ಆ್ಯಪ್ನಗರ

ಟವರ್‌ ಬಂದ್‌: ನಾಟ್‌ರಿಚೇಬಲ್‌

ನರಗುಂದ : ನೆರೆ ಪೀಡಿತ ಪ್ರದೇಶದಲ್ಲಿ ಜಲಾವೃಗೊಂಡ ಬಹುತೇಕ ಮೊಬೈಲ್‌ ಟವರ್‌ಗಳು ಬಂದಾಗಿದ್ದರಿಂದ ನೆಟ್‌ವರ್ಕ್‌ ಬರುತ್ತಿಲ್ಲ. ಇದರಿಂದ ಜಲಾವೃತ ಗ್ರಾಮಗಳಲ್ಲಿ, ಕಾಳಜಿ ಕೇಂದ್ರದಲ್ಲಿರುವ ನೆರೆ ಸಂತ್ರಸ್ತರು ಅವರ ಸಂಬಂಧಿಕರಿಗೆ, ಸ್ನೇಹಿತರಿಗೆ ಸಿಗದೆ ಇದ್ದರಿಂದ ಮತ್ತು ನೆರೆ ಪೀಡಿತ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಮೊಬೈಲ್‌ಗಳು ರಿಂಗಣಿಸುತ್ತಿಲ್ಲ.

Vijaya Karnataka 14 Aug 2019, 5:00 am
ನರಗುಂದ : ನೆರೆ ಪೀಡಿತ ಪ್ರದೇಶದಲ್ಲಿ ಜಲಾವೃಗೊಂಡ ಬಹುತೇಕ ಮೊಬೈಲ್‌ ಟವರ್‌ಗಳು ಬಂದಾಗಿದ್ದರಿಂದ ನೆಟ್‌ವರ್ಕ್‌ ಬರುತ್ತಿಲ್ಲ. ಇದರಿಂದ ಜಲಾವೃತ ಗ್ರಾಮಗಳಲ್ಲಿ, ಕಾಳಜಿ ಕೇಂದ್ರದಲ್ಲಿರುವ ನೆರೆ ಸಂತ್ರಸ್ತರು ಅವರ ಸಂಬಂಧಿಕರಿಗೆ, ಸ್ನೇಹಿತರಿಗೆ ಸಿಗದೆ ಇದ್ದರಿಂದ ಮತ್ತು ನೆರೆ ಪೀಡಿತ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಮೊಬೈಲ್‌ಗಳು ರಿಂಗಣಿಸುತ್ತಿಲ್ಲ.
Vijaya Karnataka Web tower stopped notrechable
ಟವರ್‌ ಬಂದ್‌: ನಾಟ್‌ರಿಚೇಬಲ್‌

ಕೊಣ್ಣೂರು ಗ್ರಾಮದಲ್ಲಿ ಐದಕ್ಕೂ ಹೆಚ್ಚು ಟವರಗಳಿದ್ದು ಅವೆಲ್ಲವೂ ಪ್ರವಾಹಕ್ಕೆ ಸಿಲುಕಿಕೊಂಡ ಪರಿಣಾಮ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ಕಳೆದ ಐದು ದಿನಗಳಿಂದ ಮೊಬೈಲ್‌ ನೆಟ್‌ವರ್ಕ್‌ ಇಲ್ಲದ್ದರಿಂದ ಗ್ರಾಮಸ್ಥರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ.

ಸಂತ್ರಸ್ತರ ನಂಬರ್‌ಗೆ ಫೋನ್‌ ಮಾಡಿದರೆ 'ನೀವು ಕೆರೆ ಮಾಡಿದ ಗ್ರಾಹಕರು ವ್ಯಾಪ್ತಿ ಪ್ರದೇಶದಿಂದ ಹೊರಗೆ ಇದ್ದಾರೆ' ' ದಿಸ್‌ ನಂಬರ್‌ ನಾಟ್‌ರಿಚೇಬಲ್‌' ಎಂಬ ಉತ್ತರ ಬರುತ್ತದೆ. ಜತೆಗೆ ಸಂತ್ರಸ್ತರು ತಮ್ಮ ಸಂಬಂದಿಕರಿಗೆ ಫೋನ್‌ ಮಾಡಲು ಪರದಾಡುತ್ತಿದ್ದಾರೆ. ನಿತ್ಯ ಮೊಬೈಲ್‌ನಲ್ಲಿ ಕಾಲ ಕಳೆಯುತ್ತಿದ್ದ ಯುವಕರು ಮೊಬೈಲ್‌ ಬಿಟ್ಟು ಕುಳಿತಿದ್ದರೆ ಕೆಲವರು ನೆಟ್‌ವರ್ಕ್‌ ಹುಡುಕಿಕೊಂಡು ಹೋಗುತ್ತಿರುವ ಘಟನೆಗಳು ನಡೆದಿವೆ.

ಪ್ರವಾಹ ಪೀಡಿತ ಕೊಣ್ಣೂರ, ಶಿರೋಳ, ಬೂದಿಹಾಳ, ಲಖಮಾಪುರ, ವಾಸನ, ಬೆಳ್ಳೇರಿ ಗ್ರಾಮಗಳಲ್ಲಿ ನೆಟ್‌ವರ್ಕ್‌ ಇಲ್ಲದ್ದರಿಂದ ಸಂತ್ರಸ್ತರು ಸಂಪರ್ಕಕ್ಕೆ ಸಿಗುತ್ತಿಲ್ಲ.ಜತೆಗೆ ಸಂತ್ರಸ್ತರು ಫೋನ್‌ ಹೊರಗೆ ಹೋಗುತ್ತಿಲ್ಲ. ಸಂಪರ್ಕ ಕಡಿತದಿಂದ ನೆರೆ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಜನರ, ಮೇಲಾಧಿಕಾರಿಗಳ ಸಂರ್ಪಕಕ್ಕೆ ಸಿಗದೆ ಪರದಾಡುವಂತೆ ಮಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ