ಆ್ಯಪ್ನಗರ

ಮಗುವಿನ ಆರೋಗ್ಯಕ್ಕೆ ಲಸಿಕೆ ಹಾಕಿಸಿ

ಮುಳಗುಂದ: ಪ್ರಾಥಮಿಕ ಆರೋಗ್ಯ ಕೇಂದ್ರ,ಅಂಗನವಾಡಿಗಳಿಗೆ ಮಕ್ಕಳನ್ನು ಸ್ವಯಂ ಪ್ರೇರಣೆಯಿಂದ ಕರೆತಂದು ಪಲ್ಸ್‌ ಪೋಲಿಯೊ ಹನಿ ಹಾಕಲಾಯಿತು. ಗದಗ ಎಪಿಎಂಸಿ ಅಧ್ಯಕ್ಷ ಸಿ.ಬಿ.ಬಡ್ನಿ ಪಟ್ಟಣದ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿಮಕ್ಕಳಿಗೆ ಪೋಲಿಯೋ ಹನಿ ಹಾಕುವ ಮೂಲಕ ಲಸಿಕಾ

Vijaya Karnataka 20 Jan 2020, 5:00 am
ಮುಳಗುಂದ: ಪ್ರಾಥಮಿಕ ಆರೋಗ್ಯ ಕೇಂದ್ರ,ಅಂಗನವಾಡಿಗಳಿಗೆ ಮಕ್ಕಳನ್ನು ಸ್ವಯಂ ಪ್ರೇರಣೆಯಿಂದ ಕರೆತಂದು ಪಲ್ಸ್‌ ಪೋಲಿಯೊ ಹನಿ ಹಾಕಲಾಯಿತು.
Vijaya Karnataka Web vaccine for the health of the child
ಮಗುವಿನ ಆರೋಗ್ಯಕ್ಕೆ ಲಸಿಕೆ ಹಾಕಿಸಿ

ಗದಗ ಎಪಿಎಂಸಿ ಅಧ್ಯಕ್ಷ ಸಿ.ಬಿ.ಬಡ್ನಿ ಪಟ್ಟಣದ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿಮಕ್ಕಳಿಗೆ ಪೋಲಿಯೋ ಹನಿ ಹಾಕುವ ಮೂಲಕ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಐದು ವರ್ಷದೊಳಗಿನ ಎಲ್ಲಮಕ್ಕಳಿಗೂ ತಪ್ಪದೆ ಪಲ್ಸ್‌ ಪೋಲಿಯೊ ಹನಿ ಹಾಕಿಸಿ,ದೇಶವನ್ನು ಪೋಲಿಯೊ ಮುಕ್ತವಾಗಿಸಲು ಎಲ್ಲರೂ ಶ್ರಮಿಸೋಣ ಎಂದರು.

ಮುಳಗುಂದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಅಶ್ವಿನಿ ಕಬಾಡೆ ಮಾತನಾಡಿ, ಅಭಿಯಾನ ಅಂಗವಾಗಿ ಪಟ್ಟಣದ ಬಸ್‌ ನಿಲ್ದಾಣ, ಶಿತಾಲಹರಿಗ್ರಾಮ,ಬಸಾಪುರ ಗ್ರಾಮ ಸೇರಿದಂತೆ 20 ಬೂತ್‌ ನಿರ್ಮಿಸಿದ್ದು ಸುಮಾರು 3005ಮಕ್ಕಳ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಇದನ್ನು ಹೊರತು ಪಡಿಸಿ ಬುಧವಾರದವರಿಗೂ ಮನೆ ಮನೆಗೆ ಬೇಟಿ ನೀಡಿ ಪೋಲಿಯೋ ಹನಿ ಹಾಕಲಾಗುವುದು ಎಂದರು.

ನಜೀರ್‌ ನದಾಫ್‌,ಎಫ್‌.ಎಸ್‌.ಬಾರಿಕಾಯಿ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ