ಆ್ಯಪ್ನಗರ

ಉಪಯೋಗವಾಗದ ಹೆಸರು ಖರೀದಿ ಕೇಂದ್ರ !

​ ರೋಣ : ತಾಲೂಕಿನ ಹೆಸರು ಕಾಳನ್ನು ಬೆಂಬಲ ಬೆಲೆಯಲ್ಲಿಖರೀದಿಸಲು ಸರಕಾರ ರೋಣ ಮತ್ತು ನರೇಗಲ್‌ ನಲ್ಲಿಖರೀದಿ ಕೇಂದ್ರಗಳನ್ನು ತಡವಾಗಿ ತೆರೆದು ರೈತರ ನೋಂದಣಿ ಕಾರ್ಯ ಮುಗಿಸಿದ್ದರೂ, ಹೆಸರು ಖರೀದಿ ಮಾತ್ರ ಗಗನ ಕುಸುಮವಾಗಿದೆ.

Vijaya Karnataka 4 Nov 2019, 5:00 am
ಯಲ್ಲಪ್ಪ ತಳವಾರ
Vijaya Karnataka Web unused name purchase center
ಉಪಯೋಗವಾಗದ ಹೆಸರು ಖರೀದಿ ಕೇಂದ್ರ !

ರೋಣ : ತಾಲೂಕಿನ ಹೆಸರು ಕಾಳನ್ನು ಬೆಂಬಲ ಬೆಲೆಯಲ್ಲಿಖರೀದಿಸಲು ಸರಕಾರ ರೋಣ ಮತ್ತು ನರೇಗಲ್‌ ನಲ್ಲಿಖರೀದಿ ಕೇಂದ್ರಗಳನ್ನು ತಡವಾಗಿ ತೆರೆದು ರೈತರ ನೋಂದಣಿ ಕಾರ್ಯ ಮುಗಿಸಿದ್ದರೂ, ಹೆಸರು ಖರೀದಿ ಮಾತ್ರ ಗಗನ ಕುಸುಮವಾಗಿದೆ.

ಈಗಾಗಲೇ ಬಹುತೇಕ ರೈತರು ಬೆಳೆದ ಫಸಲನ್ನು ಮಧ್ಯವರ್ತಿಗಳಿಗೆ ಮಾರಾಟ ಮಾಡಿ ಕೈತೊಳೆದುಕೊಂಡಿದ್ದಾರೆ. ಸರಕಾರ ತೆರೆದ ಖರೀದಿ ಕೇಂದ್ರಗಳು ಮಧ್ಯವರ್ತಿಗಳ ಲಾಭಕ್ಕಾಗಿಯೇ ಎಂಬ ಚರ್ಚೆ ರೈತರಿಂದ ಕೇಳಲಾರಂಭಿಸಿದೆ.

ತಾಲೂಕಿನ ಹೊಳೆಆಲೂರ, ರೋಣ, ನರೇಗಲ್‌ ಮೂರು ಹೋಬಳಿ ಸೇರಿ ಸುಮಾರು 26,400 ಹೆಕ್ಟೇರ್‌ ಪ್ರದೇಶದಲ್ಲಿಹೆಸರು ಬೆಳೆಯಲಾಗಿತ್ತು. ರೋಣ, ನರೇಗಲ್‌ ಹೋಬಳಿಯಲ್ಲಿಮುಂಗಾರು ಮಳೆಯ ಕೊರತೆಯಾದರೆ, ಹೊಳೆಲೂರ ಹೋಬಳಿಯಲ್ಲಿಕೈಗೆ ಬರುವ ಹಂತದಲ್ಲಿದ್ದ ಹೆಸರು ಫಸಲು ಮಲಪ್ರಭೆ ಹಾಗೂ ಬೆಣ್ಣೆಹಳ್ಳದ ಪ್ರವಾಹಕ್ಕೆ ಸಿಲುಕಿ ಹಾಳಾಯಿತು. ಇನ್ನೂ ಗಜೇಂದ್ರಗಡ ಭಾಗದಲ್ಲಿಬೆಳೆದ ಸಮೃದ್ಧ ಹೆಸರು ಫಸಲು ಪ್ರತಿ ಹೆಕ್ಟೇರ್‌ಗೆ 6 ರಿಂದ 8 ಕ್ವಿಂಟಾಲ್‌ ಇಳುವರಿ ಬಂದಿದೆ. ಸೆಪ್ಟಂಬರ್‌ ಆರಂಭ ಮತ್ತು ಮಧ್ಯದಲ್ಲೇ ಬಹುಪಾಲು ರೈತರು ಕೈಸಾಲ ತೀರಿಸಿಕೊಳ್ಳಲು ಉತ್ಪನ್ನ ಮಾರಿಬಿಟ್ಟಿದ್ದಾರೆ. ಅಲ್ಲಲ್ಲಿಕೆಲವು ಬೆರಳೆಣಿಕೆಯಷ್ಟು ರೈತರು ಮಾತ್ರ ಹಾಗೇ ಇಟ್ಟುಕೊಂಡಿದ್ದಾರೆ.

ಜಿಲ್ಲಾಡಳಿತ ತಾಲೂಕಿನ ಎರಡು ಕಡೆ ತೆರೆದಿರುವ ಹೆಸರು ಖರೀದಿ ಕೇಂದ್ರಗಳಲ್ಲಿಅ.19 ರವರೆಗೆ ರೋಣ ಟಿಎಪಿಎಂಎಸ್‌ ನಲ್ಲಿ331 ಹಾಗೂ ನರೇಗಲ್‌ ಟಿಎಪಿಎಂಎಸ್‌ ನಲ್ಲಿ232 ರೈತರು ಮಾತ್ರ ನೋಂದಣಿ ಮಾಡಿಕೊಂಡಿದ್ದಾರೆ. ಎರಡೂ ಖರೀದಿ ಕೇಂದ್ರಗಳಲ್ಲಿಹೇಳಿಕೊಳ್ಳುವಂತಹ ಸಾಧನೆಯಾಗದೇ ಕರ್ತವ್ಯ ನಿರತ ಸಿಬ್ಬಂದಿ ಆಗೋಬ್ಬ,ಈಗೊಬ್ಬ ಬರುವ ರೈತರಿಗಾಗಿ ಕಾಯುವ ಸ್ಥಿತಿ ನಿರ್ಮಾಣವಾಗಿತ್ತು.

ಈಗಾಗಲೇ ಮಾರುಕಟ್ಟೆಯಲ್ಲಿಮಧ್ಯವರ್ತಿಗಳು ರೈತರಿಗೆ ಚೀಟಿ ನೀಡಿ ಕನಿಷ್ಠ 100 ರಿಂದ 250 ಚೀಲ ಹೆಸರುಕಾಳು ಸಂಗ್ರಹಿಸಿದ್ದಾರೆ. ಈಗ ತೆರೆದ ಖರೀದಿ ಕೇಂದ್ರಗಳಲ್ಲಿರೈತರ ಹೆಸರಿನಲ್ಲಿಮಾರಾಟ ಮಾಡಿ ಲಾಭ ಪಡೆಯಲು ನೋಂದಣಿ ಮಾಡಿಸಿ, ಪರೋಕ್ಷವಾಗಿ ಲಾಭ ಪಡೆಯುವ ಲೆಕ್ಕಾಚಾರದಲ್ಲಿತೊಡಗಿದ್ದಾರೆ. ಖರೀದಿ ಕೇಂದ್ರಗಳ ಬಗ್ಗೆ ತಾಲೂಕು, ಜಿಲ್ಲಾಡಳಿತ ಸೂಕ್ತ ಪ್ರಚಾರ ಮಾಡಲಿಲ್ಲ. ಕಾರಣ, ಈಗಲೂ ರೈತರು ತಮ್ಮ ಉತ್ಪನ್ನವನ್ನು ಮಧ್ಯವರ್ತಿಗಳಿಗೆ ಮಾರುತ್ತಿದ್ದಾರೆ ಎಂದು ರೈತ ಸಂಘದ ಅಧ್ಯಕ್ಷ ಮುತ್ತನಗೌಡ ಚೌಡರೆಡ್ಡಿ ಹೇಳಿದರು.

ಅವಧಿ ಮುಗಿತು,ಖರೀದಿ ಇನ್ನೂ ಇಲ್ಲ:
ಸರಕಾರ ಅ.19 ಹೆಸರು ಖರೀದಿಗೆ ನೋಂದಣಿ ಮಾಡಿಕೊಳ್ಳಲು ಕೊನೆ ದಿನಾಂಕ ನಿಗದಿಪಡಿಸಿತ್ತು. ಅದರಂತೆ ಒಟ್ಟು 563 ರೈತರು ನೋಂದಣಿ ಮಾಡಿಕೊಂಡು 15 ದಿನವಾದರೂ ಹೆಸರು ಕಾಳು ಖರೀದಿ ಆರಂಭವಾಗಿಲ್ಲ. ಈ ಹಿಂದೆ ಕೊನೆ ದಿನಾಂಕ ನಿಗದಿಯನ್ನು ನಿರೀಕ್ಷೆಯಷ್ಟು ರೈತರು ನೋಂದಣಿ ಮಾಡಿಕೊಳ್ಳದ ಕಾರಣ ಅ.19 ವರೆಗೆ ಮುಂದೂಡಲಾಗಿತ್ತು. ಆದರೂ ಹೇಳಿಕೊಳ್ಳುವಷ್ಟು ರೈತರು ಹೆಸರು ಖರೀದಿ ಕೇಂದ್ರದಲ್ಲಿಹೆಸರು ನೋಂದಾಯಿಸಲಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ