ಆ್ಯಪ್ನಗರ

ಇಂದು ನಗರದಲ್ಲಿ ವಾಕ್‌ಥಾನ್‌

ಗದಗ : ವಿವಿಧ ಸಂಘಟನೆಗಳ ಸಹಯೋಗದಲ್ಲಿ ಹೆಣ್ಣು ಮಕ್ಕಳನ್ನು ಉಳಿಸಿ, ಹೆಣ್ಣು ಮಕ್ಕಳನ್ನು ಓದಿಸಿ ಎಂಬ ಘೋಷ ವಾಕ್ಯದೊಂದಿಗೆ ಜ.2 ರಂದು ನಗರಲ್ಲಿ ಬೃಹತ್‌ ವಾಕ್‌ಥಾನ್‌ ಹಮ್ಮಿಕೊಳ್ಳಲಾಗಿದೆ ಎಂದು ಸ್ತ್ರೀ ರೋಗ ತಜ್ಞರ ಸಂಘದ ಕಾರ್ಯದರ್ಶಿ ಡಾ.ಸಪ್ನಾ ಕಾಳೆ ಹೇಳಿದರು.

Vijaya Karnataka 2 Jan 2019, 5:00 am
ಗದಗ : ವಿವಿಧ ಸಂಘಟನೆಗಳ ಸಹಯೋಗದಲ್ಲಿ ಹೆಣ್ಣು ಮಕ್ಕಳನ್ನು ಉಳಿಸಿ, ಹೆಣ್ಣು ಮಕ್ಕಳನ್ನು ಓದಿಸಿ ಎಂಬ ಘೋಷ ವಾಕ್ಯದೊಂದಿಗೆ ಜ.2 ರಂದು ನಗರಲ್ಲಿ ಬೃಹತ್‌ ವಾಕ್‌ಥಾನ್‌ ಹಮ್ಮಿಕೊಳ್ಳಲಾಗಿದೆ ಎಂದು ಸ್ತ್ರೀ ರೋಗ ತಜ್ಞರ ಸಂಘದ ಕಾರ್ಯದರ್ಶಿ ಡಾ.ಸಪ್ನಾ ಕಾಳೆ ಹೇಳಿದರು.
Vijaya Karnataka Web today is the city valkathon
ಇಂದು ನಗರದಲ್ಲಿ ವಾಕ್‌ಥಾನ್‌


ಈ ಕುರಿತು ಪ್ರತಿಕಾ ಪ್ರಕಟಣೆ ನೀಡಿದ ಅವರು, ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿವೆ. ಈ ಹಿನ್ನೆಲೆ ಯಲ್ಲಿ ಲಿಂಗ ಸಮಾನತೆ ಕುರಿತು ಜಾಗೃತಿಗಾಗಿ ನಗರದಲ್ಲಿ ವಾಕ್‌ಥಾನ್‌ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 9 ಕ್ಕೆ ಇಲ್ಲಿನ ಮಹಾತ್ಮ ಗಾಂಧಿ ವೃತ್ತದಿಂದ ಆರಂಭಗೊಳ್ಳುವ ವಾಕ್‌ಥಾನ್‌ ರೋಟರಿ ಸರ್ಕಲ್‌, ಭೂಮರೆಡ್ಡಿ ಸರ್ಕಲ್‌, ಹಳೆ ಡಿಸಿ ಕಚೇರಿ ವೃತ್ತ ಮಾರ್ಗವಾಗಿ ಭೀಷ್ಮಕೆರೆ ಬಸವೇಶ್ವರ ಪುತ್ಥಳಿ ಉದ್ಯಾನಕ್ಕೆ ತಲುಪಿ ಮುಕ್ತಾಯಗೊಳ್ಳಲಿದೆ. 2008ರಿಂದ ಹೆಣ್ಣು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ದೇಶದ 240 ಘಟಕ ಹೊಂದಿದ್ದು ಸುಮಾರು 35 ಸಾವಿರ ಸದಸ್ಯರಿದ್ದಾರೆ. ಜ.2 ರಂದು ನಗರದಲ್ಲಿ ಹಮ್ಮಿಕೊಂಡಿರುವ ವಾಕ್‌ಥಾನ್‌ನಲ್ಲಿ ಗದಗ ಪ್ರಸೂತಿ ಹಾಗೂ ಸ್ತ್ರೀ ರೋಗ ತಜ್ಞರ ಸಂಘದ ಸದಸ್ಯರೊಂದಿಗೆ ಐಎಂಎ, ಐಎಂಎ ಲೇಡಿಸ್‌ ವಿಂಗ್‌, ಗದಗ ಸರಕಾರಿ ವೈದ್ಯಕೀಯ ಕಾಲೇಜು(ಜಿಮ್ಸ್‌), ಲಯನ್ಸ್‌ ಕ್ಲಬ್‌, ಇನ್ನರ್‌ವೀಲ್‌ ಕ್ಲಬ್‌, ರೆಡ್‌ ಕ್ರಾಸ್‌ ಸೇದರಿಂತೆ ಇನ್ನಿತರೆ ಸಂಘಟನೆಗಳು ಕೈಜೋಡಿಸಲಿವೆ. ಅದರೊಂದಿಗೆ ಅವಳಿ ನಗರದ ಸಾರ್ವಜನಿಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ವಾಕ್‌ಥಾನ್‌ನಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ