ಆ್ಯಪ್ನಗರ

ಕನಕದಾಸರ ಜಯಂತ್ಯುತ್ಸವ ನಾಳೆ

ಮುಂಡರಗಿ: ಕನಕದಾಸರ ಜಯಂತಿಯನ್ನು ನ. 15 ರಂದು ಪಟ್ಟಣದಲ್ಲಿಹಾಲುಮತ ಮಹಾಸಭಾ ಮತ್ತು ವಿವಿಧ ಸಮುದಾಯದ ಸಹಕಾರದಲ್ಲಿಆಚರಿಸಲಾಗುವುದು ಎಂದು ಕ್ರಾಂತಿ ವೀರಸಂಗೊಳ್ಳಿ ರಾಯಣ್ಣ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಸುರೇಶ ಹಲವಾಗಲಿ, ತಾಲೂಕು ಅಧ್ಯಕ್ಷ ಗಣೇಶ ಹಾತಲಗೇರಿ ತಿಳಿಸಿದರು.

Vijaya Karnataka 14 Nov 2019, 5:00 am
ಮುಂಡರಗಿ: ಕನಕದಾಸರ ಜಯಂತಿಯನ್ನು ನ. 15 ರಂದು ಪಟ್ಟಣದಲ್ಲಿಹಾಲುಮತ ಮಹಾಸಭಾ ಮತ್ತು ವಿವಿಧ ಸಮುದಾಯದ ಸಹಕಾರದಲ್ಲಿಆಚರಿಸಲಾಗುವುದು ಎಂದು ಕ್ರಾಂತಿ ವೀರಸಂಗೊಳ್ಳಿ ರಾಯಣ್ಣ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಸುರೇಶ ಹಲವಾಗಲಿ, ತಾಲೂಕು ಅಧ್ಯಕ್ಷ ಗಣೇಶ ಹಾತಲಗೇರಿ ತಿಳಿಸಿದರು.
Vijaya Karnataka Web the victory of the kanakadasas tomorrow
ಕನಕದಾಸರ ಜಯಂತ್ಯುತ್ಸವ ನಾಳೆ


ಬುಧವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು ತಾಲೂಕು ಕುರುಬರ ಸಂಘ ನೆರೆ ಪ್ರವಾಹ ಕಾರಣದಿಂದ ಸಾಂಕೇತಿಕವಾಗಿ ಆಚರಿಸಲು ನಿರ್ಧರಿಸಿದ್ದಾರೆ. ಆದರೆ ನೆರೆ ಸಂತ್ರಸ್ತರಿಗೆ ಸರಕಾರ, ಇತರ ಸಂಘ ಸಂಸ್ಥೆಗಳು ಸಾಕಷ್ಟು ಪ್ರಮಾಣದಲ್ಲಿಸಹಾಯ ನೀಡಿದೆ. ಹೀಗಾಗಿ ಈ ನೆಪದಲ್ಲಿಮಹಾತ್ಮರ ಆಚರಣೆ ಮಾಡದಿರುವುದು ಒಳ್ಳೆಯದಲ್ಲ. ಹೀಗಾಗಿ ಉಭಯ ಸಂಘಟನೆಗಳ ಆಶ್ರಯದಲ್ಲಿನ. 15 ರಂದು ಪಟ್ಟಣದ ಕೋಟೆ ಆಂಜನೇಯ ದೇವಸ್ಥಾನದಿಂದ ಜ.ಡಾ.ಅನ್ನದಾನೀಶ್ವರ ಸ್ವಾಮಿಗಳಿಂದ ಕನಕದಾಸರ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಮೆರವಣಿಗೆ ಸಾಗುವುದು. ನಂತರ ಪುರಸಭೆ ಗಾಂಧಿ ಭವನದಲ್ಲಿಸಾರ್ವಜನಿಕ ಸಭೆ ನಡೆಯಲಿದೆ.

ಸಾನ್ನಿಧ್ಯವನ್ನು ಧಾರವಾಡ ಮನ್ಸೂರ ಮಠದ ಜ.ರೇವಣಸಿದ್ದೇಶ್ವರ ಪೀಠದ ಬಸವರಾಜ ದೇವರು ವಹಿಸುವರು. ಪ್ರೊ.ಮಹೇಶ ಹೊಂಬಳ ಉಪನ್ಯಾಸ ನೀಡುವರು ಎಂದರು.

ಹಾಲುಮತ ಮಹಾಸಭಾ ಜಿಲ್ಲಾಗೌರವಾಧ್ಯಕ್ಷ ಚಂದ್ರಕಾಂತ ಉಳ್ಳಾಗಡ್ಡಿ, ತಾಲೂಕು ಅಧ್ಯಕ್ಷ ಯಂಕಣ್ಣ ಯಕಲಾಸಪೂರ, ಲಕ್ಷತ್ರ್ಮಪ್ಪ ಮಲ್ಲಾರ್ಜಿ, ರಮೇಶ ಡೊಣ್ಣಿ ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ