ಆ್ಯಪ್ನಗರ

ಹುಷಾರು ಕರೆಂಟ್‌ ಸ್ವಿಚ್‌ ಬೋರ್ಡ್‌ ಇದೆ

ಮುಂಡರಗಿ: ಕಣ್ಣಿಗೆ ಕಾಣದ ವಿದ್ಯುತ್‌ ಅನೇಕ ಬಾರಿ ಅಪಾಯ ಒಡ್ಡಿದ ಉದಾಹರಣೆಗಳಿವೆ. ಅದರಲ್ಲಿಯೂ ಸಾರ್ವಜನಿಕರು, ಮಕ್ಕಳು ಮಹಿಳೆಯರು ಓಡಾಡುವ ಸ್ಥಳಗಳಲ್ಲಿವಿದ್ಯುತ್‌ ವೈಯರುಗಳು ಅಪಾಯ ತಂದೊಡ್ಡುತ್ತವೆ. ಇಂತಹ ಅಪಾಯಕ್ಕೆ ಅಹ್ವಾನ ನೀಡುವ ಪುರಸಭೆ ಡಿಪೋ ರಸ್ತೆಯಲ್ಲಿರುವ ಜೆ.ಎಚ್‌.ಪಟೇಲ ನಗರದ

Vijaya Karnataka 16 Sep 2019, 5:00 am
ಮುಂಡರಗಿ: ಕಣ್ಣಿಗೆ ಕಾಣದ ವಿದ್ಯುತ್‌ ಅನೇಕ ಬಾರಿ ಅಪಾಯ ಒಡ್ಡಿದ ಉದಾಹರಣೆಗಳಿವೆ. ಅದರಲ್ಲಿಯೂ ಸಾರ್ವಜನಿಕರು, ಮಕ್ಕಳು ಮಹಿಳೆಯರು ಓಡಾಡುವ ಸ್ಥಳಗಳಲ್ಲಿವಿದ್ಯುತ್‌ ವೈಯರುಗಳು ಅಪಾಯ ತಂದೊಡ್ಡುತ್ತವೆ. ಇಂತಹ ಅಪಾಯಕ್ಕೆ ಅಹ್ವಾನ ನೀಡುವ ಪುರಸಭೆ ಡಿಪೋ ರಸ್ತೆಯಲ್ಲಿರುವ ಜೆ.ಎಚ್‌.ಪಟೇಲ ನಗರದ( ಸರಕಾರಿ ಐಟಿಐ ಕಾಲೇಜು ಬಳಿ) ಬೋರವೆಲ್‌ಗೆ ಜೋಡಿಸಿದ ಪಂಪ್‌ಸೆಟ್‌ ಕರೆಂಟ್‌ ಸ್ವಿಚ್‌ ಬೋರ್ಡ್‌ ತೆರೆದಿದ್ದು ತೀರಾ ಕೆಳಭಾಗದಲ್ಲಿದೆ. ಜತೆಗೆ ಪಕ್ಕದಲ್ಲಿಯೇ ಇರುವ ಬೋರವೆಲ್‌ಗೆ ಜೋಡಿಸಿದ ವೈಯರ್‌ ಹಾಗೆ ಬಿಟ್ಟಿರುವುದರಿಂದ ಅಪಾಯದ ಸ್ಥಿತಿಯಲ್ಲಿದೆ.
Vijaya Karnataka Web there is a beating current switch board
ಹುಷಾರು ಕರೆಂಟ್‌ ಸ್ವಿಚ್‌ ಬೋರ್ಡ್‌ ಇದೆ


ರಸ್ತೆ ಪಕ್ಕದಲ್ಲಿಇರುವ ಕರೆಂಟ್‌ ಮತ್ತು ವೈಯರ್‌ಗಳು ಹಾಗೆ ಬಿಟ್ಟಿರುವುದರಿಂದ ಮತ್ತು ಅಲ್ಲಿಯೇ ನೀರು ನಿಂತಿದೆ. ಪಕ್ಕದಲ್ಲಿಹಾದು ಹೋಗುವಾಗ ವೈಯರ್‌ ತುಳಿದರೆ ಮತ್ತು ಬೋರ್ಡ್‌ ತಗುಲಿದರೆ ಕರೆಂಟ್‌ ಶಾಕ್‌ ಹೊಡೆಯುವ ಸಾಧ್ಯತೆ ಹೆಚ್ಚಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ಪುರಸಭೆ ಇತ್ತ ಗಮನ ಹರಿಯಿಸಿ ಕೂಡಲೆ ತೆರೆದು ಬೋರ್ಡು ಸುವ್ಯಸ್ಥಿತವಾಗಿಡಲು ಮತ್ತು ಹೊರಗೆ ಹಾಕಿದ ವೈಯರ್‌ಗಳನ್ನು ಕಾಣದಂತೆ ಜೋಡಿಸುವ ಕ್ರಮ ಕೈಗೊಂಡು ಮುಂದಾಗುವ ಅಪಾಯ ತಪ್ಪಿಸಲು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ