ಆ್ಯಪ್ನಗರ

ನೆರೆ ಪರಿಹಾರ ಕಾರ್ಯ ಪರಿಶೀಲನೆ

ಗದಗ: ಮಲಪ್ರಭಾ ನದಿಯಿಂದ ಉಂಟಾದ ಜಿಲ್ಲೆಯ ನೆರೆಪೀಡಿತ ಪ್ರದೇಶಗಳಿಗೆ ಪ್ರವಾಸೊದ್ಯಮ ಇಲಾಖೆಯ ಕಾರ್ಯದರ್ಶಿ ಟಿ.ಕೆ.ಅನೀಲಕುಮಾರ ಮಂಗಳವಾರ ನರಗುಂದ ತಾಲೂಕಿನ ಕೊಣ್ಣೂರು ಸೇರಿದಂತೆ ನೆರೆಪೀಡಿತ ಗ್ರಾಮಗಳಿಗೆ ಭೇಟಿ ನೀಡಿದರು.

Vijaya Karnataka 2 Oct 2019, 4:56 pm
ಗದಗ: ಮಲಪ್ರಭಾ ನದಿಯಿಂದ ಉಂಟಾದ ಜಿಲ್ಲೆಯ ನೆರೆಪೀಡಿತ ಪ್ರದೇಶಗಳಿಗೆ ಪ್ರವಾಸೊದ್ಯಮ ಇಲಾಖೆಯ ಕಾರ್ಯದರ್ಶಿ ಟಿ.ಕೆ.ಅನೀಲಕುಮಾರ ಮಂಗಳವಾರ ನರಗುಂದ ತಾಲೂಕಿನ ಕೊಣ್ಣೂರು ಸೇರಿದಂತೆ ನೆರೆಪೀಡಿತ ಗ್ರಾಮಗಳಿಗೆ ಭೇಟಿ ನೀಡಿದರು.
Vijaya Karnataka Web victim remedial action check
ನೆರೆ ಪರಿಹಾರ ಕಾರ್ಯ ಪರಿಶೀಲನೆ


ಜಿಲ್ಲೆಯ ಕೊಣ್ಣೂರಿನ ಎಪಿಎಂಸಿ ಆವರಣದಲ್ಲಿ121 ಶೆಡ್‌ಗಳಲ್ಲಿತಾತ್ಕಾಲಿಕ ಆಶ್ರಯ ಪಡೆದ ಸಂತ್ರಸ್ತರನ್ನು ಭೇಟಿ ಮಾಡಿ ಅವರ ಅಹವಾಲು ಸ್ವೀಕರಿಸಿದರು. ನರಗುಂದ ತಹಸೀಲ್ದಾರ ಕಚೇರಿಯಲ್ಲಿಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ಜರುಗಿಸಿ ಜಿಲ್ಲೆಯಲ್ಲಿನೆರೆ ಪೀಡಿತ ಗ್ರಾಮಗಳ ನೆರೆ ಸಂತ್ರಸ್ತರಿಗೆ ತಾತ್ಕಾಲಿಕ ಪರಿಹಾರ ವಿತರಣೆ, ಮನೆ ಹಾನಿ ಸೇರಿದಂತೆ ಸರಕಾರಿ ಆಸ್ತಿಗಳ ಹಾನಿಯ ಸಮೀಕ್ಷೆ ಕುರಿತು ಪರಿಶೀಲನೆ ನಡೆಸಿದರು.

ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು, ಮಲಪ್ರಭಾ ನದಿಯ ಹಾಗೂ ಬೆಣ್ಣೆಹಳ್ಳ ಪ್ರವಾಹದಿಂದ ನರಗುಂದ ಹಾಗೂ ರೋಣದ ತಲಾ 16 ಗ್ರಾಮಗಳಲ್ಲಉಂಟಾಗಿದ್ದ ನೆರೆ ಸಂಕಷ್ಟ ಪರಿಸ್ಥಿತಿಯನ್ನು ಜಿಲ್ಲಾಡಳಿತ ನಿಭಾಯಿಸಿದ ಕುರಿತು ಹಾಗೂ ಸಂತ್ರಸ್ತರ ಸ್ಥಳಾಂತರ ಹಾಗೂ ಪರಿಹಾರ ವಿತರಣೆ ಕುರಿತು ಮಾಹಿತಿ ನೀಡಿದರು. ಉಪವಿಭಾಗಾಧಿಕಾರಿ ಪಿ.ಎಸ್‌.ಮಂಜುನಾಥ, ಜಿಲ್ಲಾನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ ಎಸ್‌.ಎನ್‌., ತಹಸೀಲ್ದಾರ ಕೋರಿಶೆಟ್ಟರ, ರೋಣ ತಹಸೀಲ್ದಾರ ಶರಣಮ್ಮ ಕಾರಿ, ಕಂದಾಯ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ