ಆ್ಯಪ್ನಗರ

ಮಹಿಳೆ ಅಬಲೆಯಲ್ಲ, ಸಬಲೆ- ವೈದ್ಯ

ಗದಗ : ಇಂದಿನ ಮಹಿಳೆಯರು ಎಲ್ಲ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವ ಮೂಲಕ ತಾವು ಅಬಲೆಯಲ್ಲ ಸಬಲೆ ಎನ್ನುವುದನ್ನು ಸಾಬೀತುಪಡೆಸಿದ್ದಾರೆ ಎಂದು ಕೆವಿಎಸ್‌ಆರ್‌ ಪದವಿ ಪೂರ್ವ ಕಾಲೇಜ್‌ ಪ್ರಾಚಾರ್ಯ ಅನೀಲ ವೈದ್ಯ ಹೇಳಿದರು.

Vijaya Karnataka 11 Mar 2019, 5:00 am
ಗದಗ : ಇಂದಿನ ಮಹಿಳೆಯರು ಎಲ್ಲ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವ ಮೂಲಕ ತಾವು ಅಬಲೆಯಲ್ಲ ಸಬಲೆ ಎನ್ನುವುದನ್ನು ಸಾಬೀತುಪಡೆಸಿದ್ದಾರೆ ಎಂದು ಕೆವಿಎಸ್‌ಆರ್‌ ಪದವಿ ಪೂರ್ವ ಕಾಲೇಜ್‌ ಪ್ರಾಚಾರ್ಯ ಅನೀಲ ವೈದ್ಯ ಹೇಳಿದರು.
Vijaya Karnataka Web GDG-10SALIM1
ಗದಗನಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಅನೀಲ ವೈದ್ಯ ಮಾತನಾಡಿದರು.


ಇಲ್ಲಿನ ವರಸಿದ್ಧಿ ವಿನಾಯಕ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 18ನೇ ಶತಮಾನದಲ್ಲಿ ಯುನೈಟೆಡ್‌ ಕಿಂಗ್ಡಮ್‌ನಲ್ಲಿ ಮಹಿಳೆಯರಿಗೆ ಸ್ವಾತಂತ್ಯದ ಅವಶ್ಯಕತೆಗಾಗಿ ಮಹಿಳಾ ದಿನಾಚರಣೆ ಪ್ರಾರಂಭವಾಯಿತು. ತಮ್ಮ ಸ್ವಂತಿಕೆ ಹಾಗೂ ತನ್ನೆಲ್ಲ ತೊಂದರೆ ಸಹಿಸಿಕೊಂಡು ಕುಟುಂಬದ ರಕ್ಷ ಣೆಯಲ್ಲಿ ಸದಾ ಶ್ರಮಿಸುವಳು ಭಾರತೀಯ ಮಹಿಳೆಯರು ಮಾತ್ರ. ಕುಟುಂಬದ ಜವಾಬ್ದಾರಿ ನಿಭಾಯಿಸುವುದರಲ್ಲಿ ಮಹಿಳೆ ತಮ್ಮ ಸ್ವಾತಂತ್ರ್ಯವನ್ನು ಕಂಡುಕೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಶಿಕ್ಷ ಕಿ ಅಕ್ಷ ತಾ ಗೊಲ್ಲಪ್ಪನವರ ಮಾತನಾಡಿ, ಮಹಿಳಾ ದಿನಾಚರಣೆ ಕೇವಲ ಆಚರಣೆ ಆಗಬಾರದು, ಹಮ್ಮಿಕೊಂಡ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕು. ಮಹಿಳೆಯಿರಲಿ, ಪುರುಷರಿರಲಿ ಸಮಾನವಾದ ಎಲ್ಲರಿಗೂ ಅರ್ಹತೆಗನುಗುಣವಾಗಿ ಅವಕಾಶ ಮುಖ್ಯ ಎಂದರು.

ಅಂಚೆ ಅಧಿಕಾರಿ ನಾಡಗೇರ ಕಾರ್ಯಕ್ರಮ ನಿರೂಪಿಸಿದರು. ವಿಜಯಾ ವೈದ್ಯ, ಶೋಭಾ ನಾಡಗೇರ, ನಿರ್ಮಲಾ ಮೆಲ್ಮೂರಿ, ವಾಣಿ ಭಟ್‌, ಸುಮತಿ ಭಟ್‌, ದೇಶಪಾಂಡೆ, ವಿಷ್ಣು ಪಾಟೀಲ, ಅನ್ನಪೂರ್ಣ ಗೊಲ್ಲಪ್ಪನ್ನವರ, ಮಹೇಶ ಗೊಲ್ಲಪ್ಪನವರ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ