ಆ್ಯಪ್ನಗರ

ಎಂಜನಿಯರರ್‌ಗಳಿಗೆ ವಿಶ್ವೇಶ್ವರಯ್ಯನವರು ಮಾದರಿ

ಗದಗ: ಸತ್ಯ, ನಿಷ್ಠೆ, ಪ್ರಾಮಾಣಿಕತೆಯನ್ನು ಉಸಿರನ್ನಾಗಿಸಿಕೊಂಡು ಉತ್ತಮ ಅಭಿಯಂತರರಾಗಿ, ಮೈಸೂರು ರಾಜ್ಯದ ದಿವಾನ್‌ರಾಗಿ, ಅಂದಿನ ಬ್ರಿಟಿಷ್‌ ಸರಕಾರದಿಂದ ಪದವಿ ಪಡೆದ ಸರ್‌ ಎಂ. ವಿಶ್ವೇಶ್ವರಯ್ಯನವರು ಅಭಿಯಂತರರಿಗೆ ಮಾದರಿಯಾಗಿದ್ದಾರೆ ಎಂದು ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಐಲಿ ಹೇಳಿದರು.

Vijaya Karnataka 26 Sep 2019, 5:00 am
ಗದಗ: ಸತ್ಯ, ನಿಷ್ಠೆ, ಪ್ರಾಮಾಣಿಕತೆಯನ್ನು ಉಸಿರನ್ನಾಗಿಸಿಕೊಂಡು ಉತ್ತಮ ಅಭಿಯಂತರರಾಗಿ, ಮೈಸೂರು ರಾಜ್ಯದ ದಿವಾನ್‌ರಾಗಿ, ಅಂದಿನ ಬ್ರಿಟಿಷ್‌ ಸರಕಾರದಿಂದ ಪದವಿ ಪಡೆದ ಸರ್‌ ಎಂ. ವಿಶ್ವೇಶ್ವರಯ್ಯನವರು ಅಭಿಯಂತರರಿಗೆ ಮಾದರಿಯಾಗಿದ್ದಾರೆ ಎಂದು ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಐಲಿ ಹೇಳಿದರು.
Vijaya Karnataka Web 25RUDRAGOUD4_25
ಗದಗ ಶಹಪೂರಪೇಟೆಯಲ್ಲಿರುವ ಕಬ್ಬಿಗರ ಕೂಟದ ಸಾಹಿತ್ಯ ಭವನದಲ್ಲಿಜಿಲ್ಲಾಕಸಾಪದಿಂದ ಜರುಗಿದ ವಾರದ ಸಾಹಿತ್ಯ ಚಿಂತನ ಮಾಲಿಕೆಯಲ್ಲಿಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಐಲಿ ಮಾತನಾಡಿದರು.


ನಗರದ ಶಹಪೂರಪೇಟೆಯಲ್ಲಿರುವ ಕಬ್ಬಿಗರ ಕೂಟದ ಸಾಹಿತ್ಯ ಭವನದಲ್ಲಿಜಿಲ್ಲಾಕಸಾಪದಿಂದ ಜರುಗಿದ ವಾರದ ಸಾಹಿತ್ಯ ಚಿಂತನ ಮಾಲಿಕೆಯಲ್ಲಿಅಭಿಯಂತರರ ದಿನಾಚರಣೆ ಹಾಗೂ ವಿಶ್ವೇಶ್ವರಯ್ಯನವರ ಜೀವನ ಸಾಧನೆ ಕುರಿತು ಉಪನ್ಯಾಸ ನೀಡಿದರು.

ಕಡು ಬಡತನದಲ್ಲಿಹುಟ್ಟಿ ಅಗಾಧವಾದ ಸ್ಮರಣಶಕ್ತಿ ಹೊಂದಿ ಅಂದಿನ ಕಾಲದಲ್ಲಿಪುಣೆಯಲ್ಲಿಎಂಜನಿಯರಿಂಗ್‌ ಪದವಿ ಪಡೆದು ಸಾಮಾಜಿಕ ಕಾರ್ಯಗಳಿಗೆ ತಮ್ಮನ್ನು ಅರ್ಪಿಸಿಕೊಂಡು ಅನೇಕ ಜನಪರ ಕೆಲಸಗಳನ್ನು ನಿರ್ವಹಿಸಿ ಭಾರತದಲ್ಲಿಅಷ್ಟೇ ಅಲ್ಲದೆ, ವಿದೇಶಗಳಲ್ಲಿಯೂ ಕೂಡ ಸೇವೆ ಸಲ್ಲಿಸಿದ ವಿಶ್ವೇಶ್ವರಯ್ಯನವರು ಆಂಗ್ಲರ ಪ್ರೀತಿಗೆ ಪಾತ್ರರಾಗಿ ಜನರಿಗೆ ಉಪಯುಕ್ತವಾದ ಕೆಲಸಗಳಲ್ಲಿತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪ್ರಾಮಾಣಿಕತೆಯೇ ಅವರ ಉಸಿರಾಗಿತ್ತು. ಅವರ ಕಾರ್ಯಶೈಲಿ ಇಂದಿನ ನವ ಅಭಿಯಂತರರಿಗೆ ಮಾರ್ಗಸೂಚಿ. ಅಷ್ಟೇ ಅಲ್ಲದೆ ಅವರು ಎಂಜಿನಿಯರ್‌ ಪಿತಾಮಹರಾಗಿದ್ದಾರೆ ಎಂದರು.

ಆರ್‌ ಶ್ರೀನಿವಾಸ ಮಾತನಾಡಿದರು.
ಜಿಲ್ಲಾಕಸಾಪ ಅಧ್ಯಕ್ಷ ಡಾ.ಶರಣು ಗೋಗೇರಿ ಅಧ್ಯಕ್ಷತೆ ವಹಿಸಿ,ಪರಿಷತ್‌ ಕೇವಲ ಕೆಲವೆ ಕೆಲವು ಜನರ ಸ್ವತ್ತಾಗದೇ ಇದರಲ್ಲಿಎಲ್ಲರಿಗೂ ಮುಕ್ತ ಅವಕಾಶವಿದೆ. ಎಲ್ಲವರ್ಗದ ಜನರನ್ನು ಸಾಹಿತ್ಯದೆಡೆಗೆ ಕರೆತರುವ ಪ್ರಯತ್ನ ಆಗುತ್ತಿದೆ. ಆದ್ದರಿಂದ ಅಭಿಯಂತರ ವರ್ಗದವರು ಜಿಲ್ಲಾಕಸಾಪ ಕಾರ್ಯಕ್ರಮಗಳಿಗೆ ಮೇಲಿಂದ ಮೇಲೆ ಆಗಮಿಸುತ್ತಿರಬೇಕು ಎಂದರು.

ರತ್ನಕ್ಕ ಪಾಟೀಲ, ಅ.ಓಂ ಪಾಟೀಲ, ಜಯಶ್ರೀ ಚಂದ್ರಶೇಖರ, ಮಂಗಳಾ ಕಿತ್ತೂರ, ಬಿ.ಎಸ್‌. ಹಿಂಡಿ, ಬಸವರಾಜ ಬಣ್ಣದಬಾವಿ, ಬಿ.ಎ. ಕರಮುಡಿ, ಮೋಹನ ಮುಧೋಳ, ರಾಜಶೇಖರ ಕರಡಿ, ಜಿ.ಎ. ಪಾಟೀಲ, ಎಚ್‌.ಎಸ್‌. ದಳವಾಯಿ, ರಮೇಶ ಉಳ್ಳಾಗಡ್ಡಿ, ರವಿರಾಜ ಪವಾರ್‌, ವಿ.ಜಿ. ಸೋಮರಡ್ಡಿ, ಅಂದಾನೆಪ್ಪ ವಿಭೂತಿ, ದತ್ತಪ್ರಸನ್ನ ಪಾಟೀಲ, ಸಿ.ಕೆ. ಕೇಸರಿ, ಎಸ್‌.ಎಫ್‌. ಭಜಂತ್ರಿ, ಎ.ಎಸ್‌. ಮಕಾನದಾರ, ವಿ.ಆಯ್‌. ಪ್ರೇಮಾ, ಆರ್‌.ಡಿ. ಕಪ್ಪಲಿ, ಮಂಗಳಗೌರಿ ಹಿರೇಮಠ, ಜ್ಯೋತಿ ಹೇರಲಗಿ, ಸಂತೋಷ ಕುರಿ, ಆನಂದ ಕಲ್ಮಠ ಇದ್ದರು.

ಅಕ್ಷತಾ ಬಣ್ಣದಬಾವಿ ಪ್ರಾರ್ಥಿಸಿದರು. ಶಿಲ್ಪಾ ಕುರಿ ಕವನ ವಾಚನ ಮಾಡಿದರು. ಬಿ.ಎಫ್‌. ಪೂಜಾರ ಸ್ವಾಗತಿಸಿದರು. ಅಶೋಕ ಹಾದಿ ನಿರೂಪಿಸಿದರು. ಪ್ರಕಾಶ ಮಂಗಳೂರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ