ಆ್ಯಪ್ನಗರ

ಪರೀಕ್ಷಾರ್ಥಿಗಳ ಕನಸಿಗೆ ಸಾರಿಗೆ ಸಂಸ್ಥೆ ಅಡ್ಡಿ

ಗದಗ: ಸಿವಿಲ್‌ ಪೊಲೀಸ್‌ ಪರೀಕ್ಷೆ ಬರೆದು ಸರಕಾರಿ ನೌಕರಿ ಪಡೆದು, ಭವಿಷ್ಯ ರೂಪಿಸಿಕೊಳ್ಳುವ ಕನಸು ಕಂಡಿದ್ದ ಪರೀಕ್ಷಾರ್ಥಿಗಳ ಆಸೆಗೆ ಸಾರಿಗೆ ಸಂಸ್ಥೆ ತಣ್ಣೀರು ಎರಚಿದೆ.

Vijaya Karnataka 18 Nov 2019, 5:00 am
ಗದಗ: ಸಿವಿಲ್‌ ಪೊಲೀಸ್‌ ಪರೀಕ್ಷೆ ಬರೆದು ಸರಕಾರಿ ನೌಕರಿ ಪಡೆದು, ಭವಿಷ್ಯ ರೂಪಿಸಿಕೊಳ್ಳುವ ಕನಸು ಕಂಡಿದ್ದ ಪರೀಕ್ಷಾರ್ಥಿಗಳ ಆಸೆಗೆ ಸಾರಿಗೆ ಸಂಸ್ಥೆ ತಣ್ಣೀರು ಎರಚಿದೆ.
Vijaya Karnataka Web 17SALIM15_25
ಗದಗ ಬಸ್‌ ನಿಲ್ದಾಣದಲ್ಲಿಧಾರವಾಡ-ಯಾದಗಿರಿ ಬಸ್‌ಗೆ ಮುತ್ತಿಗೆ ಹಾಕಿರುವ ಪರೀಕ್ಷಾರ್ಥಿಗಳು.


ಶನಿವಾರ ರಾತ್ರಿ ಗದಗ ಕೇಂದ್ರ ಬಸ್‌ ನಿಲ್ದಾಣದಲ್ಲಿ50ಕ್ಕೂ ಹೆಚ್ಚು ಯುವಕರು ಸಿವಿಲ್‌ ಪೊಲೀಸ್‌ ಪರೀಕ್ಷೆ ಬರೆಯಲು ಕಲಬುರ್ಗಿಗೆ ಹೋಗಬೇಕಾಗಿತ್ತು. ಆದರೆ ಬಸ್‌ ಇಲ್ಲದ ಕಾರಣ ಯುವಕರು ಪರೀಕ್ಷೆಯಿಂದ ತಪ್ಪಿಸಿಕೊಳ್ಳುವಂತಾಯಿತು.

ಶನಿವಾರ ರಾತ್ರಿ 9 ಗಂಟೆಯಿಂದಲೂ ಕಲಬುರ್ಗಿಗೆ ತೆರಳುವ ಬಸ್ಸಿಗಾಗಿ ಯುವಕರು ಕಾದು ಕುಳಿತಿದ್ದಾರೆ. ಆದರೆ ಕಲಬುರ್ಗಿ ಮತ್ತು ಆ ಮಾರ್ಗದಲ್ಲಿಸಂಚರಿಸುವ ಒಂದೇ ಒಂದು ಬಸ್‌ ಸಹ ಬಂದಿಲ್ಲ. ಈ ವಿಚಾರವಾಗಿ ಯುವಕರು ನಿಲ್ದಾಣದ ಅಧಿಕಾರಿಗಳನ್ನು ವಿಚಾರಿಸಿದಾಗ ಬಸ್‌ ಇಲ್ಲಎನ್ನುವ ಉತ್ತರ ನೀಡಿದ್ದಾರೆ. 50ಕ್ಕೂ ಹೆಚ್ಚು ಯುವಕರು ಪರೀಕ್ಷೆಗೆ ತೆರಳುವವರಿದ್ದ ವಿಶೇಷ ಬಸ್‌ ವ್ಯವಸ್ಥೆ ಮಾಡಿ ಎಂದು ವಿನಂತಿಸಿದರೂ ಅಧಿಕಾರಿಗಳು ಸ್ಪಂದಿಸಿಲ್ಲ.

ಶಾಸಕರ ಮಾತಿಗೂ ಇಲ್ಲಬೆಲೆ :
ಅಧಿಕಾರಿಗಳು ಸ್ಪಂದಿಸದಿದ್ದಾಗ ಪರೀಕ್ಷಾರ್ಥಿಗಳು ಶಾಸಕ ಎಚ್‌.ಕೆ. ಪಾಟೀಲ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಸಮಸ್ಯೆ ಹೇಳಿಕೊಂಡಿದ್ದಾರೆ. ತಕ್ಷಣ ಸ್ಪಂದಿಸಿದ ಶಾಸಕರು, ಅಧಿಕಾರಿಗಳಿಗೆ ಕರೆ ಮಾಡಿ ಕಲಬುರ್ಗಿಗೆ ಬಸ್‌ ಬಿಡುವಂತೆ ಸೂಚನೆ ನೀಡಿದರೂ ಅಧಿಕಾರಿಗಳು ಮಾತ್ರ ಸ್ವಲ್ಪವೂ ಸ್ಪಂದಿಸಿಲ್ಲ.

ಅರ್ಧ ಗಂಟೆ Nೕರಾವ್‌ :
ಏನೆಲ್ಲಕಸರತ್ತು ನಡೆಸಿದರೂ ಬಸ್‌ ಬಿಡದಿದ್ದಾಗ ಆಕ್ರೋಶಗೊಂಡ ಪರೀಕ್ಷಾರ್ಥಿಗಳು ಧಾರವಾಡದಿಂದ ಯಾದಗಿರಿಗೆ ಹೊರಟಿದ್ದ ರಾಜಹಂಸ ಬಸ್‌ ಅಡ್ಡಗಟ್ಟಿ ತಡೆಹಿಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ಬಸ್‌ ಹೋಗಲು ಅನುವು ಮಾಡಿಕೊಟ್ಟರು.

ಸಾರಿಗೆ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಭವಿಷ್ಯದಲ್ಲಿಪೊಲೀಸ್‌ ಇಲಾಖೆಯಲ್ಲಿಸೇವೆ ಸಲ್ಲಿಸಬೇಕಾವರ ಭವಿಷ್ಯಕ್ಕೆ ಎಳ್ಳು ನೀರು ಬಿಟ್ಟಂತಾಗಿದೆ. ಈ ಎಲ್ಲಸಮಸ್ಯೆಗೆ ಕಾರಣರಾದವರ ವಿರುದ್ಧ ಕ್ರಮ ಕ್ರಮ ಕೈಗೊಳ್ಳಬೇಕು ಎಂದು ಪರೀಕ್ಷಾರ್ಥಿಗಳು ಒತ್ತಾಯಿಸಿದ್ದಾರೆ.

ಪ್ರತಿಕ್ರಿಯಿಸದ ಅಧಿಕಾರಿಗಳು
ಪರೀಕ್ಷಾರ್ಥಿಗಳಿಗೆ ಬಸ್‌ ಸೌಲಭ್ಯ ಕಲ್ಪಿಸದಿರುವ ಕುರಿತು ಸಾರಿಗೆ ಇಲಾಖೆ ಹಿರಿಯ ಅಧಿಕಾರಿಗಳು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ