ಆ್ಯಪ್ನಗರ

ಎಸಿಬಿ ಬಲೆಗೆ ಇಬ್ಬರು ಸರ್ವೆಯರ್‌

ಗದಗ: ನಿವೇಶನದ ನಕ್ಷೆ ತಯಾರಿಸಿ ಕೊಡಲು 1 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಭೂಮಾಪಕರ ಕಚೇರಿಯ ಇಬ್ಬರು ಸಿಬ್ಬಂದಿಯನ್ನು ವಶಕ್ಕೆ ಪಡೆದಿದ್ದಾರೆ.

Vijaya Karnataka 21 Sep 2019, 5:52 pm
ಗದಗ: ನಿವೇಶನದ ನಕ್ಷೆ ತಯಾರಿಸಿ ಕೊಡಲು 1 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಭೂಮಾಪಕರ ಕಚೇರಿಯ ಇಬ್ಬರು ಸಿಬ್ಬಂದಿಯನ್ನು ವಶಕ್ಕೆ ಪಡೆದಿದ್ದಾರೆ.
Vijaya Karnataka Web two surveyors for the acb trap
ಎಸಿಬಿ ಬಲೆಗೆ ಇಬ್ಬರು ಸರ್ವೆಯರ್‌


ತಹಸೀಲ್ದಾರ್‌ ಕಚೇರಿ ಆವರಣದಲ್ಲಿರುವ ನಗರ ಭೂಮಾಪನ ಕಚೇರಿಯಲ್ಲಿಶುಕ್ರವಾರ ಈ ದಾಳಿ ನಡೆದಿದ್ದು, ಸಿಟಿ ಸರ್ವೆಯರ್‌ಗಳಾದ ರಮೇಶ ಅಮರಪ್ಪ ಮತ್ತು ಮೋಹನ ಚಲವಾದಿ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ನಗರದ ತಳಗೇರಿ ಓಣಿಯ ನಿವಾಸಿ ಚಂದ್ರಶೇಖರ ಗುತ್ತಿ ಎಂಬವರು ತಮ್ಮ ಚಿಕ್ಕಪ್ಪನ ಹೆಸರಿನಲ್ಲಿರುವ ನಿವೇಶನದ ನಕ್ಷೆ ತಯಾರಿಸಿಕೊಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಸತತ ಎರಡ್ಮೂರು ತಿಂಗಳಿಂದ ಭೂಮಾಪಕರ ಕಚೇರಿಗೆ ಅಲೆದಾಡಿದ ನಂತರ ಕೆಲಸ ಮಾಡಿಕೊಡಲು ಇವರಿಬ್ಬರೂ 1 ಸಾವಿರ ರೂ. ಬೇಡಿಕೆ ಇಟ್ಟಿದ್ದಾರೆ.

ನಂತರ ಹಣ ನೀಡುತ್ತಿದ್ದಾಗ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಎಸಿಬಿ ಠಾಣೆಯ ಡಿಎಸ್ಪಿ ವಾಸುದೇವ ರಾಮ್‌ ಎನ್‌., ಎ.ಎಸ್‌. ಗುದಿಗೆಪ್ಪ, ವಿಶ್ವನಾಥ ಎಚ್‌., ಬಿ.ಬಿ. ಜಕ್ಕಣ್ಣವರ, ಎಂ.ಎಂ. ಅಯ್ಯನಗೌಡರ, ಆರ್‌.ಎಚ್‌. ಹೆಬಸೂರ, ಎಸ್‌.ಟಿ. ಅಣ್ಣಿಗೇರಿ, ಎಂ.ಎನ್‌. ಕರಿಗಾರ, ಎನ್‌.ಎಸ್‌. ತಾಯಣ್ಣವರ, ಈರಣ್ಣ ಜಾಲಿಹಾಳ, ವೀರೇಶ ಜೋಳದ ದಾಳಿಯಲ್ಲಿಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ