ಆ್ಯಪ್ನಗರ

ಕಣವಿ ಗ್ರಾಮದಲ್ಲಿ ವನಮಹೋತ್ಸವ

ಗದಗ: ವನಮಹೋತ್ಸವ ಅಂಗವಾಗಿ ಸಸಿ ನೆಡುವುದು ಎಷ್ಟು ಮುಖ್ಯವಾಗಿದೇಯೋ ಆ ಸಸಿಯನ್ನು ಮರವಾಗಿ ಬೆಳೆಸುವುದರಲ್ಲಿ ಮತ್ತು ಪರಿಸರ ರಕ್ಷಿಸುವ ಕಾಳಜಿ ಪ್ರತಿಯೊಬ್ಬರಿಗೂ ಅವಶ್ಯವಾಗಿದೆ ಎಂದು ತಾಪಂ ಸದಸ್ಯ ಶರಣಪ್ಪಗೌಡ ಪಾಟೀಲ ಹೇಳಿದರು.

Vijaya Karnataka 27 Jul 2019, 5:00 am
ಗದಗ: ವನಮಹೋತ್ಸವ ಅಂಗವಾಗಿ ಸಸಿ ನೆಡುವುದು ಎಷ್ಟು ಮುಖ್ಯವಾಗಿದೇಯೋ ಆ ಸಸಿಯನ್ನು ಮರವಾಗಿ ಬೆಳೆಸುವುದರಲ್ಲಿ ಮತ್ತು ಪರಿಸರ ರಕ್ಷಿಸುವ ಕಾಳಜಿ ಪ್ರತಿಯೊಬ್ಬರಿಗೂ ಅವಶ್ಯವಾಗಿದೆ ಎಂದು ತಾಪಂ ಸದಸ್ಯ ಶರಣಪ್ಪಗೌಡ ಪಾಟೀಲ ಹೇಳಿದರು.
Vijaya Karnataka Web vanamahotsav in kanawi village
ಕಣವಿ ಗ್ರಾಮದಲ್ಲಿ ವನಮಹೋತ್ಸವ


ತಾಲೂಕಿನ ಕಣವಿ ಗ್ರಾಮದಲ್ಲಿ ಮುಸ್ಲಿಂ ಖಬರಸ್ಥಾನದಲ್ಲಿ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಅವರು ಮಾತನಾಡಿದರು.

ಪ್ರತಿಯೊಬ್ಬರು ಪರಿಸರ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಪರಿಸರ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ನಡೆಯಬೇಕು. ಆ ನಿಟ್ಟಿನಲ್ಲಿ ಗ್ರಾಮಸ್ಥರು ಸಹ ಕೈಜೋಡಿಸಬೇಕು ಎಂದರು.

ತಾಲೂಕು ನದಾಫ ಪಿಂಜಾರ ಪ್ರಧಾನಕಾರ್ಯದರ್ಶಿ ಎಂ.ಬಿ.ನದಾಫ ಮಾತನಾಡಿ, ಮಳೆ ಕೊರತೆಯಿಂದ ರೈತಾಪಿ ವರ್ಗದವರಿಗೆ ತುಂಬಾ ತೊಂದರೆಯಾಗುತ್ತಿದೆ. ಸಾಕಷ್ಟು ಗಿಡ ಮರಗಳನ್ನು ಬೆಳೆಸಿ ಉಳಿಸಲು ಪ್ರತಿಯೊಬ್ಬ ನಾಗರಿಕರು ಕಾಳಜಿ ವಹಿಸಬೇಕೆಂದರು.

ವ್ಯವಸಾಯ ಸೇವಾ ಸಹಕಾರಿ ಸಂಘ, ಕಣವಿ ಅಧ್ಯಕ್ಷ ಪರಪ್ಪ ಪ. ಕೋಳಿವಾಡ, ಮಲಿಕಸಾಬ ಕಿರೇದಾಳ, ಬಾಬುಸಾಬ ಕಿರೇದಾಳ, ಶರೀಫಸಾಬ ದೊಡ್ಡಮನಿ, ಮಕ್ತುಮಸಾಬ ಸುಂಕಾಪೂರ, ಫಕರುಸಾಬ ನದಾಫ, ಮಲೀಕಸಾಬ ನದಾಫ, ಎಸ್‌.ಎನ್‌.ನದಾಫ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ