ಆ್ಯಪ್ನಗರ

ಶಿಲ್ಪಕಲೆಗೆ ವಿಶ್ವಕರ್ಮ ಸಮಾಜದ ಕೊಡುಗೆ ಅಪಾರ

ಮುಂಡರಗಿ: ಸರಕಾರ ಆಯಾ ವರ್ಗದ ಕುಲಕಸಬು ಹೊಂದಿದವರನ್ನು ಗೌರವಿಸಲು, ಸಮಾಜಕ್ಕೆ ಕೊಟ್ಟ ಕೊಡುಗೆ ಸ್ಮರಣೆ ಮತ್ತು ಮಾರ್ಗದರ್ಶನಕ್ಕಾಗಿ ಅನೇಕ ಮಹನೀಯರ ಜಯಂತ್ಯುತ್ಸವ ಆಚರಿಸುತ್ತಿದೆ. ಹಾಗೆ ವಿವಿಧ ಕಲೆ, ಸಾಂಸ್ಕೃತಿಕ ಶಿಲ್ಪಕಲೆಗೆ ನೀಡಿದ ವಿಶ್ವಕರ್ಮ ಸಮಾಜದ ಕೊಡುಗೆ ಸ್ಮರಣೀಯ ಎಂದು ತಹಸೀಲ್ದಾರ ಡಾ.ವೆಂಕಟೇಶ ನಾಯ್‌್ಕ ಹೇಳಿದರು.

Vijaya Karnataka 18 Sep 2019, 5:00 am
ಮುಂಡರಗಿ: ಸರಕಾರ ಆಯಾ ವರ್ಗದ ಕುಲಕಸಬು ಹೊಂದಿದವರನ್ನು ಗೌರವಿಸಲು, ಸಮಾಜಕ್ಕೆ ಕೊಟ್ಟ ಕೊಡುಗೆ ಸ್ಮರಣೆ ಮತ್ತು ಮಾರ್ಗದರ್ಶನಕ್ಕಾಗಿ ಅನೇಕ ಮಹನೀಯರ ಜಯಂತ್ಯುತ್ಸವ ಆಚರಿಸುತ್ತಿದೆ. ಹಾಗೆ ವಿವಿಧ ಕಲೆ, ಸಾಂಸ್ಕೃತಿಕ ಶಿಲ್ಪಕಲೆಗೆ ನೀಡಿದ ವಿಶ್ವಕರ್ಮ ಸಮಾಜದ ಕೊಡುಗೆ ಸ್ಮರಣೀಯ ಎಂದು ತಹಸೀಲ್ದಾರ ಡಾ.ವೆಂಕಟೇಶ ನಾಯ್‌್ಕ ಹೇಳಿದರು.
Vijaya Karnataka Web vishwakarma societys contribution to sculpture is immense
ಶಿಲ್ಪಕಲೆಗೆ ವಿಶ್ವಕರ್ಮ ಸಮಾಜದ ಕೊಡುಗೆ ಅಪಾರ

ಇಲ್ಲಿಯ ಕಾಳಿಕಾದೇವಿ ಬಳಿ ಮಂಗಳವಾರ ವಿಶ್ವಕರ್ಮ ಭಾವಚಿತ್ರ ಮೆರವಣಿಗೆ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜ ಪರಿವರ್ತನೆಗೆ ವಿವಿಧ ಸ್ತರದ ಜನಾಂಗ ಮತ್ತು ಸಮುದಾಯಗಳ ಸೇವೆ, ಕೊಡುಗೆ ಅಪಾರವಾದದ್ದು. ಹಿರಿಯರು ಉಳಿಸಿ ಬೆಳೆಸಿದ ಕಲೆ, ಸಾಂಸ್ಕೃತಿಕ, ಸಾಹಿತ್ಯ, ಸಂಪ್ರದಾಯ ನಶಿಸಿ ಹೋಗಬಾರದು ಎಂದು ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳುತ್ತಲೇ ಇದೆ. ಉತ್ತಮ ಶಿಲ್ಪ ಕಲೆಗಳನ್ನು ಹೊಂದಿ ಚಿತ್ತಾರಗಳಲ್ಲಿಆಕರ್ಷಕ ಕಲೆ ಕೆತ್ತಿ ಬಿಂಬಿಸಿದ ವಿಶ್ವಕರ್ಮ ಸಮಾಜ ಬಹುಮುಖ್ಯ ಕೊಡುಗೆ ನೀಡಿದೆ ಎಂದರು.

ಷ.ಬ್ರ.ನಾಗಲಿಂಗ ಸ್ವಾಮಿಗಳು, ಎಪಿಎಂಸಿ ಸದಸ್ಯ ರವೀಂದ್ರ ಉಪ್ಪಿನಬೆಟಗೇರಿ, ಚಂದ್ರಶೇಖರ ಬಡಿಗೇರ, ಮಂಜುನಾಥ ಇಟಗಿ, ಬಿ.ಕೆ.ಕಮ್ಮಾರ, ಕೊಟ್ರೇಶ ಅಂಗಡಿ, ಡಿ.ಡಿ.ಮೋರನಾಳ, ಸೊಲಬಪ್ಪ ಜೋಬಾಳಿ, ಮಂಜು ಮುಧೋಳ, ನಾಗರಾಜ ಅರ್ಕಸಾಲಿ, ಶಿವಾನಂದ ಪತ್ತಾರ, ಈಶಪ್ಪ ಬಡಿಗೇರ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಮೆರವಣಿಗೆಯಲ್ಲಿಡೊಳ್ಳು ಮೇಳದವರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ