ಆ್ಯಪ್ನಗರ

ತಾಪಂ: ದೊಡ್ಡಮೇಟಿ ಕುಟುಂಬದ 4ನೇ ತಲೆಮಾರಿನ ಕುಡಿಗೆ ಜಯ

ನರೇಗಲ್ಲ:ಸಮೀಪದ ಜಕ್ಕಲಿ ಗ್ರಾಮದಿಂದ ಜಕ್ಕಲಿ ಸಾಮಾನ್ಯ ಚುನಾವಣೆ ಕ್ಷೇತ್ರಕ್ಕೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಅಂದಾನಪ್ಪ ದೊಡ್ಡಮೇಟಿಯವರ

ವಿಕ ಸುದ್ದಿಲೋಕ 25 Feb 2016, 5:00 am
ನರೇಗಲ್ಲ:ಸಮೀಪದ ಜಕ್ಕಲಿ ಗ್ರಾಮದಿಂದ ಜಕ್ಕಲಿ ಸಾಮಾನ್ಯ ಚುನಾವಣೆ ಕ್ಷೇತ್ರಕ್ಕೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಅಂದಾನಪ್ಪ ದೊಡ್ಡಮೇಟಿಯವರ ನಾಲ್ಕನೇ ತಲೆಮಾರಿನ ಕುಡಿ ಅಂದಾನಪ್ಪ (ಸಂದೇಶ) ದೊಡ್ಡಮೇಟಿ ಜಯಶಾಲಿಯಾಗಿದ್ದಾನೆ.
Vijaya Karnataka Web tp doddameti family 4th generation scion of victory
ತಾಪಂ: ದೊಡ್ಡಮೇಟಿ ಕುಟುಂಬದ 4ನೇ ತಲೆಮಾರಿನ ಕುಡಿಗೆ ಜಯ


ಕಾಂಗ್ರೆಸ್ ಅಭ್ಯರ್ಥಿ 2204 ಮತಗಳನ್ನು ಪಡೆದರೆ ಅಂದಾನಪ್ಪ ದೊಡ್ಡಮೇಟಿ 2679 ಮತಗಳನ್ನು ಪಡೆವ ಮೂಲಕ 475 ಮತಗಳ ಅಂತರದಿಂದ ಜಯ ತಮ್ಮದಾಗಿಸಿ ಕೊಂಡಿದ್ದಾರೆ. ಫಲಿತಾಂಶ ಹೊರಬೀಳುತ್ತಿದ್ದಂತೆ ಜಕ್ಕಲಿ, ಬೂದಿಹಾಳ ಹಾಗೂ ಮಾರನಬಸರಿ ಗ್ರಾಮದ ಸಮಸ್ತ ಬಿಜೆಪಿ ಕಾರ್ಯಕರ್ತರ ಜಯಘೋಷಗಳು ಮುಗಿಲು ಮುಟ್ಟುವಂತಿತ್ತು.

ಗೆಲುವಿನ ಅಭ್ಯರ್ಥಿ ತಮ್ಮ ಕಾರ್ಯಕರ್ತರೊಡಗೂಡಿ ಮೂರು ಗ್ರಾಮದ ಸಮಸ್ತ ಕಾರ್ಯಕರ್ತರೊಂದಿಗೆ ಮನೆಗೆ ಆಗಮಿದಾಗ ತಾಯಿ ಆರತಿ ಎತ್ತಿ ಮಗನನ್ನು ಬರಮಾಡಿಕೊಂಡರು.

ವಿಜಯೋತ್ಸವದಲ್ಲಿ ಮುತ್ತು ಮಡಗದ, ಶೇಖಪ್ಪ ಮಾರನಬಸರಿ, ಚನ್ನಬಸವರಾಜ ಕೊಪ್ಪದ, ಜಗದೀಶ ಪಲ್ಲೇದ, ಚಂದ್ರು ಮಾರನಬಸರಿ, ಶೀವಕುಮಾರ ದಿಂಡೂರ, ಪ್ರಕಾಶ ವಾಲಿ, ಗುರರುಪಾದ ವಾಲಿ, ಶಿವಪ್ಪ ಕೆಳಗಡೆ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ