ಆ್ಯಪ್ನಗರ

ವಿಶ್ವಕರ್ಮ ಸಮಾಜ ಕೊಡುಗೆ ಅಪಾರ

ಗಜೇಂದ್ರಗಡ: ರಾಷ್ಟ್ರ ನಿರ್ಮಾಣದಲ್ಲಿಸೃಷ್ಟಿಕರ್ತ ವಿಶ್ವಕರ್ಮ ಸಮಾಜ ಕೊಡುಗೆ ಅಪಾರ, ಕುಶಲಕರ್ಮಿಗಳನ್ನು ಹೊಂದಿರುವ ವಿಶ್ವಕರ್ಮರು ದೇವಶಿಲ್ಪಿಗಾರರು ಎಂದು ತಹಸೀಲ್ದಾರ ಗುರುಸಿದ್ದಯ್ಯಾ ಹಿರೇಮಠ ಹೇಳಿದರು.

Vijaya Karnataka 18 Sep 2019, 5:00 am
ಗಜೇಂದ್ರಗಡ: ರಾಷ್ಟ್ರ ನಿರ್ಮಾಣದಲ್ಲಿಸೃಷ್ಟಿಕರ್ತ ವಿಶ್ವಕರ್ಮ ಸಮಾಜ ಕೊಡುಗೆ ಅಪಾರ, ಕುಶಲಕರ್ಮಿಗಳನ್ನು ಹೊಂದಿರುವ ವಿಶ್ವಕರ್ಮರು ದೇವಶಿಲ್ಪಿಗಾರರು ಎಂದು ತಹಸೀಲ್ದಾರ ಗುರುಸಿದ್ದಯ್ಯಾ ಹಿರೇಮಠ ಹೇಳಿದರು.
Vijaya Karnataka Web the vishwakarma society contribution is immense
ವಿಶ್ವಕರ್ಮ ಸಮಾಜ ಕೊಡುಗೆ ಅಪಾರ


ಸ್ಥಳೀಯ ತಹಸೀಲ್ದಾರ ಕಾರ್ಯಾಲಯದಲ್ಲಿತಾಲೂಕು ಆಡಳಿತದಿಂದ ವಿಶ್ವಕರ್ಮ ಜಯಂತಿ ಪ್ರಯುಕ್ತ ವಿಶ್ವಕರ್ಮರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.

ಕಮ್ಮಾರರು, ಬಡಿಗರು, ಕಂಚಗಾರರು, ಶಿಲ್ಪಿಕಾರ, ಅಕ್ಕಸಾಲಿಗ ಎಂದು ಪಂಚಾಳ ಎಂಬ ಉಪ ಪಂಗಡ ಸೇರಿರುವ ವಿಶ್ವಕರ್ಮರು ಶೈಕ್ಷಣಿಕ ಪ್ರಗತಿಗೆ ಹೆಚ್ಚು ಮಹತ್ವ ಕೊಡಲು ಮುಂದಾಗಬೇಕು. ವಂಶಜರಿಂದ ಬಂದಿರುವ ಸೂಕ್ಷತ್ರ್ಮ ವೃತ್ತಿ ಜತೆಗೆ ಮಕ್ಕಳು ವಿದ್ಯಾವಂತರಾದರೆ ಸ್ಪರ್ಧಾತ್ಮಕ ಯುಗದಲ್ಲಿಉತ್ತಮ ಬದುಕು ಸಾಗಿಸಲು ಅನಕೂಲ ಎಂದರು.

ಗಜೇಂದ್ರಗಡ ತಾಲೂಕು ವಿಶ್ವಕರ್ಮ ಸಮಾಜ ಅಧ್ಯಕ್ಷ ಮಾನಪ್ಪ ಕಂಚಗಾರ, ಎಚ್ಚರಪ್ಪ ಕಾಮನೂರ, ರವೀಂದ್ರ ಕಮ್ಮಾರ, ಶ್ರೀನಿವಾಸ ಸವದಿ, ಮಹೇಶ ಹೊರಪೇಟಿ, ವಿರುಪಾಕ್ಷಪ್ಪ ಬಡಗೇರ, ಹನುಮಂತ ಮುದಗಲ್‌, ಸುರೇಶ ಪತ್ತಾರ, ಮಂಜುನಾಥ ಬಡಿಗೇರ, ಮೌನೇಶ ಡಂಬಳ, ರಾಜು ಹೊರಪೇಟಿ, ಸಂತೋಷ ಬೆನಹಾಳ, ಪ್ರಾಣೇಶ ಹೊರಪೇಟಿ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ