ದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಲ್ಲಿ ತಮ್ಮ ನೋವು ಹೇಳಿಕೊಳ್ಳಬೇಕು ಎಂದು ಕಾದು ನಿಂತ ಸಂತ್ರಸ್ತರಿಗೆ ಅವಕಾಶ ಮಾಡಿಕೊಡದ ಪೊಲೀಸರು ಸಂತ್ರಸ್ತರನ್ನು ಚದುರಿಸುವ ವೇಳೆ ಲಾಠಿ ಬೀಸಿದ ಘಟನೆ ಶುಕ್ರವಾರ ನಡೆಯಿತು.

Vijaya Karnataka 10 Aug 2019, 7:07 pm
ನರಗುಂದ : ಜಲಾವೃತ ಗ್ರಾಮ ವೀಕ್ಷ ಣೆಗೆ ಆಗಮಿಸಿದ್ದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಲ್ಲಿ ತಮ್ಮ ನೋವು ಹೇಳಿಕೊಳ್ಳಬೇಕು ಎಂದು ಕಾದು ನಿಂತ ಸಂತ್ರಸ್ತರಿಗೆ ಅವಕಾಶ ಮಾಡಿಕೊಡದ ಪೊಲೀಸರು ಸಂತ್ರಸ್ತರನ್ನು ಚದುರಿಸುವ ವೇಳೆ ಲಾಠಿ ಬೀಸಿದ ಘಟನೆ ಶುಕ್ರವಾರ ನಡೆಯಿತು.
Vijaya Karnataka Web GDG-9NRD5
ನರಗುಂದ ತಾಲೂಕು ಕೊಣ್ಣೂರಿಗೆ ಆಗಮಿಸಿದ್ದ ಸಿಎಂ ಭೇಟಿಗೆ ಮುಂದಾದ ಸಂತ್ರಸ್ತರ ಮೇಲೆ ಪೊಲೀಸರು ಲಘು ಲಾಠಿ ಬೀಸಿದರು.

ಪ್ರವಾಹದ ಸ್ಥಿತಿ ವೀಕ್ಷಿಸಿ ಮರಳಿ ಹೋಗುತ್ತಿರುವ ವೇಳೆ ಸಂತ್ರಸ್ತರು ಮುಖ್ಯಮಂತ್ರಿಗಳ ಭೇಟಿಗೆ ಮುಂದಾರು, ಈ ವೇಳೆ ಪೊಲೀಸರು ಅವಕಾಶ ನಿರಾಕರಿಸಿ ಸಿಎಂ ಕಾರಿಗೆ ದಾರಿ ಬಿಡುವಂತೆ ಮನವಿ ಮಾಡಿಕೊಂಡರು. ಆದರೆ ತಮ್ಮ ಸಮಸ್ಯೆ ಹೇಳಿಕೊಳ್ಳಲು ಅವಕಾಶ ಕೊಡಿ ಎಂದು ಕೇಳಿದರು. ಅವಕಾಶ ಕೊಡದಿದ್ದಾಗ ಮುತ್ತಿಗೆ ಹಾಕಲು ಮುಂದಾದ ಸಂದರ್ಭದಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ ಜನರನ್ನು ಚದುರಿಸಿ ಸಿಎಂ ವಾಹನಕ್ಕೆ ದಾರಿ ಮಾಡಿಕೊಟ್ಟರು.

ಸಂತ್ರಸ್ತರ ಮೇಲೆ ಲಾಠಿ ಬೀಸಿದ್ದಕ್ಕೆ ಜನರಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು ಅಲ್ಲದೆ ಸಿಎಂ ಹೋದ ನಂತರ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರಿಗೆ ಮುತ್ತಿಗೆ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ