ಆ್ಯಪ್ನಗರ

ಲಕ್ಕುಂಡಿಯಲ್ಲಿ ವಿಜಯೋತ್ಸವ

ಲಕ್ಕುಂಡಿ: ಭಾರತೀಯ ಯೋಧರು ನಡೆಸಿದ ಸರ್ಜಿಕಲ್‌ ದಾಳಿಯಲ್ಲಿ ಉಗ್ರರನ್ನು ಹತ್ಯೆ ಮಾಡಿದಕ್ಕಾಗಿ ಇಲ್ಲಿಯ ಕೆ.ಜಿ.ಎಸ್‌ ಶಾಲಾ ಮಕ್ಕಳು ವಿಜಯೋತ್ಸವ ಆಚರಿಸಿದರು.

Vijaya Karnataka 27 Feb 2019, 5:00 am
ಲಕ್ಕುಂಡಿ: ಭಾರತೀಯ ಯೋಧರು ನಡೆಸಿದ ಸರ್ಜಿಕಲ್‌ ದಾಳಿಯಲ್ಲಿ ಉಗ್ರರನ್ನು ಹತ್ಯೆ ಮಾಡಿದಕ್ಕಾಗಿ ಇಲ್ಲಿಯ ಕೆ.ಜಿ.ಎಸ್‌ ಶಾಲಾ ಮಕ್ಕಳು ವಿಜಯೋತ್ಸವ ಆಚರಿಸಿದರು.
Vijaya Karnataka Web GDG-26LKD3
ಲಕ್ಕುಂಡಿ ಪ್ರಾಥಮಿಕ ಕನ್ನಡ ಹಿರಿಯ ಹೆಣ್ಣು ಮಕ್ಕಳ ಶಾಲೆಯ ವಿದ್ಯಾರ್ಥಿಗಳು ವಿಜಯೋತ್ಸವ ಆಚರಿಸಿದರು.


ದಾಳಿಯ ಸುದ್ದಿ ತಿಳಿದ ತಕ್ಷ ಣವೇ ಶಾಲಾ ಮಕ್ಕಳು ಶಾಲಾ ಆವರಣದಲ್ಲಿ ಸೇರಿ ಭಾರತೀಯ ಧ್ವಜ ಹಿಡಿದು ಭಾರತ ಮಾತಾಕೀ ಜೈ, ಜೈ ಜವಾನ್‌ ಘೋಷಣೆ ಕೂಗುತ್ತಾ ವಿಜಯೋತ್ಸವ ಆಚರಿಸಿದರು. ಇವರೊಂದಿಗೆ ಬಿಜೆಪಿ ಕಾರ್ಯಕರ್ತರು ಜಯಘೋಷ ಕೂಗಿ ವಿಜಯೋತ್ಸವ ಆಚರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಿರುಪಾಕ್ಷಿ ಬೆಟಗೇರಿ, ನಮ್ಮ ಭಾರತೀಯ ಸೈನ್ಯವು 300 ಕ್ಕೂ ಹೆಚ್ಚು ಉಗ್ರರನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿದ್ದು ಇದರಲ್ಲಿ ಪ್ರಧಾನಿ ಮೋದಿಯವರು ಸೈನಿಕರಿಗೆ ಸ್ವಾತಂತ್ರ್ಯ ಕೊಟ್ಟಿದ್ದು ಫಲಪ್ರದವಾಗಿದೆ. ಆದ್ದರಿಂದ ಅವರ ಬೆಂಬಲಕ್ಕೆ ನಾವೆಲ್ಲರೂ ನಿಲ್ಲಬೇಕಾಗಿದೆ ಎಂದರು. ಎಸ್‌ಡಿಎಂಸಿ ಅಧ್ಯಕ್ಷ ರವಿ ಬೂದಿಹಾಳ, ನಾಗಪ್ಪ ಗಡಗಿ, ಈರಣ್ಣ ತಡಹಾಳ, ಶರಣಪ್ಪ ಬಳಿಗೇರ, ಪ್ರವೀಣ ಕಲಾಲ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ