ಆ್ಯಪ್ನಗರ

ಮುಳಗುಂದ ವಲಯ ಒಕ್ಕೂಟದ ಪದಾಧಿಕಾರಿಗಳ ತರಬೇತಿ

ಮುಳಗುಂದ: ಸಮೀಪದ ಚಿಂಚಲಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಮಿತಿಯಿಂದ ಮುಳಗುಂದ ವಲಯ ಒಕ್ಕೂಟದ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮ ದಿ.18 ರಂದು ನಡೆಯಿತು.

Vijaya Karnataka 19 Sep 2019, 5:00 am
ಮುಳಗುಂದ: ಸಮೀಪದ ಚಿಂಚಲಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಮಿತಿಯಿಂದ ಮುಳಗುಂದ ವಲಯ ಒಕ್ಕೂಟದ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮ ದಿ.18 ರಂದು ನಡೆಯಿತು.
Vijaya Karnataka Web training of mulagunda zone federation officers
ಮುಳಗುಂದ ವಲಯ ಒಕ್ಕೂಟದ ಪದಾಧಿಕಾರಿಗಳ ತರಬೇತಿ


ಗದಗ ತಾಲೂಕು ಯೋಜನಾಧಿಕಾರಿ ಸುಕೇಶ ಕಾರ್ಯಕ್ರಮ ಜ್ಯೋತಿ ಬೆಳಗಿಸಿ ಮತನಾಡಿ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿಯಿಂದ ಮಹಿಳೆಯರ ಸ್ವಾವಲಂಬಿ ಜೀವನ ನಡೆಸುವಂತಾಗಿದೆ.ಮನೆಗೆ ಸೀಮಿತಗೊಂಡಿದ್ದ ಮಹಿಳೆಯರು ಇಂದು ಪ್ರಪಂಚದ ಜ್ಞಾನ ಅರಿವಿನ ಜತೆಗೆ ಆರ್ಥಿಕವಾಗಿಯೂ ಸಬಲರಾಗುತ್ತಿದ್ದಾರೆ ಎಂದರು.

ಮುಳಗುಂದ ವಲಯ ಮೇಲ್ವಿಚಾರಕ ರಾಜಕುಮಾರ ಮಾತನಾಡಿ, ಸಂಸ್ಥೆಯು ಗ್ರಾಮೀಣ ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸ್ವಸಹಾಯ ಸಂಘಗಳನ್ನು ಸ್ಥಾಪಿಸಿ ಮಹಿಳೆಯರ ಅವಶ್ಯಕತೆಗೆ ಅನುಗುಣವಾಗಿ ಹೈನುಗಾರಿಕೆ, ವ್ಯಾಪಾರ ಅಭಿವೃದ್ಧಿ, ವಿದ್ಯಾಭ್ಯಾಸ, ಕೃಷಿ ಮುಂತಾದ ಸಾಲವನ್ನು ನೀಡುತ್ತಿದ್ದು, ಸದಸ್ಯರು ಸಾಲವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿದಿ.22 ರಂದು ಬೆಂಗಳೂರಿನಲ್ಲಿನಡೆಯುತ್ತಿರುವ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿಭಾಗವಹಿಸಲು ಗದಗ ಜಿಲ್ಲೆಯಿಂದ ಹೋಗುತ್ತಿರುವ ಮುಳಗುಂದ ಯೋಗ ಪಟುಗಳಾದ ಅನುಪಮಾ ಚಿಂಚಲಿ, ಕಾವ್ಯಾ ಪರಡ್ಡಿ, ದ್ರಾಕ್ಷಾಯಣಿ ವಿಜಾಪೂರ, ಲಕ್ಕುಂಡಿಯ ಪ್ರೀತಿ ಹಡಗಲಿ ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿಚಿಂಚಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಪ್ರಧಾನ ಗುರು ನದ್ದಿಮುಲ್ಲಾಅಧ್ಯಕ್ಷತೆ ವಹಿಸಿದ್ದರು. ಗದಗ ತಾಲೂಕು ಯೋಜನಾಧಿಕಾರಿ ಸುಕೇಶ್‌, ಮುಳಗುಂದ ವಲಯ ಮಟ್ಟದ ಮೇಲ್ವಿಚಾರಕ ರಾಜಕುಮಾರ, ಯೋಗ ಶಿಕ್ಷಕ ಪ್ರಕಾಶ ಮದ್ದಿನ, ಮಹಾಂತೇಶ ವಿಜಾಪೂರ, ಅಕ್ಕಮ್ಮಾ ನೀಲಗುಂದ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ